Advertisement

Lok Sabha; ಪ್ರತ್ಯೇಕ ಕೂರಲು ವ್ಯವಸ್ಥೆ ಕಲ್ಪಿಸಿ: ಸ್ಪೀಕರ್‌ಗೆ ಟಿಎಂಸಿ ಮನವಿ

01:03 AM Jul 29, 2024 | Team Udayavani |

ಹೊಸದಿಲ್ಲಿ:ಲೋಕಸಭೆ ಸ್ಪೀಕರ್‌ ಓಂ ಬಿರ್ಲಾ ಸದನ ದಲ್ಲಿ ವಿಪಕ್ಷಗಳ “ಐಎನ್‌ಡಿಐಎ ಒಕ್ಕೂಟ’ಕ್ಕೆ ಆಸನದ ವ್ಯವಸ್ಥೆ ಕಲ್ಪಿಸುವ ಪ್ರಕ್ರಿಯೆಯನ್ನು ನಡೆಸುತ್ತಿದ್ದು, ಇದರ ಮಧ್ಯೆಯೇ, ತಮ್ಮನ್ನು ತಾವು ಪ್ರತ್ಯೇಕವಾಗಿ ಗುರುತಿಸಿಕೊಳ್ಳುವಂತೆ ಪ್ರತ್ಯೇಕ ಆಸನದ ವ್ಯವಸ್ಥೆ ಕಲ್ಪಿಸುವಂತೆ ಸ್ಪೀಕರ್‌ಗೆ ಟಿಎಂಸಿ ಮನವಿ ಮಾಡಿದೆ ಎನ್ನಲಾಗಿದೆ.

Advertisement

ವಿಪಕ್ಷ ಒಕ್ಕೂಟದ ಭಾಗವಾಗಿದ್ದರೂ ಟಿಎಂಸಿ ಹಿಂದಿನಿಂದಲೂ ಪ್ರತ್ಯೇಕವಾಗಿ ಬಿಜೆಪಿ ವಿರೋಧಿ ಪಕ್ಷವೆಂದು ಗುರುತಿಸಿಕೊಂಡು ಬರುತ್ತಿದೆ. ಅದರಂತೆ, ಸದನದಲ್ಲೂ ತಮಗೆ ಪ್ರತ್ಯೇಕವಾಗಿ ಆಸನ ಕಲ್ಪಿಸುವಂತೆ ಟಿಎಂಸಿ ಮನವಿ ಮಾಡಿದೆ ಎನ್ನಲಾಗಿದೆ. ಲೋಕಸಭೆಯಲ್ಲಿ ಆಡಳಿತಾರೂಢ ಮೈತ್ರಿಯ ಸದಸ್ಯರು ಮತ್ತು ವಿಪಕ್ಷಗಳ ಮೈತ್ರಿಕೂಟದ ಸದಸ್ಯರ ನಡುವೆ ಸ್ಪಷ್ಟವಾಗಿ ವಿಭಜನೆ ಆಗುವಂತೆ ಆಸನ ವ್ಯವಸ್ಥೆಯನ್ನು ಮಾಡಲಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next