Advertisement
ಹಾವೇರಿ: ಲೋಕಸಭೆ ಚುನಾವಣೆ ಸಮೀಪಿಸುತ್ತಿದ್ದಂತೆ ರಾಜಕೀಯ ಚಟುವಟಿಕೆಗಳು ಗರಿಗೆದರಿದ್ದು, ವಿವಿಧ ಪಕ್ಷಗಳ ಮುಖಂಡರನ್ನು ಸೆಳೆಯುವ ಕಸರತ್ತು ನಡೆದಿದೆ. ಈ ಮೂಲಕ ಅಖಾಡ ಸಜ್ಜುಗೊಳಿಸಲಾಗುತ್ತಿದೆ. ಈ ಬಾರಿ ಲೋಕಸಭೆ ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂದು ಸಂಸದ ಶಿವಕುಮಾರ ಉದಾಸಿ ಬಹಿರಂಗ ಹೇಳಿಕೆ ನೀಡಿರುವ ಕಾರಣ ಬಿಜೆಪಿಯಲ್ಲಿ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಾಗಿದೆ. “ನಾನು ಆಕಾಂಕ್ಷಿಯಲ್ಲ, ಪಕ್ಷ ಸೂಚಿಸುವ ಅಭ್ಯರ್ಥಿ ಪರ ಕೆಲಸ ಮಾಡೋಣ’ ಎನ್ನುತ್ತಿರುವ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರು ಕ್ಷೇತ್ರದಲ್ಲಿ ಸದ್ದಿಲ್ಲದೇ ಚುನಾವಣಾ ತಯಾರಿಯಲ್ಲಿ ತೊಡಗಿಕೊಂಡಿದ್ದಾರೆ ಎಂಬ ಮಾತುಗಳು ಬಿಜೆಪಿ ವಲಯದಲ್ಲಿ ಹರಿದಾಡುತ್ತಿವೆ.
ಸೇರಿದ್ದು, ಇದಕ್ಕೆ ಪುಷ್ಠಿ ನೀಡಿದಂತಾಗಿದೆ. ಈಗ ಮತ್ತೊಬ್ಬ ಪ್ರಭಾವಿ ಪಂ ಸಾಲಿ ಮುಖಂಡನನ್ನು ಬೊಮ್ಮಾಯಿ ಬಿಜೆಪಿಗೆ
ಕರೆತರುವ ಪ್ರಯತ್ನ ನಡೆಸಿದ್ದಾರೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಶಿಗ್ಗಾವಿ ಕ್ಷೇತ್ರದಲ್ಲಿ ಕಾಂಗ್ರೆಸ್ ಟಿಕೆಟ್ ಸಿಗದೇ ತಮ್ಮ
ವಿರುದ್ಧ ಜೆಡಿಎಸ್ ಅಭ್ಯರ್ಥಿಯಾಗಿದ್ದ ಶಶಿಧರ ಯಲಿಗಾರ್ ಅವರನ್ನು ಬಿಜೆಪಿಗೆ ಕರೆತರಲಿದ್ದಾರೆ ಎನ್ನಲಾಗುತ್ತಿದೆ. ಈ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಹಾವೇರಿ ಕ್ಷೇತ್ರದಿಂದ ಬೊಮ್ಮಾಯಿ ಕಣಕ್ಕಿಳಿಯುವುದು ಪಕ್ಕಾ. ಅದೇ ಕಾರಣಕ್ಕೆ ಅನ್ಯ ಪಕ್ಷದ ಮುಖಂಡರನ್ನು ಪಕ್ಷಕ್ಕೆ ಕರೆತಂದು ಅಖಾಡ ಸಿದ್ಧಪಡಿಸಿಕೊಳ್ಳುತ್ತಿದ್ದಾರೆ ಎಂಬ ಮಾತುಗಳು ಅವರ ಆಪ್ತ ವಲಯದಲ್ಲೇ
ಕೇಳಿಬರುತ್ತಿದೆ.
Related Articles
ಶಶಿಧರ ಯಲಿಗಾರ್ ಲೋಕಸಭಾ ಚುನಾವಣೆ ಹೊಸ್ತಿಲಲ್ಲಿ ಬಿಜೆಪಿ ಸೇರಲು ಮುಂದಾಗಿದ್ದು, ಬಸವರಾಜ್ ಬೊಮ್ಮಾಯಿ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಜತೆಗೆ ಬಿ.ಎಸ್.ಯಡಿಯೂರಪ್ಪ ಅವರನ್ನೂ ಭೇಟಿ ಮಾಡಿದ್ದಾರೆ. ಎರಡ್ಮೂರು ದಿನಗಳಲ್ಲಿ ಅಧಿಕೃತವಾಗಿ ಬಿಜೆಪಿ ಸೇರಲಿದ್ದಾರೆ ಎನ್ನಲಾಗುತ್ತಿದೆ.
Advertisement
16 ಆಕಾಂಕ್ಷಿಗಳ ಹೆಸರು ಶಿಫಾರಸುಈ ನಡುವೆ ಹಾವೇರಿ ಕ್ಷೇತ್ರದಿಂದ 16 ಮಂದಿ ಆಕಾಂಕ್ಷಿಗಳ ಪಟ್ಟಿಯನ್ನು ರಾಜ್ಯ ಘಟಕಕ್ಕೆ ಶಿಫಾರಸು ಮಾಡಲಾಗಿದೆ. ಈ ಪಟ್ಟಿಯಲ್ಲಿ ಮಾಜಿ ಸಚಿವ ಬಿ.ಸಿ.ಪಾಟೀಲ, ಮಾಜಿ ಜಿಲ್ಲಾಧ್ಯಕ್ಷ ಸಿದ್ಧರಾಜ ಕಲಕೋಟಿ, ರಾಜ್ಯ ಉಪಾಧ್ಯಕ್ಷ ಡಾ|ಬಸವರಾಜ ಕೇಲಗಾರ, ಕಾಂತೇಶ ಈಶ್ವರಪ್ಪ, ಮಂಜುನಾಥ ಮಡಿವಾಳರ, ಶರಣಬಸಪ್ಪ ಅಂಗಡಿ, ಡಾ| ಮಹೇಶ ನಾಲವಾಡ, ಭೋಜರಾಜ ಕರೂದಿ, ಡಾ| ಶಿವಪ್ರಕಾಶ ತಂಡಿ, ಪವನಕುಮಾರ ಮಲ್ಲಾಡದ, ಮುರಿಗೆಪ್ಪ ಶೆಟ್ಟರ್, ಪಾಲಾಕ್ಷಗೌಡ ಪಾಟೀಲ, ಕೆ.
ಶಿವಲಿಂಗಪ್ಪ, ಜಗದೀಶ ಬಸೇಗಣ್ಣಿ, ನಾಗನಗೌಡ ನೀರಲಗಿ ಪಾಟೀಲ, ಡಾ| ಶೇಖರ ಸಜ್ಜನರ ಅವರ ಹೆಸರಿದೆ ಎನ್ನುತ್ತಿವೆ ಬಿಜೆಪಿ ಮೂಲಗಳು. ಕೇಂದ್ರದಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಬೇಕು ಎಂಬ ಉದ್ದೇಶದೊಂದಿಗೆ ಯಾವುದೇ ಷರತ್ತಿಲ್ಲದೇ ಬಿಜೆಪಿ ಸೇರಿದ್ದೇನೆ. ನನ್ನ ರಾಜಕೀಯ ಅನುಭವ ಧಾರೆ ಎರೆದು ಕ್ಷೇತ್ರದಲ್ಲಿ ಪಕ್ಷ ಸಂಘಟಿಸುವ ಮೂಲಕ ಕಾರ್ಯಕರ್ತರಿಗೆ ಮಾರ್ಗದರ್ಶನ ನೀಡುತ್ತೇನೆ.
ಮನೋಹರ ತಹಶೀಲ್ದಾರ್, ಮಾಜಿ ಸಚಿವ *ವೀರೇಶ ಮಡ್ಲೂರ