Advertisement
ಜಮ್ಮು ಕಾಶ್ಮೀರದ ಅನಂತನಾಗ್ ಕ್ಷೇತ್ರವೂ ಸೇರಿದಂತೆ ದೇಶದೆಲ್ಲೆಡೆ ಒಟ್ಟು ಎಂಟು ರಾಜ್ಯಗಳ 71 ಲೋಕಸಭಾ ಸ್ಥಾನಗಳಿಗಾಗಿ ಈ ಹಂತದಲ್ಲಿ ಮತದಾನ ನಡೆಯುತ್ತಿದೆ. ಒಟ್ಟು 943 ಅಭ್ಯರ್ಥಿಗಳು ಕಣದಲ್ಲಿದ್ದು ಅವರ ಭವಿಷ್ಯವನ್ನು ಆ ಭಾಗಗಳ ಮತದಾರರು ಇಂದು ನಿರ್ಧರಿಸಲಿದ್ದಾರೆ.
ಮಧ್ಯಾಹ್ನ 3.00 ಗಂಟೆಗಳವರೆಗಿನ ವರದಿಗಳ ಪ್ರಕಾರ ದೇಶದೆಲ್ಲೆಡೆ ನಾಲ್ಕನೇ ಹಂತದಲ್ಲಿ 49.53% ಮತದಾನವಾಗಿರುವ ಕುರಿತು ವರದಿಯಾಗಿದೆ. ಪಶ್ಚಿಮ ಬಂಗಾಳದಲ್ಲಿ ಮತದಾರರ ಉತ್ಸಾಹ ಜೋರಾಗಿದ್ದು ಅಲ್ಲಿ ಇದುವರೆಗೆ 66.01% ಮತದಾನ ದಾಖಲುಗೊಂಡಿದೆ.
Related Articles
Advertisement
– ಪಶ್ಚಿಮ ಬಂಗಾಲದ ಮುರ್ಷಿದಾಬಾದ್ ಜಿಲ್ಲೆಯ ಬೆಲ್ಡಾಂಗದಲ್ಲಿ ಮೂರು ಮತದಾನ ಕೇಂದ್ರಗಳಿಗೆ ಅಪರಿಚಿತ ದುಷ್ಕರ್ಮಿಗಳು ಪೆಟ್ರೋಲ್ ಬಾಂಬ್ ಎಸೆದಿರುವ ಕುರಿತಾಗಿ ವರದಿಯಾಗಿದೆ. ಈ ಸಂದರ್ಭದಲ್ಲಿ ಸ್ಥಳೀಯರು ಪೊಲೀಸರ ಸಹಾಯಕ್ಕಾಗಿ ಯಾಚಿಸಿದರೂ ಪೊಲೀಸರು ಯಾವುದೇ ಕ್ರಮ ಕೈಗೊಳ್ಳಲಿಲ್ಲ ಎಂಬ ಆರೋಪ ಕೇಳಿ ಬರುತ್ತಿದೆ.
ದುಷ್ಕರ್ಮಿಗಳು ತಮ್ಮ ಮುಖಗಳನ್ನು ಮುಚ್ಚಿಕೊಂಡಿದ್ದರು ಮತ್ತು ಕರ್ತವ್ಯದಲ್ಲಿದ್ದ ಕೆಲವು ಪೊಲೀಸರೂ ಸಹ ದುಷ್ಕರ್ಮಿಗಳಿಗೆ ಸಹಾಯ ಮಾಡಿದ್ದಾರೆ ಎಂಬ ಆರೋಪ ಸ್ಥಳಿಯರಿಂದ ಕೇಳಿಬಂದಿದೆ ಎಂದು ಖಾಸಗಿ ಸುದ್ದಿ ಮಾಧ್ಯಮವೊಂದು ವರದಿ ಮಾಡಿದೆ.
– ನಾಲ್ಕನೇ ಹಂತದ ಲೋಕ ಸಮರದಲ್ಲಿ ಮಧ್ಯಾಹ್ನದವರೆಗೆ ಒಟ್ಟಾರೆ 38.63% ಮತದಾನ ಆಗಿದೆ ಎಂಬ ಮಾಹಿತಿ ಲಭ್ಯವಾಗಿದೆ.
