Advertisement
ಚಿಕ್ಕಬಳ್ಳಾಪುರದಲ್ಲಿ ಬುಧವಾರ ತಮ್ಮನ್ನು ಬೇಟಿಯಾದ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚಿಕ್ಕಬಳ್ಳಾಪುರಕ್ಕೆ ಪವನ್ ಕಲ್ಯಾಣ್ ಬಂದರೂ ಸುಧಾಕರ್ ಪರ ವೋಟ್ ಹಾಕಿ ಅಂತ ಕೇಳುವುದಿಲ್ಲ. ನನ್ನ ಬಗ್ಗೆಯಾಗಲಿ ಅಥವಾ ರಕ್ಷಾ ರಾಮಯ್ಯ ಬಗ್ಗೆ ಅವರು ಮಾತನಾಡುವುದಿಲ್ಲ ಎಂದರು.
ಅವರು ಇರಬಹುದು. ಆದರೆ ಅವರೊಂದಿಗೆ ವೈಯಕ್ತಿಕ ಸ್ನೇಹ ಇದೆ. ರಾಜಕೀಯವಾಗಿ ಅವರು ಚಿಕ್ಕಬಳ್ಳಾಪುರಕ್ಕೆ ಬರುತ್ತಿದ್ದಾರೆ. ಕೇಂದ್ರದ ಬಿಜೆಪಿ ನಾಯಕರ ಮೇಲೆ ಒತ್ತಡ ಹೇರಿ ಅವರನ್ನು ಇಲ್ಲಿಗೆ ಕರೆಸಲಾಗುತ್ತಿದೆ ಎಂದು ಶಾಸಕ ಪ್ರದೀಪ್ ಈಶ್ವರ್ ಹೇಳಿದರು. ಈ ಹಿಂದೆ ಚುನಾವಣೆ ಪೂರ್ವದಲ್ಲಿ ಮಾರುಕಟ್ಟೆಯಲ್ಲಿ ನಾನು ಮೂಟೆ ಹೊತ್ತಿದ್ದಕ್ಕೆ ಚುನಾವಣೆಯಲ್ಲಿ ಗೆದ್ದ ಮೇಲೆ ಚಿರಂಜೀವಿರವರು ನನ್ನನ್ನು ಮನೆಗೆ ಕರೆಸಿ ಊಟ ಕೊಡಿಸಿ ಟಿಪ್ಸ್ ಕೊಟ್ಟು ಕಳಿಸಿದ್ದಾರೆಂದು ಶಾಸಕ ಪ್ರದೀಪ್ ಈಶ್ವರ್ ಹೇಳಿದರು.