Advertisement

Lok Sabha Election; ಮತದಾನ ಮಾಡಿದ ಬಳಿಕ 7 ಮಂದಿ ಸಾವು

11:20 PM Apr 26, 2024 | Team Udayavani |

ಬೆಂಗಳೂರು: ರಾಜ್ಯದ ವಿವಿಧೆಡೆ ನಡೆದ ಪ್ರತ್ಯೇಕ ಘಟನೆಗಳಲ್ಲಿ ಮತದಾನ ಮಾಡಿದ ಕೆಲವೇ ಗಂಟೆಗಳಲ್ಲಿ ಒಟ್ಟು 7ಮಂದಿ ಮೃತಪಟ್ಟಿದ್ದಾರೆ. ಹೃದಯಾಘಾತ, ವಯೋಸಹಜ ಅನಾರೋಗ್ಯ ಮುಂತಾದವು ಸಾವಿಗೆ ಕಾರಣವಾಗಿವೆ.

Advertisement

ಮಂಡ್ಯ ಜಿಲ್ಲೆಯ ಕೆ.ಆರ್‌. ಪೇಟೆ ತಾಲೂಕಿನ ಅಗ್ರಹಾರ ಬಾಚಹಳ್ಳಿ ಗ್ರಾಮದ ಗ್ರಾ.ಪಂ. ಮಾಜಿ ಸದಸ್ಯ ಸತ್ತೇಗೌಡ ದೊಡ್ಡೇಗೌಡ (103) ಅವರು ಮತದಾನ ಮಾಡಿದ ಕೆಲವು ಗಂಟೆಗಳಲ್ಲೇ ವಯೋಸಹಜ ಅನಾರೋಗ್ಯದಿಂದ ನಿಧನ ಹೊಂದಿದರು.

ಮಂಡ್ಯ ಜಿಲ್ಲೆ ಮದ್ದೂರು ಎಚ್‌.ಕೆ.ವಿ.ನಗರದ ಕುಂದೂರಯ್ಯ (92) ಕೂಡ ಮತ ಹಾಕಿ ಮೃತಪಟ್ಟರು. ಪುತ್ರನ ಜತೆಗೆ ಮತಗಟ್ಟೆಗೆ ಆಗಮಿಸಿ ಮತ ಚಲಾಯಿಸಿ ಮನೆಗೆ ತೆರಳಿದ ಸ್ವಲ್ಪ ಹೊತ್ತಿನಲ್ಲೇ ಕೊನೆಯುಸಿರೆಳೆದರು.

ತುಮಕೂರು ನಗರದ ಎಸ್‌.ಎಸ್‌.ಪುರಂ ನಿವಾಸಿ ರಮೇಶ್‌(54) ಮತ ಚಲಾಯಿಸಿ ಮನೆಗೆ ಬಂದಾಗ ಹೃದಯಾಘಾತವಾಗಿ ಮೃತಪಟ್ಟರು. ಬಟ್ಟೆ ಅಂಗಡಿ ವ್ಯಾಪಾರಿಯಾಗಿದ್ದರು.

ಮೈಸೂರು ಜಿಲ್ಲೆ ಹುಣಸೂರು ತಾಲೂಕಿನ ಬಿಳಿಕೆರೆ ಹೋಬಳಿಯ ತಿಪ್ಪೂರಿನಲ್ಲಿ ಪುಟ್ಟಮ್ಮ (90) ಮತದಾನ ಮಾಡಿದ ಗಂಟೆಯೊಳಗೆ ಮೃತರಾದರು. ಇವರು ಪುತ್ರನ ಸಹಾಯದೊಂದಿಗೆ ಮತ ಕೇಂದಕ್ಕೆ ತೆರಳಿ ಮತ ಚಲಾಯಿಸಿದ ಬಳಿಕ ಮನೆಗೆ ತೆರಳಿ ಸ್ನಾನಕ್ಕೆ ಹೋಗಿದ್ದಾಗ ಕುಸಿದು ಬಿದ್ದು ಮೃತಪಟ್ಟರು.

Advertisement

ದೊಡ್ಡಬಳ್ಳಾಪುರದಲ್ಲಿ ನಗರದಲ್ಲಿ ಮತದಾನ ಕಾರ್ಯದಲ್ಲಿ ಭಾಗಿಯಾಗಿದ್ದ ಮಹಿಳಾ ಅಧಿಕಾರಿ ಕವಿತಾ (35) ಅಸ್ವಸ್ಥಗೊಂಡು ಕುಸಿದು ಬಿದ್ದು, ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ.

ಚಿತ್ರದುರ್ಗ ಚಳ್ಳಕೆರೆ ತಾಲೂಕಿನ ಹೊಟ್ಟೆಪ್ಪನ ಹಳ್ಳಿ ಸಮೀಪದ ಮತಗಟ್ಟೆಯಲ್ಲಿ ಎಪಿಆರ್‌ಒ ಆಗಿ ಚುನಾವಣ ಕರ್ತವ್ಯಕ್ಕೆ ಹಾಜರಾಗಿದ್ದ ಶಿಕ್ಷಕಿ ಯಶೋದ‌ಮ್ಮ(58) ಹೃದಯಾಘಾತದಿಂದ ನಿಧನ ಹೊಂದಿದ್ದಾರೆ.

ಮಡಿಕೇರಿಯ ಪೊನ್ನಂಪೇಟೆ ತಾಲೂಕಿನ ಕೊಂಗಣ ಗ್ರಾಮದ ಪದಾರ್ಥಿ ಮನೋಹರ್‌ (58) ಅವರು ಮತದಾನ ಮುಗಿಸಿ ಮನೆಗೆ ತೆರಳುತ್ತಿದ್ದಾಗ ಕುಸಿದು ಬಿದ್ದು ಆಸ್ಪತ್ರೆಯಲ್ಲಿ ಮೃತಪಟ್ಟರು.

 

 

Advertisement

Udayavani is now on Telegram. Click here to join our channel and stay updated with the latest news.

Next