– ಬಿಹಾರದಲ್ಲಿ 37.71%, ಮಧ್ಯಪ್ರದೇಶದಲ್ಲಿ 43.44%, ಮಹಾರಾಷ್ಟ್ರದಲ್ಲಿ 29.93%, ಜಮ್ಮು ಮತ್ತು ಕಾಶ್ಮೀರದಲ್ಲಿ 06.66%, ಜಾರ್ಖಂಡ್ ನಲ್ಲಿ 44.90%, ರಾಜಸ್ಥಾನದಲ್ಲಿ 44.62%, ಉತ್ತರಪ್ರದೇಶದಲ್ಲಿ 34.42%, ಪಶ್ಚಿಮ ಬಂಗಾಲದಲ್ಲಿ 52.37% ಹಾಗೂ ಒಡಿಸ್ಸಾದಲ್ಲಿ 35.79% ಮತದಾನವಾಗಿದೆ.
– ಬಾಲಿವುಡ್ ನಟ ಅಮಿತಾಭ್ ಬಚ್ಚನ್, ಪತ್ನಿ ಜಯಾ ಬಚ್ಚನ್, ಪುತ್ರ ಅಭಿಷೇಕ್ ಬಚ್ಚನ್, ಸೊಸೆ ಐಶ್ವರ್ಯಾ ರೈ ಬಚ್ಚನ್ ಸಹಿತ ಜುಹೂವಿನಲ್ಲಿರುವ ಮತದಾನ ಕೇಂದ್ರದಲ್ಲಿ ತಮ್ಮ ಮತ ಚಲಾಯಿಸಿದರು.
– ಶಿವಸೇನಾ ಮುಖ್ಯಸ್ಥ ಉದ್ಭವ್ ಠಾಕ್ರೆ ಅವರು ಪತ್ನಿ ರಶ್ಮಿ ಠಾಕ್ರೆ ಮತ್ತು ಪುತ್ರ ಆದಿತ್ಯ ಠಾಕ್ರೆ ಅವರೊಂದಿಗೆ ಮುಂಬಯಿ ಗಾಂಧಿನಗರ ಕ್ಷೇತ್ರದಲ್ಲಿ ಮತದಾನ ಮಾಡಿದರು. ಈ ಸಂದರ್ಭದಲ್ಲಿ ಉತ್ತರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪೂನಮ್ ಮಹಾಜನ್ ಅವರು ಜೊತೆಯಲ್ಲಿದ್ದರು.
– ಪಶ್ಚಿಮ ಬಂಗಾಲ ಮತದಾನ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಭಾರತೀಯ ಜನತಾ ಪಕ್ಷದ ನಿಯೋಗ ಚುನಾವಣಾ ಆಯೋಗವನ್ನು ಭೇಟಿ ಮಾಡಲು ನಿರ್ಧರಿಸಿದೆ. ಈ ನಿಯೋಗದಲ್ಲಿ ಮುಕ್ತಾರ್ ಅಬ್ಟಾಸ್ ನಖ್ವೀ, ವಿಜಯ್ ಗೋಯಲ್, ಮತ್ತು ಅನಿಲ್ ಬಲುನಿ ಇರಲಿದ್ದಾರೆ.
– ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹಲೋಟ್ ಅವರು ತಮ್ಮ ಕುಟುಂಬ ಸದಸ್ಯರೊಂದಿಗೆ ಜೋಧ್ ಪುರದಲ್ಲಿ ಮತ ಚಲಾಯಿಸಿದರು. – ಬಿಜೆಪಿ ಅಭ್ಯರ್ಥಿ ಬಾಬುಲ್ ಸುಪ್ರಿಯಾ ವಿರುದ್ಧ ತೃಣಮೂಲ ಕಾಂಗ್ರೆಸ್ ಲಿಖೀತ ದೂರೊಂದನ್ನು ಸಲ್ಲಿಸಿದೆ ಮತ್ತು ಜೆಮುವ್ವಾದಲ್ಲಿರುವ ಮತದಾನ ಕೇಂದ್ರದ ಟಿಎಂಸಿ ಬೂತ್ ಏಜೆಂಟ್ ಜೊತೆ ಅನುಚಿತವಾಗಿ ವರ್ತಿಸಿದ್ದಾರೆ ಎಂದು ಈ ದೂರಿನಲ್ಲಿ ಆರೋಪಿಸಲಾಗಿದೆ.
