ಸಾಂವಿಧಾನಿಕ ಕರ್ತವ್ಯವಾಗಿದೆ. ಹಾಗಾಗಿ 2026ರಲ್ಲಿ ಕೇಂದ್ರ ಸರಕಾರ ಕ್ಷೇತ್ರಗಳ ಪುನರ್ವಿಂಗಡಣೆ ಕಾರ್ಯಕೈಗೊಳ್ಳಲಿದೆ. ಆದರೆ ಕರ್ನಾಟಕ ಸೇರಿ ಕೆಲವು ರಾಜ್ಯಗಳು ಪುನರ್ವಿಂಗಡಣೆಯನ್ನು ವಿರೋಧಿಸುತ್ತಿವೆ. ದಕ್ಷಿಣ ರಾಜ್ಯಗಳಿಂದ ಆಕ್ಷೇಪ ಏಕೆ, ಅವು ಎದುರಿಸುತ್ತಿರುವ ಆತಂಕಗಳೇನು ಇತ್ಯಾದಿ ಮಾಹಿತಿ ಇಲ್ಲಿದೆ.
Advertisement
ಉತ್ತರ- ದಕ್ಷಿಣ ಭಾರತದ ನಡುವೆ ಹೆಚ್ಚಲಿದೆ ಅಂತರಗುರುವಾರವಷ್ಟೇ ಕರ್ನಾಟಕ ಸರಕಾರವು ವಿಧಾನಸಭೆಯಲ್ಲಿ 2026ರ ಲೋಕಸಭೆ ಮತ್ತು ವಿಧಾನಸಭೆ ಕ್ಷೇತ್ರ ಪುನರ್ವಿಂಗಡಣೆ ವಿರೋಧಿಸಿ ನಿರ್ಣಯವನ್ನು ಅಂಗೀಕರಿಸಿದೆ. ತಮಿಳುನಾಡು ಸರಕಾರವು ಕಳೆದ ಫೆಬ್ರವರಿಯಲ್ಲಿ ಇದೇ ರೀತಿಯ ನಿರ್ಣಯ ಅಂಗೀಕರಿಸಿತ್ತು. ತೆಲಂಗಾಣ ಮತ್ತು ಕೇರಳ ರಾಜ್ಯಗಳಲ್ಲಿ ಈ ಬಗ್ಗೆ ವಿರೋಧವಿದೆ. ಈ ವಿರೋಧಕ್ಕೆ ಕಾರಣವೂ ಇದೆ.
Related Articles
ವಾಸ್ತವದಲ್ಲಿ 2021ರಲ್ಲಿ ಜನಗಣತಿ ನಡೆಸಬೇಕಿತ್ತು. ಆದರೆ ಕೋವಿಡ್ ಕಾರಣದಿಂದ ಜನಗಣತಿ ನಡೆಸಿಲ್ಲ. ಕ್ಷೇತ್ರಗಳ ಪುನರ್ವಿಂಗಡಣೆಯನ್ನು ಹೊಸ ಜನಗಣತಿಯನ್ನಾಧರಿಸಿ ನಡೆಸಲಾಗುತ್ತದೆ. ಇಲ್ಲಿ ಏನಾಗಿದೆಯೆಂದರೆ, ಹೆಚ್ಚುತ್ತಿರುವ ಜನಸಂಖ್ಯೆ ತಡೆಯುವುದಕ್ಕಾಗಿ ಕೇಂದ್ರ ಸರಕಾರ 5 ದಶಕ ಗಳಿಂದ ಸಾಕಷ್ಟು ಕ್ರಮಗಳನ್ನು ಕೈಗೊಂಡಿದೆ. ಉತ್ತರ ಭಾರತಕ್ಕೆ ಹೋಲಿಸಿದರೆ, ದಕ್ಷಿಣ ಭಾರತದ ರಾಜ್ಯಗಳು ಜನಸಂಖ್ಯೆಯ ನಿಯಂತ್ರಣದಲ್ಲಿ ಯಶಸ್ವಿಯಾಗಿವೆ. ಉತ್ತರದ ರಾಜ್ಯಗಳು ಈ ವಿಷಯದಲ್ಲಿ ಸಾಕಷ್ಟು ಹಿಂದಿವೆ. ನೂತನ ಜನಗಣತಿ ಆಧರಿಸಿ ಕ್ಷೇತ್ರ ಪುನರ್‌ವಿಂಗಡಣೆ ನಡೆದರೆ, ದಕ್ಷಿಣದ ರಾಜ್ಯಗಳ ರಾಜ ಕೀಯ ಪ್ರಾತಿನಿಧ್ಯ ಕುಸಿಯಲಿದೆ. ಇದು ಸಹಜವಾಗಿಯೇ ನೀತಿ ನಿರೂಪಣೆ, ಅಭಿವೃ ದ್ಧಿಯಲ್ಲಿ, ಧನ ಸಹಾಯ ಸೇರಿ ಎಲ್ಲ ವಿಷಯದಲ್ಲಿ ದಕ್ಷಿಣ ರಾಜ್ಯಗಳ ದನಿ ಕ್ಷೀಣಿಸಲು ಕಾರಣ ವಾಗುತ್ತದೆ. ಉತ್ತರ ಭಾರತದ ರಾಜ್ಯಗಳು ಮೇಲುಗೈ ಸಾಧಿಸ ಲಿವೆ. ಆಗ ಒಕ್ಕೂಟ ವ್ಯವಸ್ಥೆಗೆ ಧಕ್ಕೆಯಾಗಲಿದೆ. ಇದೇ ಕಾರಣಕ್ಕೆ ದಕ್ಷಿಣ ರಾಜ್ಯಗಳು 1971ರ ಜನಗಣತಿ ಆಧರಿಸಿಯೇ ಕ್ಷೇತ್ರ ಪುನರ್ವಿಂಗಡಣೆ ಮಾಡಬೇಕೆಂದು ಪಟ್ಟು ಹಿಡಿದಿವೆ.
Advertisement
ಮಧ್ಯಮ ಮಾರ್ಗದ ಮೂಲಕ ಪರಿಹಾರ!ಉತ್ತರ ಮತ್ತು ದಕ್ಷಿಣ ಭಾರತ ರಾಜ್ಯಗಳಿಗೆ ಒಪ್ಪಿಗೆಯಾಗುವ ದಾರಿಯನ್ನು ಹುಡುಕುವುದು ಅಗತ್ಯ. ಕೇಂದ್ರ ಸರಕಾರವು ಪುನರ್ವಿಂಗಡಣೆ ಮಾಡುವ ಮುನ್ನ ದಕ್ಷಿಣ ರಾಜ್ಯಗಳ ಅಹವಾಲು ಪರಿಗಣಿಸಬೇಕು. ಆತಂಕವನ್ನು ದೂರ ಮಾಡುವ ಪ್ರಯತ್ನ ಮಾಡಬೇಕು. ಅಗತ್ಯಬಿದ್ದರೆ ತಜ್ಞರ ಸಮಿತಿಯನ್ನು ರಚಿಸಿ, ಅವರ ಪಡೆದುಕೊಂಡು ಮಧ್ಯಮ ಮಾರ್ಗವನ್ನು ಕಂಡುಕೊಳ್ಳುವ ಪ್ರಯತ್ನಿಸಬೇಕೆನ್ನುವುದು ತಜ್ಞರು ಸೂಚಿಸುವ ಪರಿಹಾರವಾಗಿದೆ. ರಕ್ಷಣೆ, ವಿದೇಶಾಂಗ ವ್ಯವಹಾರ, ರೈಲ್ವೇ, ಸಂವಹನ ಮತ್ತು ತೆರಿಗೆ ಸಂಪೂರ್ಣ ಕೇಂದ್ರಕ್ಕೆ ಸಂಬಂಧಿಸಿದೆ. ಕೇಂದ್ರದ ಇನ್ನುಳಿದ ಎಲ್ಲ ಕಾರ್ಯಕ್ರಮಗಳನ್ನು ರಾಜ್ಯ ಸರಕಾರಗಳ ಮೂಲಕವೇ ಅನುಷ್ಠಾನ ಮಾಡಬೇಕು. ಹಾಗಾಗಿ ಈಗಿರುವ ಲೋಕಸಭೆ ಕ್ಷೇತ್ರಗಳಲ್ಲಿ ಯಾವುದೇ ಬದಲಾವಣೆ ಮಾಡುವ ಅಗತ್ಯವಿಲ್ಲ. ಇದರಿಂದ ರಾಜ್ಯಗಳ ಪ್ರತಿನಿಧಿತ್ವದಲ್ಲಿ ಯಾವುದೇ ಧಕ್ಕೆಯಾಗುವುದಿಲ್ಲ. ಜತೆಗೆ ಇದರಿಂದ ಒಕ್ಕೂಟ ವ್ಯವಸ್ಥೆಯ ತಣ್ತೀಗಳಿಗೂ ಯಾವುದೇ ಧಕ್ಕೆಯಾಗುವುದಿಲ್ಲ. ಸದ್ಯದ ಜನಸಂಖ್ಯೆಗೆ ಅನುಗುಣವಾಗಿ ರಾಜ್ಯ ವಿಧಾನಸಭೆಗಳ ಕ್ಷೇತ್ರಗಳನ್ನು ಹೆಚ್ಚಿಸಬಹುದು. ದೇಶ ದಲ್ಲಿ ಪ್ರಜಾಪ್ರಭುತ್ವವವನ್ನು ಗಟ್ಟಿಗೊಳಿಸಬೇಕಿದ್ದರೆ, ಸ್ಥಳೀಯ ಸಂಸ್ಥೆಗಳನ್ನು ಬಲವರ್ಧನೆ ಮಾಡುವುದು ಅತ್ಯಗತ್ಯವಾಗಿದೆ. ಏನಿದು ಕ್ಷೇತ್ರಗಳ ಪುನರ್ವಿಂಗಡಣೆ?
ಜನಸಂಖ್ಯೆಗೆ ಅನುಗುಣವಾಗಿ ಲೋಕಸಭೆ ಮತ್ತು ರಾಜ್ಯಗಳ ವಿಧಾನಸಭೆ ಕ್ಷೇತ್ರಗಳ ಸಂಖ್ಯೆಯನ್ನು ಖಚಿತಪಡಿಸುವುದು ಮತ್ತು ಆ ಕ್ಷೇತ್ರಗಳ ಗಡಿಯನ್ನು ನಿರ್ಧರಿಸುವುದನ್ನು ಕ್ಷೇತ್ರ ಪುನರ್ವಿಂಗಡಣೆ ಎನ್ನುತ್ತೇವೆ. ಕ್ಷೇತ್ರ ಪುನರ್ವಿಂಗಡಣೆ ವೇಳೆ ಪರಿಶಿಷ್ಟ ಜಾತಿ(ಎಸ್‌ಸಿ) ಮತ್ತು ಪರಿಶಿಷ್ಟ ಪಂಗಡ(ಎಸ್‌ಟಿ) ಮೀಸಲು ಕ್ಷೇತ್ರಗಳನ್ನು ಗುರುತಿಸಲಾಗುತ್ತದೆ. ಶಾಸನ ಸಭೆಗಳಲ್ಲಿ ಮಹಿಳಾ ಮೀಸಲು ಕಾಯ್ದೆ ಜಾರಿಗೆ ತಂದಿರುವುದರಿಂದ 2026ರಲ್ಲಿ ನಡೆಯಲಿರುವ ಕ್ಷೇತ್ರ ಪುನರ್ವಿಂಗಣೆ ವೇಳೆ ಮಹಿಳಾ ಕ್ಷೇತ್ರಗಳನ್ನು ಗುರುತಿಸಬೇಕಾಗುತ್ತದೆ. ಈ ಕ್ಷೇತ್ರ ಪುನರ್ವಿಂಗಡ ಣೆಯ ಕಾರ್ಯವನ್ನು ಭಾರತೀಯ ಪುನರ್ವಿ ಂಗಡಣೆ ಆಯೋಗವು ನಡೆಸಿಕೊಡುತ್ತದೆ. ಜನ ಸಂಖ್ಯೆಗೆ ಅನುಗುಣವಾಗಿ ಲೋಕಸಭೆ ಮತ್ತು ವಿಧಾನಸಭೆಗಳ ಕ್ಷೇತ್ರ ಪುನರ್ವಿಂಗಡಣೆಯನ್ನು ಮಾಡಲು ಸಂವಿಧಾನದ ಆರ್ಟಿಕಲ್ 82 ಅಧಿಕಾರವನ್ನು ನೀಡುತ್ತದೆ. ಈವರೆಗೆ 4 ಬಾರಿ ನಡೆದಿದೆ ಲೋಕಸಭಾ ಕ್ಷೇತ್ರಗಳ ಪುನರ್ವಿಂಗಡಣೆ
1952
