Advertisement

ಮಾರ್ಚ್‌ ಮೊದಲ ವಾರ ಲೋಕಸಭಾ ಚುನಾವಣೆ ದಿನಾಂಕ ಪ್ರಕಟ

11:53 AM Jan 18, 2019 | udayavani editorial |

ಹೊಸದಿಲ್ಲಿ : ಚುನಾವಣಾ ಆಯೋಗ ಮಾರ್ಚ್‌ ಮೊದಲ ವಾರದಲ್ಲಿ ಲೋಕಸಭಾ ಚುನಾವಣಾ ದಿನಾಂಕವನ್ನು ಪ್ರಕಟಿಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ. 

Advertisement

ಈಗಿನ ಲೋಕಸಭೆಯ ಅವಧಿಯು ಜೂನ್‌ 3ಕ್ಕೆ ಕೊನೆಗೊಳ್ಳಲಿದೆ.

ಚುನಾವಣಾ ಆಯೋಗವು ಪ್ರಕೃತ 2019ರ ಲೋಕಸಭಾ ಚುನಾವಣೆಯ ಹಂತಗಳ ಸಂಖ್ಯೆ ಮತ್ತು ಅದು ಒಟ್ಟಾರೆಯಾಗಿ ಒಳಗೊಳ್ಳುವ ತಿಂಗಳುಗಳನ್ನು  ನಿರ್ಧರಿಸುವ ಪ್ರಕ್ರಿಯೆಯಲ್ಲಿ ವ್ಯಸ್ತವಾಗಿದೆ ಎಂದು ಮೂಲಗಳು ತಿಳಿಸಿವೆ. 

ಚುನಾವಣಾ ಹಂತಗಳ ಸಂಖ್ಯೆಯ ನಿರ್ಧಾರವು ಭದ್ರತಾ ಪಡೆಗಳ ಲಭ್ಯತೆ ಮತ್ತು ಇತರ ಆವಶ್ಯಕತೆಗಳ ಪೂರೈಕೆಯನ್ನು ಅವಲಂಬಿಸಿದೆ. 

ಲೋಕಸಭಾ ಚುನಾವಣೆಯೊಂದಿಗೇ ಆಂಧ್ರ ಪ್ರದೇಶ, ಒಡಿಶಾ, ಸಿಕ್ಕಿಂ ಮತ್ತು ಅರುಣಾಚಲ ಪ್ರದೇಶದ ವಿಧಾನಸಭಾ ಚುನಾವಣೆಗಳನ್ನು ನಡೆಸುವ ಸಾಧ್ಯತೆಯೂ ಇದೆ. ಈ ನಿಟ್ಟಿನಲ್ಲಿ ಅದು ಪೂರ್ವ ನಿದರ್ಶನಗಳನ್ನು ಪರಿಗಣಿಸಲಿದೆ. 

Advertisement

ಜಮ್ಮು ಕಾಶ್ಮೀರ ವಿಧಾನ ಸಭೆಯು ಕಳೆದ 2018ರ ನವೆಂಬರ್‌ನಲ್ಲಿ  ವಿಸರ್ಜನೆಗೊಂಡಿರುವುದರಿಂದ ಆರು ತಿಂಗಳ ಒಳಗೆ, ಎಂದರೆ ಮೇ ತಿಂಗಳ ಒಳಗಾಗಿ ಚುನಾವಣೆಯನ್ನು ನಡೆಸುವ ಬಾಧ್ಯತೆ ಕೂಡ ಆಯೋಗದ ಮೇಲಿದೆ. 

ಸಾಮಾನ್ಯ ಸನ್ನಿವೇಶದಲ್ಲಿ ಜಮ್ಮು ಕಾಶ್ಮೀರ ವಿಧಾನಸಭೆಯ ಅವಧಿಯು ಆರು ವರ್ಷಗಳದ್ದಾಗಿರುವುದರಿಂದ ಅದರ ಗಡುವು 2021ರ ಮಾರ್ಚ್‌ 16ಕ್ಕೆ ಮುಗಿಯಲಿದೆ. ದೇಶದ ಇತರ ರಾಜ್ಯ ವಿಧಾನಸಭೆಗಳು ಮತ್ತು ಲೋಕಸಭೆಯ ಕಾರ್ಯಾವಧಿ ಐದು ವರ್ಷಗಳದ್ದಾಗಿರುತ್ತದೆ. 

ಸಿಕ್ಕಿಂ ಅಸೆಂಬ್ಲಿ ಅವಧಿ 2019ರ ಮೇ 17ಕ್ಕೆ ಮುಗಿಯುತ್ತದೆ; ಆಂಧ್ರ ಪ್ರದೇಶ, ಒಡಿಶಾ ಮತ್ತು ಅರುಣಾಚಲ ಪ್ರದೇಶದ ಅಸೆಂಬ್ಲಿ ಅವಧಿ ಅನುಕ್ರಮವಾಗಿ ಜೂನ್‌ 18, ಜೂನ್‌ 11 ಮತ್ತು ಜೂನ್‌ 1ಕ್ಕೆ ಮುಗಿಯುತ್ತದೆ. 

Advertisement

Udayavani is now on Telegram. Click here to join our channel and stay updated with the latest news.

Next