– ನಾಲ್ಕನೇ ಹಂತದ ಲೋಕ ಸಮರದಲ್ಲಿ 11 ಗಂಟೆಯವರೆಗೆ ಒಟ್ಟಾರೆ 14.59% ಮತದಾನ ಆಗಿದೆ ಎಂದು ತಿಳಿದುಬಂದಿದೆ. – ಬಿಹಾರದಲ್ಲಿ 13.95%, ಮಧ್ಯಪ್ರದೇಶದಲ್ಲಿ 18.66%, ಮಹಾರಾಷ್ಟ್ರದಲ್ಲಿ 8.15%, ಜಮ್ಮು ಮತ್ತು ಕಾಶ್ಮೀರದಲ್ಲಿ 3.69%, ಜಾರ್ಖಂಡ್ ನಲ್ಲಿ 20.87%, ರಾಜಸ್ಥಾನದಲ್ಲಿ 15.08%, ಉತ್ತರಪ್ರದೇಶದಲ್ಲಿ 17.69%, ಪಶ್ಚಿಮ ಬಂಗಾಲದಲ್ಲಿ 21.69% ಹಾಗೂ ಒಡಿಸ್ಸಾದಲ್ಲಿ 10% ಮತದಾನವಾಗಿದೆ.
– ಮುಂಬಯಿಯಲ್ಲಿ ಮಹಿಳೆಯೊಬ್ಬರನ್ನು ಆಕೆಯ ಕುಟುಂಬ ಸದಸ್ಯರು ಮತದಾನ ಕೇಂದ್ರಕ್ಕೆ ಮತಗಟ್ಟೆ ಸಿಬ್ಬಂದಿ ನೆರವಿನಿಂದ ಮತದಾನ ಮಾಡಲು ಕರೆದೊಯ್ಯುತ್ತಿರುವುದು.
– ನಟಿ ಪ್ರಿಯಾಂಕ ಛೋಪ್ರಾ ಜೊನಾಸ್ ಅವರು ಮುಂಬಯಿಯಲ್ಲಿ ಇಂದು ತಮ್ಮ ಮತವನ್ನು ಚಲಾಯಿಸಿದರು. – ಬೆಳಿಗ್ಗೆ 10ಗಂಟೆಯವರೆಗೆ ಒಟ್ಟಾರೆ 10.42% ಮತದಾನ ಆಗಿರುವ ಕುರಿತಾಗಿ ಮಾಹಿತಿ ಲಭ್ಯವಾಗಿದೆ. – ಬಿಹಾರದಲ್ಲಿ 10.76%, ಮಧ್ಯಪ್ರದೇಶದಲ್ಲಿ 11.45%, ಮಹಾರಾಷ್ಟ್ರದಲ್ಲಿ 6.66%, ಜಮ್ಮು ಮತ್ತು ಕಾಶ್ಮೀರದಲ್ಲಿ 0.68%, ಜಾರ್ಖಂಡ್ ನಲ್ಲಿ 12%, ರಾಜಸ್ಥಾನದಲ್ಲಿ 12.22%, ಉತ್ತರಪ್ರದೇಶದಲ್ಲಿ 9.87%, ಪಶ್ಚಿಮ ಬಂಗಾಲದಲ್ಲಿ 16.89% ಹಾಗೂ ಒಡಿಸ್ಸಾದಲ್ಲಿ 8.34% ಮತದಾನವಾಗಿದೆ.
