Advertisement
ಏಪ್ರಿಲ್ 11 ರಿಂದ ಮೇ 19ರ ವರೆಗೆ ಒಟ್ಟಾರೆ ಏಳು ಹಂತಗಳಲ್ಲಿ 543 ಕ್ಷೇತ್ರಗಳಿಗೆ ಮತದಾನ ನಡೆಯಲಿದ್ದು, ಮೇ 23ಕ್ಕೆ ಫಲಿತಾಂಶ ಪ್ರಕಟವಾಗಲಿದೆ. ಕರ್ನಾಟಕದಲ್ಲಿ ಎರಡು ಹಂತದ ಚುನಾವಣೆ ನಡೆಯಲಿದೆ. ಏಪ್ರಿಲ್ 18 ಉತ್ತರ ಕರ್ನಾಟಕ ಮತ್ತು ಏಪ್ರಿಲ್ 23 ದಕ್ಷಿಣ ಕರ್ನಾಟಕದ ಜಿಲ್ಲೆಗಳಲ್ಲಿ ಮತದಾನವಾಗಲಿದೆ. ಕೇಂದ್ರ ಚುನಾವಣಾ ಆಯುಕ್ತ ಸುನಿಲ್ ಅರೋರಾ ಅವರು, ಭಾನುವಾರ ಸಂಜೆ ದೆಹಲಿಯ ವಿಜ್ಞಾನ ಭವನದಲ್ಲಿ ಚುನಾವಣಾ ವೇಳಾಪಟ್ಟಿ ಪ್ರಕಟಿಸಿದ್ದಾರೆ. ಅತ್ತ ದಿನಾಂಕ ಘೋಷಿಸುತ್ತಿದ್ದಂತೆ, ದೇಶಾದ್ಯಂತ ನೀತಿ ಸಂಹಿತೆಯೂ ಜಾರಿಯಾಗಿದೆ.
ಲೋಕಸಭೆ ಚುನಾವಣೆ ಜತೆ ಜತೆಗೇ ಆಂಧ್ರ ಪ್ರದೇಶ, ಸಿಕ್ಕಿಂ, ಅರುಣಾಚಲ ಪ್ರದೇಶ ಮತ್ತು ಒಡಿಶಾ ವಿಧಾನಸಭೆಗಳ ಚುನಾವಣೆಯೂ ನಡೆಯಲಿದೆ ಎಂದು ಅವರು ಮಾಹಿತಿ ನೀಡಿದ್ದಾರೆ. ಸದ್ಯ ಜಮ್ಮು ಮತ್ತು ಕಾಶ್ಮೀರದಲ್ಲಿ ರಾಷ್ಟ್ರಪತಿ ಆಳ್ವಿಕೆ ಜಾರಿಯಲ್ಲಿದ್ದು, ಇಲ್ಲೂ ಚುನಾವಣೆ ನಡೆಯಲಿದೆ ಎಂದೇ ಹೇಳಲಾಗಿತ್ತು. ಆದರೆ, ಈ ರಾಜ್ಯದ ಚುನಾವಣಾ ದಿನಾಂಕ ಘೋಷಣೆ ಮಾಡಿಲ್ಲ. ಆದರೆ, ಇದೇ ರಾಜ್ಯದ ಅನಂತನಾಗ್ ಲೋಕಸಭಾ ಕ್ಷೇತ್ರದ ಚುನಾವಣೆ ಮೂರು ಹಂತಗಳಲ್ಲಿ ನಡೆಯಲಿದೆ. ಭದ್ರತಾ ದೃಷ್ಟಿಯಿಂದ ಈ ನಿರ್ಧಾರಕ್ಕೆ ಬರಲಾಗಿದೆ ಎಂದು ಸಿಇಸಿ ಹೇಳಿದೆ. ಸಾಮಾಜಿಕ ಜಾಲತಾಣದ ಮಾಹಿತಿ ಬೇಕು
ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಲಿರುವ ಎಲ್ಲ ಅಭ್ಯರ್ಥಿಗಳು ತಮ್ಮ ತಮ್ಮ ಸಾಮಾಜಿಕ ಜಾಲತಾಣ ಖಾತೆಗಳ ಮಾಹಿತಿಯನ್ನು ನೀಡಬೇಕು. ಜತೆಗೆ ಈ ಜಾಲತಾಣಗಳಲ್ಲಿ ಜಾಹೀರಾತು ನೀಡುವ ಮುನ್ನ ಚುನಾವಣಾ ಆಯೋಗದ ಒಪ್ಪಿಗೆ ಪಡೆಯಬೇಕು ಎಂದು ಖಡಕ್ಕಾಗಿ ಸೂಚನೆ ನೀಡಲಾಗಿದೆ. ಈ ಮಧ್ಯೆ, ನಾಮಪತ್ರ ಸಲ್ಲಿಕೆ ವೇಳೆ ಫಾರ್ಮ್ 26 ಅನ್ನು ಪೂರ್ಣಗೊಳಿಸದೇ ಸಲ್ಲಿಸಿದಲ್ಲಿ ಅಂಥವುಗಳನ್ನು ತಿರಸ್ಕರಿಸಲಾಗುವುದು ಎಂದೂ ಇಸಿಐ ಸ್ಪಷ್ಟವಾಗಿ ಹೇಳಿದೆ.
