ಹಾಲಿ ಸಂಸದೆ, ಕೇಂದ್ರ ಸಚಿವೆ ಮನೇಕಾ ಗಾಂಧಿಯವರ ಅಖಾಡವಾಗಿರುವ ಉತ್ತರ ಪ್ರದೇಶದ ಫಿಲಿಭಿತ್ ಕ್ಷೇತ್ರದಲ್ಲಿ ಈ ಬಾರಿ ಅಭ್ಯರ್ಥಿಯನ್ನು ಬದಲು ಮಾಡಲಾಗಿದೆ. ಮನೇಕಾ ಗಾಂಧಿ ಬದಲಾಗಿ ಪುತ್ರ ವರುಣ್ ಗಾಂಧಿ ಸ್ಪರ್ಧಿಸುತ್ತಿದ್ದಾರೆ. ಮನೇಕಾ ಗಾಂಧಿಯವರು ಫಿಲಿಬಿತ್‌ಗೆ ಸಮೀಪವಿರುವ ಸುಲ್ತಾನ್‌ಪುರದಲ್ಲಿ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ.
1989, 1996, 1998, 1999, 2004ರಲ್ಲಿ ಮನೇಕಾ ಗಾಂಧಿಯವರು ಜನತಾ ದಳ, ಸ್ವತಂತ್ರ, ಬಿಜೆಪಿ ಅಭ್ಯರ್ಥಿಯಾಗಿ ಫಿಲಿಬಿತ್ ಕ್ಷೇತ್ರದಲ್ಲಿ ಸ್ಪರ್ಧಿಸಿ ಗೆದ್ದಿದ್ದಾರೆ. ಈ ರೀತಿಯ ಕ್ಷೇತ್ರ ಬದಲಾವಣೆ ಬಿಜೆಪಿಯ ಸ್ಥಳೀಯ ನಾಯಕರಲ್ಲಿ ಸಂತೋಷ ತಂದಿಲ್ಲ. ಮನೇಕಾ ಮತ್ತು ವರುಣ್ ಗಾಂಧಿ ಹೊರಗಿನವರು ಎಂಬ ಭಾವನೆ ಅವರಲ್ಲಿದೆ.
ಕರ್ನಾಟಕದ ಮಂಡ್ಯದಲ್ಲಿ ಬಿಜೆಪಿ ಬೆಂಬಲಿತ ಪಕ್ಷೇತರ ಅಭ್ಯರ್ಥಿ ಸುಮಲತಾ ಹೆಸರಿನಲ್ಲಿ ನಾಲ್ವರು ಸ್ಪರ್ಧಿಸಿದ್ದಂತೆ ಇಲ್ಲಿಯೂ ಕೂಡ ವರುಣ್ ಗಾಂಧಿ ವಿರುದ್ಧ ಹರ್ಯಾಣದ ರೇವಾರಿಯಿಂದ ಮತ್ತೂಬ್ಬ ವರುಣ್ ಗಾಂಧಿಯೂ ಬಿಜೆಪಿ ಅಭ್ಯರ್ಥಿಗೆ ಸವಾಲೊಡ್ಡುತ್ತಿದ್ದಾರೆ. ಈ ಮೂಲಕ ಮತ ವಿಭಜನೆಯ ಪ್ರಯತ್ನ ನಡೆದಿದೆ. ಈ ಬಾರಿ ಎಸ್‌ಪಿ ಮತ್ತು ಬಿಎಸ್‌ಪಿ ಜತೆಗೂಡಿ ಉತ್ತರ ಪ್ರದೇಶದಲ್ಲಿ ಚುನಾವಣೆ ಎದುರಿಸುತ್ತಿವೆ. ಹೀಗಾಗಿ, ಬಿಎಸ್‌ಪಿಗೆ ನೀಡಬೇಕಾಗಿರುವ ಮತಗಳು, ಎಸ್‌ಪಿ ಅಭ್ಯರ್ಥಿಗೆ ಹೋಗಲಿ ರುವುದು ಖಚಿತ. ಇದು ಅವರಿಗೆ ಪ್ರತಿಕೂಲವಾಗಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ದಶಕ ಗಳಿಂದ ಈ ಕ್ಷೇತ್ರದಲ್ಲಿ ಬಿಜೆಪಿ ಗೆಲ್ಲುತ್ತಿದ್ದರೂ, ಅಭಿವೃದ್ಧಿಯ ಕಾಮಗಾರಿಗಳು ಆಗಿಲ್ಲ ಎನ್ನುತ್ತಿವೆ ವಿಪ ಕ್ಷಗಳು. ಕ್ಷೇತ್ರದಲ್ಲಿ ನಿರುದ್ಯೋಗ ಸಮಸ್ಯೆಯೇ ಹೆಚ್ಚಿನ ಪ್ರಮಾ ಣದಲ್ಲಿ ಕಾಡುತ್ತಿದೆ. ಸಮಾಜವಾದಿ ಪಕ್ಷದಿಂದ ಹೇಮ ರಾಜ್ ವರ್ಮಾ ವರುಣ್‌ರ ಪ್ರಮುಖ ಎದುರಾಳಿ.
ಅಮೇಠಿ, ರಾಯ್‌ಬರೇಲಿ ಬಳಿಕ ಸುಲ್ತಾನ್‌ಪುರ್ ಮತ್ತು ಫಿಲಿಭಿತ್ ಕೂಡ ಗಾಂಧಿ-ನೆಹರೂ ವಂಶದ ಮತ್ತೂಂದು ಕವಲು ಕುಟುಂಬವಾಗಿರುವ ಮನೇಕಾ, ವರುಣ್‌ರ ಪ್ರಭಾವಿ ಕ್ಷೇತ್ರವೆಂದು ವಿಶ್ಲೇಷಿಸಲಾಗುತ್ತಿದೆ. 1957, 1962, 1967ರ ಚುನಾವಣೆಯಲ್ಲಿ ಪ್ರಜಾ ಸೋಶಿಯಲಿಸ್ಟ್ ಪಕ್ಷ ಗೆದ್ದಿತ್ತು. 1989ರ ಬಳಿಕ ಮತ್ತೆ ಈ ಕ್ಷೇತ್ರದಲ್ಲಿ ಕಾಂಗ್ರೆಸೇತರ ಪಕ್ಷಗಳು ಗೆಲುವು ಸಾಧಿಸಲಾರಂಭಿಸಿದವು.
ಜಾತಿ ಲೆಕ್ಕಾಚಾರ ನೋಡುವುದಿದ್ದರೆ, ಲೋಧ್ ಸಮುದಾಯ 3 ಲಕ್ಷ, 2 ಲಕ್ಷ ಮಂದಿ ಎಸ್‌ಸಿ, 50 ಸಾವಿರ ಮಂದಿ ಯಾದವ ಸಮುದಾಯದ ಮತಗಳು ಇವೆ. ಜತೆಗೆ ಎರಡು ಲಕ್ಷದಷ್ಟು ಕುರ್ಮಿ ಜನಾಂಗದ ಮತಗಳೂ ಇವೆ.
2014ರ ಚುನಾವಣೆ
ಮನೇಕಾ ಗಾಂಧಿ (ಬಿಜೆಪಿ)
5,46, 934
ಬುದ್ಧ್ಸೇನ್ ವರ್ಮಾ (ಎಸ್‌ಪಿ)
2,39, 822