– ಬಾಲಿವುಡ್ ನಟಿ ಸೋನಾಲಿ ಬೇಂದ್ರೆ ಮತದಾನ ಮಾಡಿದರು. ಮತ್ತು ಎಲ್ಲರೂ ತಮ್ಮ ಮತದಾನದ ಹಕ್ಕನ್ನು ಅವಶ್ವವಾಗಿ ಚಲಾಯಿಸುವಂತೆ ನಟಿ ಇದೇ ಸಂದರ್ಭದಲ್ಲಿ ಕರೆ ನೀಡಿದರು. – ಪಶ್ವಿಮ ಬಂಗಾಲದ ಅಸಾನ್ಸೋಲ್ ಮತಗಟ್ಟೆಯಲ್ಲಿ ತೃಣಮೂಲ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಭದ್ರತಾ ಸಿಬ್ಬಂದಿಗಳ ನಡುವೆ ಘರ್ಷಣೆ ಸಂಭವಿಸಿದೆ. ಈ ಸಂದರ್ಭದಲ್ಲಿ ಅಸಾನ್ಸೋಲ್ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಾಬುಲ್ ಸುಪ್ರಿಯೋ ಅವರ ಕಾರನ್ನು ಸಹ ಟಿಎಂಸಿ ಕಾರ್ಯಕರ್ತರು ಹಾನಿ ಮಾಡಿದ್ದಾರೆ.
– ಪಶ್ಚಿಮ ಬಂಗಾಲದ ಜೆಮುವ್ವ ಎಂಬಲ್ಲಿ ತೃಣಮೂಲ ಕಾಂಗ್ರೆಸ್ ಹಾಗೂ ಭಾರತೀಯ ಜನತಾ ಪಕ್ಷದ ಕಾರ್ಯಕರ್ತರ ನಡುವೆ ತೀವ್ರ ಘರ್ಷಣೆ ಉಂಟಾಗಿದೆ. ಆ ಭಾಗದ ಮತದಾರರು ಮತಬಹಿಷ್ಕಾರ ಮಾಡಿರುವ ವಿಷಯಕ್ಕೆ ಈ ಘರ್ಷಣೆ ಸಂಭವಿಸಿದೆ ಎಂದು ತಿಳಿದು ಬಂದಿದೆ. ಘರ್ಷಣೆಯನ್ನು ನಿಯಂತ್ರಿಸಲು ಪೊಲೀಸರು ಲಾಠಿ ಬೀಸಿದ್ದಾರೆ. ಸ್ಥಳಕ್ಕೆ ಕ್ಷಿಪ್ರ ಕಾರ್ಯಾಚರಣಾ ದಳ ದೌಡಾಯಿಸಿದೆ.
– ವಾಣಿಜ್ಯ ನಗರಿ ಮುಂಬಯಿಯ ಎಲ್ಲಾ ನಾಲ್ಕು ಲೋಕಸಭಾ ಸ್ಥಾನಗಳಿಗೆ ಇಂದೇ ಮತದಾನ ನಡೆಯುತ್ತಿದೆ. ಸದಾ ಜಂಜಾಟದಲ್ಲೇ ಇರುವ ಮಹಾನಗರಿ ಮುಂಬಯಿಯ ಮತದಾರರು ಇಂದು ತಮ್ಮ ಹಕ್ಕನ್ನು ಚಲಾಯಿಸಲು ಉತ್ಸಾಹದಿಂದ ಮತದಾನದಲ್ಲಿ ಪಾಲ್ಗೊಳ್ಳುತ್ತಿದ್ದಾರೆ. – ಆದಿ ಗೋದ್ರೇಜ್, ಕುಮಾರ ಮಂಗಲಂ ಬಿರ್ಲಾ, ಅನಿಲ್ ಅಂಬಾನಿ, ಮುಖೇಶ್ ಅಂಬಾನಿ, ಪ್ರಿಯಾ ದತ್, ಉದ್ಭವ್ ಠಾಕ್ರೆ, ರಾಮದಾಸ ಅಠಾವಳೆ, ಮಿಲಿಂದ್ ದೇವೋರಾ ಸೇರಿದಂತೆ ಹಲವು ಪ್ರಮುಖರು ಮುಂಬಯಿಯಲ್ಲಿಂದು ತಮ್ಮ ಹಕ್ಕನ್ನು ಚಲಾಯಿಸಲಿದ್ದಾರೆ. – ರಾಜಸ್ಥಾನದ 13 ಲೋಕಸಭಾ ಕ್ಷೇತ್ರಗಳಿಗೆ ಇಂದು ಮತದಾನ ನಡೆಯುತ್ತಿದೆ.