Related Articles
ಯಾರಾದರೂ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಮಾಡಿದಲ್ಲಿ ಇಂಥವರ ವಿರುದ್ಧ ಸಾರ್ವಜನಿಕರೇ ದೂರು ನೀಡಬಹುದಾಗಿದೆ. ಇದಕ್ಕಾಗಿಯೇ ಚುನಾವಣಾ ಆಯೋಗ ಇ-ವಿಜಿಲ್ ಎಂಬ ಆ್ಯಪ್ ಪರಿಚಯಿಸಿದೆ. ಎಲ್ಲಾ ಮತಗಟ್ಟೆಗಳ ವ್ಯಾಪ್ತಿಯಲ್ಲಿನ ಮತದಾರರು ಈ ಆ್ಯಪ್ ಬಳಕೆ ಮಾಡಿಕೊಂಡು ದೂರು ನೀಡಿದಲ್ಲಿ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಸಿಇಸಿ ಹೇಳಿದೆ. ಇದು ಜನರಿಗೆ ನೀಡಲಾದ ದೊಡ್ಡ ಸ್ವಾವಲಂಬಿ ಸಾಧನ ಎಂದು ಸಿಇಸಿ ಬಣ್ಣಿಸಿದ್ದಾರೆ.
Advertisement
18ರಿಂದಲೇ ನಾಮಪತ್ರ ಸಲ್ಲಿಕೆಇದೇ ತಿಂಗಳ 18 ರಿಂದಲೇ ಚುನಾವಣಾ ಹಬ್ಬ ಶುರುವಾಗಲಿದೆ. ಏಪ್ರಿಲ್ 11 ರಂದು ನಡೆಯಲಿರುವ ಮೊದಲ ಹಂತದ ಚುನಾವಣೆಗಾಗಿ ಮಾ.18 ರಂದು ಅಧಿಸೂಚನೆ ಹೊರಬೀಳಲಿದೆ. ನಾಮಪತ್ರ ಸಲ್ಲಿಕೆಗೆ ಮಾ. 25 ಕಡೇ ದಿನವಾಗಿದ್ದರೆ, ವಾಪಸ್ ಪಡೆಯಲು ಮಾ. 28 ಅಂತಿಮ ದಿನವಾಗಿದೆ. ಕರ್ನಾಟಕದಲ್ಲಿ ಏಪ್ರಿಲ್ 18ರ ಎರಡನೇ ಹಂತದಲ್ಲಿ 14 ಕ್ಷೇತ್ರಗಳ ಚುನಾವಣೆ ನಡೆಯಲಿದ್ದು, ನಾಮಪತ್ರ ಸಲ್ಲಿಕೆಗೆ ಮಾ. 26 ಕಡೇ ದಿನವಾಗಿದೆ. ನಾಮಪತ್ರ ವಾಪಸ್ ಪಡೆಯಲು ಮಾ. 29 ಅಂತಿಮ ದಿನವಾಗಿದೆ. ಎಲ್ಲಿ, ಹೇಗೆ?
ಒಂದು ಹಂತ: ಆಂಧ್ರ ಪ್ರದೇಶ, ಅರುಣಾಚಲ ಪ್ರದೇಶ,ಗೋವಾ, ಗುಜರಾತ್, ಹರ್ಯಾಣ,ಹಿಮಾಚಲ ಪ್ರದೇಶ, ಕೇರಳ, ಮೇಘಾಲಯ,ಮಿಜೋರಾಂ, ನಾಗಾಲ್ಯಾಂಡ್, ಪಂಜಾಬ್,ಸಿಕ್ಕಿಂ, ತೆಲಂಗಾಣ, ತಮಿಳುನಾಡು,ಉತ್ತರಾಖಂಡ, ಅಂಡಮಾನ್ ಆ್ಯಂಡ್ ನಿಕೋಬಾರ್, ದಾದ್ರಾ ಮತ್ತು ನಗರ್‌ಹವೇಲಿ,ದಮನ್ ಆ್ಯಂಡ್ ದಿಯು, ಲಕ್ಷ್ಯದ್ವೀಪ್, ದೆಹಲಿ, ಪುದುಚೇರಿ, ಚಂಡೀಗಡ.
ಎರಡು ಹಂತ:ಕರ್ನಾಟಕ, ಮಣಿಪುರ, ರಾಜಸ್ಥಾನ, ತ್ರಿಪುರ
ಮೂರು ಹಂತ: ಅಸ್ಸಾಂ, ಛತ್ತೀಸ್‌ಗಡ
ನಾಲ್ಕು ಹಂತ: ಜಾರ್ಖಂಡ್, ಮಧ್ಯಪ್ರದೇಶ,ಮಹಾರಾಷ್ಟ್ರ, ಒಡಿಶಾ
ಐದು ಹಂತ: ಜಮ್ಮು ಮತ್ತು ಕಾಶ್ಮೀರ
ಏಳು ಹಂತ: ಉತ್ತರ ಪ್ರದೇಶ, ಬಿಹಾರ, ಪಶ್ಚಿಮ ಬಂಗಾಳ
(ಯಾವ ರಾಜ್ಯದಲ್ಲೂ 6 ಹಂತಗಳಲ್ಲಿ ಚುನಾವಣೆ ಇಲ್ಲ)