Advertisement

Lok Sabha Election: ಬಿಜೆಪಿಗೆ ಸ್ಥಾನ ಕುಸಿತವಾದರೂ ವೋಟು ಹೆಚ್ಚಳ

11:55 PM Jun 04, 2024 | Team Udayavani |

ನವದೆಹಲಿ: 2024ರ ಚುನಾವಣೆಯಲ್ಲಿ ಬಿಜೆಪಿ ಗಳಿಸಿರುವ ಸ್ಥಾನದಲ್ಲಿ ಕುಸಿತ ಕಂಡಿದ್ದರೂ ಗಳಿಸಿರುವ ಮತಗಳ ಪ್ರಮಾಣ ಹೆಚ್ಚಾಗಿದೆ. ಕಳೆದ ಚುನಾವಣೆಯಲ್ಲಿ ಬಿಜೆಪಿ ಶೇ.31ರಷ್ಟು ಮತ ಗಳಿಸಿತ್ತು. ಈ ಬಾರಿ ಅದು ಶೇ.36.61ಕ್ಕೆ ಏರಿಕೆಯಾಗಿದೆ.

Advertisement

ಕಾಂಗ್ರೆಸ್‌ ಈ ಬಾರಿ 47 ಕ್ಷೇತ್ರಗಳನ್ನು ಹೆಚ್ಚುವರಿಯಾಗಿ ಗಳಿಸಿಕೊಂಡಿದ್ದು, ಮತದ ಪ್ರಮಾಣವೂ ಶೇ.2ರಷ್ಟು ಏರಿಕೆಯಾಗಿದೆ. ದಕ್ಷಿಣದಲ್ಲಿ ಬಿಜೆಪಿ ಮತ ಗಳಿಕೆ ಪ್ರಮಾಣ ಏರಿಕೆಯಾಗಿದೆ. ಹೀಗಾಗಿ ಸ್ಥಾನಗಳಲ್ಲಿ ಕುಸಿತವಾಗಿದ್ದರೂ ಶೇಕಡವಾರು ಮತ ಪ್ರಮಾಣ ಹೆಚ್ಚಾಗಿದೆ. ಈ ಬಾರಿ ಬಿಜೆಪಿ ಹಲವಾರು ಅಭ್ಯರ್ಥಿಗಳು ಕಡಿಮೆ ಅಂತರದಿಂದ ಗೆಲವು ಸಾಧಿಸಿರುವುದು ಸಹ ಮತದ ಪ್ರಮಾಣ ಹೆಚ್ಚಳವಾಗಲು ಕಾರಣವಾಗಿದೆ.

ಈ ಬಾರಿಯ ಭರ್ಜರಿ ಏರಿಕೆ ಕಂಡಿರುವ ಕಾಂಗ್ರೆಸ್‌ ಪಕ್ಷ ಕಳೆದ ಚುನಾವಣೆಗಿಂತ ಶೇ.2ರಷ್ಟು ಹೆಚ್ಚು ಮತ ಪಡೆದುಕೊಂಡಿದೆ. 2019ರಲ್ಲಿ ಕಾಂಗ್ರೆಸ್‌ ಶೇ.19.49ರಷ್ಟು ಮತ ಪಡೆದುಕೊಂಡಿತ್ತು. ಈ ವರ್ಷ ಶೇ.21.25ರಷ್ಟು ಮತ ಪಡೆದುಕೊಂಡಿದೆ.

Advertisement

Udayavani is now on Telegram. Click here to join our channel and stay updated with the latest news.

Next