ಸ್ವಾತಂತ್ರ್ಯ ಅನಂತರ ಮೊದಲ ಬಾರಿಗೆ 1952ರಲ್ಲಿ ಲೋಕಸಭೆ ಕ್ಷೇತ್ರಗಳನ್ನು ಗುರುತಿಸಲಾಯಿತು. ಆಗ ದ್ವಿಸದಸ್ಯ ಕ್ಷೇತ್ರಗಳೂ ಸೇರಿ ದಂತೆ ಒಟ್ಟು 494 ಲೋಕಸಭಾ ಕ್ಷೇತ್ರಗಳಿದ್ದವು. 1951 ಜನ
ಗಣತಿ ಆಧರಿಸಿ ಪ್ರಕ್ರಿಯೆ ನಡೆಸಲಾಯಿತು. ಅಂದಿನ ಜನಸಂಖ್ಯೆಗೆ ಅನುಗುಣವಾಗಿ ಪ್ರಾತಿನಿಧ್ಯ ಕಲ್ಪಿಸಲಾಗಿತ್ತು. 1963
ಎರಡನೇ ಕ್ಷೇತ್ರ ಪುನರ್ವಿಂಗಡಣೆ ವೇಳೆ ದ್ವಿಸದಸ್ಯ ಲೋಕಸಭಾ ಕ್ಷೇತ್ರಗಳನ್ನು ರದ್ದು ಮಾಡಲಾಯಿತು. 1961ರ ಜನಗಣತಿ ಆಧರಿಸಿ, ಲೋಕಸಭಾ ಕ್ಷೇತ್ರಗಳನ್ನು 494ರಿಂದ 522ಕ್ಕೆ ಹೆಚ್ಚಿಸಲಾಯಿತು. ಅದೇ ರೀತಿ, 3771 ವಿಧಾನಸಭೆ ಕ್ಷೇತ್ರಗಳನ್ನು ಪುನರ್ವಿಂಗಡಣೆ ಮಾಡಲಾಯಿತು. 1973
1971ರಲ್ಲಿ ಕೇಂದ್ರ ಸರಕಾರವು ಜನಗಣತಿ ನಡೆಸಿತು. ಬಳಿಕ 1973ರಲ್ಲಿ ಕೇಂದ್ರ ಸರಕಾರ 2ನೇ ಬಾರಿಗೆ ಕ್ಷೇತ್ರಗಳ ಪುನರ್ವಿಂಗಡಣೆ ಕೈಗೊಂಡಿತು. ಆದರೆ ಲೋಕಸಭಾ ಕ್ಷೇತ್ರಗಳಲ್ಲಿ ಯಾವುದೇ ಬದಲಾವಣೆ ಆಗಲಿಲ್ಲ. ವಿಧಾನಸಭಾ ಕ್ಷೇತ್ರಗಳನ್ನು 3771ರಿಂದ 3997ಕ್ಕೆ ಹೆಚ್ಚಿಸಲಾಯಿತು. 2002
ಈ ಬಾರಿಯೂ ಲೋಕಸಭೆ ಕ್ಷೇತ್ರಗಳಲ್ಲಿ ಯಾವುದೇ ಬದಲಾವಣೆಯಾಗಲಿಲ್ಲ. ಆದರೆ ಮೀಸಲು ಕ್ಷೇತ್ರಗಳು, ಕ್ಷೇತ್ರಗಳ ಗಡಿಗಳು ಬದಲಾವಣೆಯಾದವು. ರಾಜ್ಯ ವಿಧಾನಸಭೆ ಕ್ಷೇತ್ರಗಳನ್ನು 3997ರಿಂದ 4123ಕ್ಕೆ ಹೆಚ್ಚಿಸಲಾಯಿತು. 2001ರ ಜನಗಣತಿ ಆಧರಿಸಿ ಪ್ರಕ್ರಿಯೆ ನಡೆಸಲಾಯಿತು. ಈಗಿರುವ ಒಟ್ಟು ಲೋಕಸಭಾ ಕ್ಷೇತ್ರಗಳು 543
ಈಗಿರುವ ಒಟ್ಟು ರಾಜ್ಯಸಭಾ ಕ್ಷೇತ್ರಗಳು 250
ಈಗಿರುವ ಒಟ್ಟು ವಿಧಾನಸಭಾ ಕ್ಷೇತ್ರಗಳು 4123