ಉತ್ತರ ಮುಂಬಯಿ ಕ್ಷೇತ್ರದಲ್ಲಿ ಕಾಂಗ್ರೆಸ್ ನ ಊರ್ಮಿಳಾ ಮಾತೊಂಡ್ಕರ್ ಮತ್ತು ಬಿಜೆಪಿಯ ಗೋಪಾಲ ಶೆಟ್ಟಿ ನಡುವಿನ ಹಣಾಹಣಿ ಕುತೂಹಲಕ್ಕೆ ಕಾರಣವಾಗಿದೆ, ಕಾನ್ಪುರದಲ್ಲಿ ಕಾಂಗ್ರೆಸ್ ನ ಶ್ರೀಪ್ರಕಾಶ್ ಜೈಸ್ವಾಲ್, ಬಿಜೆಪಿಯ ಸತ್ಯದೇವ್ ಪಚೌರಿ ಮತ್ತು ಸಮಾಜವಾದಿ ಪಕ್ಷದ ರಾಮ್ ಕುಮಾರ್ ನಡುವಿನ ಪೈಪೋಟಿ ಕುತೂಹಲ ಮೂಡಿಸಿದೆ. – ಇನ್ನು ದಕ್ಷಿಣ ಮುಂಬಯಿಯಲ್ಲಿ ಕಾಂಗ್ರೆಸ್ ನ ಮಿಲಿಂದ್ ದೇವೊರಾ ಹಾಗೂ ಶಿವಸೇನೆಯ ಅರವಿಂದ್ ಸಾವಂತ್ ನಡುವೆ ನೇರ ಪೈಪೋಟಿ ಇದೆ. – ಇನ್ನು ಬಿಹಾರದ ಬೆಗುಸರಾಯ್ ಕ್ಷೇತ್ರದಲ್ಲಿ ಕನ್ಹಯ್ಯಾ ಕುಮಾರ್ ಅವರು ಸಿಪಿಐ (ಎಂ)ನಿಂದ ಕಣಕ್ಕಿಳಿದಿದ್ದು ಅವರು ಎದುರಾಳಿಯಾಗಿ ಬಿಜೆಪಿಯ ಗಿರಿರಾಜ್ ಸಿಂಗ್ ಇದ್ದಾರೆ ಹಾಗೂ ಇವರಿಗೆ ಆರ್.ಜೆ.ಡಿ.ಯ ತನ್ವೀರ್ ಹಸನ್ ಸ್ಪರ್ಧೆ ನೀಡುತ್ತಿದ್ದಾರೆ. – ಇನ್ನು ಪಶ್ಚಿಮ ಬಂಗಾಲದ ಬಿರ್ಭುಮ್ ಕ್ಷೇತ್ರದಲ್ಲಿ ತೃಣಮೂಲ ಕಾಂಗ್ರೆಸ್ ನ ಸತಾಬ್ದಿ ರಾಯ್ ಮತ್ತು ಬಿಜೆಪಿಯ ದೂಧ್ ಕುಮಾರ್ ಮಂಡಲ್ ನಡುವೆ ಹಣಾಹಣಿ ಇದೆ.
– ಉತ್ತರಪ್ರದೇಶದ ಉನ್ನಾವ್ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸಾಕ್ಷಿ ಮಹಾರಾಜ್ ಅವರು ತಮ್ಮ ಹಕ್ಕನ್ನು ಚಲಾಯಿಸಿದರು.
#Mumbai: Reserve Bank of India (RBI) Governor Shaktikanta Das casts his vote at polling booth number 40 & 41 at Peddar Road. #LokSabhaElections2019 pic.twitter.com/i2TFjtuJxP