Advertisement
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಶ್ವರಪ್ಪ ಬುದ್ಧಿವಂತರಿದ್ದಾರೆ. ಪಕ್ಷ ಬೆಳೆಸಲು ಅವರ ಯೋಗದಾನ ದೊಡ್ಡದಿದೆ. ಅವರು ಆ ರೀತಿ ಮಾಡುವುದಿಲ್ಲ. ಅವರಿಗೆ ಟಿಕೆಟ್ ತಪ್ಪಲು ಬೇರೆ ಕಾರಣ ಇದೆ. ಅದನ್ನು ಇದರ ಜತೆ ಮಿಕ್ಸ್ ಮಾಡಲು ಆಗಲ್ಲ. ಅವರ ಜತೆ ಹಿರಿಯರು ಮಾತನಾಡುತ್ತಾರೆ. ಸಮಸ್ಯೆ ಬಗೆಹರಿಯುತ್ತದೆ. ನಾನು ಅವರ ಮನೆಗೆ ಹೋಗಿದ್ದೆ. ನಾನು ಅವರಿಗಿಂತ ವಯಸ್ಸಿನಲ್ಲಿ ಕಿರಿಯ. ಅವರ ಜತೆ ಬೆಳೆದಿದ್ದೇನೆ. ನಾನು ಏನು ಮಾಡಬಹುದು ಅದನ್ನು ಮಾಡಿದ್ದೇನೆ. ಇಲ್ಲೇ ಇರುವಂತೆ ಹೇಳಿದ್ದೇನೆ ಎಂದರು.
ಈಶ್ವರಪ್ಪ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡುವ ನಂಬಿಕೆ ಇಲ್ಲ. ಅವರು ಸಾವಿರಾರು ಕಾರ್ಯಕರ್ತರನ್ನು ಬೆಳೆಸಿದ್ದಾರೆ. ಸಂದಿಗ್ಧ ಪರಿಸ್ಥಿತಿಯಲ್ಲಿ ಹೀಗೆ ಹೇಳಿದ್ದಾರೆ ಅಷ್ಟೇ ಎಂದು ಶಾಸಕ ಎಸ್.ಎನ್.ಚನ್ನಬಸಪ್ಪ ತಿಳಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಶ್ವರಪ್ಪ ಪಕ್ಷಕ್ಕೆ ಪರಿಹಾರ ಕೊಡುವವರು. ಪಕ್ಷಕ್ಕೆ ಸಮಸ್ಯೆ ಮಾಡುತ್ತಾರೆ ಅನ್ನಿಸುವುದಿಲ್ಲ. ಅವರ ಜತೆ ರಾಜ್ಯ, ರಾಷ್ಟ್ರೀಯ ನಾಯಕರು ಮಾತನಾಡುತ್ತಾರೆ. ಅವರು ಪಕ್ಷದ ವಿರುದ್ಧ ನಡೆದುಕೊಳ್ಳುವುದಿಲ್ಲ ಅನ್ನುವ ವಿಶ್ವಾಸ ಇದೆ. ಎಂತೆಂಥಾ ಪರಿಸ್ಥಿತಿ ಬಂದಾಗಲೂ ಅವರು ಬಿಜೆಪಿ ಬಿಟ್ಟಿಲ್ಲ. ಅವರ ನೋವಿಗೆ ಸ್ಪಂದನೆ ಮಾಡಲು ನಾನು ಸಣ್ಣವನು. ಅವರು ನಮ್ಮ ಪಕ್ಷದಲ್ಲಿ ಹಿರಿಯರಾಗಿ ಇರುತ್ತಾರೆ. ಹಿರಿಯರ ನೋವಿಗೆ ನಮ್ಮ ಪಕ್ಷದ ನಾಯಕರು ಸಮಾಧಾನ ಮಾಡುತ್ತಾರೆ. ಮೋದಿ ಬಗ್ಗೆ ಅಪಾರ ಗೌರವ ಇಟ್ಟುಕೊಂಡಿರುವ ಈಶ್ವರಪ್ಪ ಮೋದಿ ಕಾರ್ಯಕ್ರಮಕ್ಕೆ ಬರುವ ವಿಶ್ವಾಸ ಇದೆ ಎಂದರು.