Advertisement

Lok Adalat ದಾಖಲೆ: 1,033 ಪೀಠಗಳಲ್ಲಿ ಅದಾಲತ್‌; 40 ಲಕ್ಷ ಪ್ರಕರಣ ಇತ್ಯರ್ಥ

01:08 AM Jul 16, 2024 | Team Udayavani |

ಬೆಂಗಳೂರು: ರಾಜ್ಯಾದ್ಯಂತ ಶನಿವಾರ ನಡೆದ ರಾಷ್ಟ್ರೀಯ ಲೋಕ ಅದಾಲತ್‌ನಲ್ಲಿ ದಾಖಲೆಯ 40.3 ಲಕ್ಷಕ್ಕೂ ಅಧಿಕ ಪ್ರಕರಣಗಳನ್ನು ರಾಜಿ- ಸಂಧಾನದ ಮೂಲಕ ಇತ್ಯರ್ಥ ಪಡಿಸಿ, ಒಟ್ಟು 2,640 ಕೋಟಿ ರೂ.ಗಳನ್ನು ಕಕ್ಷಿದಾರ ರಿಗೆ ಪರಿಹಾರ ರೂಪದಲ್ಲಿ ನೀಡ ಲಾಗಿದೆ.

Advertisement

ಈ ಮೂಲಕ ಕರ್ನಾ ಟಕ ಕಾನೂನು ಸೇವಾ ಪ್ರಾಧಿ ಕಾರ ಹೊಸ ದಾಖಲೆ ಬರೆದಿದೆ.ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಕಾರ್ಯ ನಿರ್ವಾಹಕ ಅಧ್ಯಕ್ಷರೂ ಆಗಿ ರುವ ಹೈಕೋರ್ಟ್‌ ಹಿರಿಯ ನ್ಯಾಯಮೂರ್ತಿ ವಿ. ಕಾಮೇಶ್ವರ ರಾವ್‌ ಸೋಮವಾರ ಈ ಮಾಹಿತಿ ನೀಡಿದರು.

ಜು. 13ರಂದು ರಾಜ್ಯಾದ್ಯಂತ ಒಟ್ಟು 1,033 ಪೀಠಗಳು ಲೋಕ ಅದಾಲತ್‌ ನಡೆಸಿವೆ. ಈ ವೇಳೆ ನ್ಯಾಯಾಲಯದಲ್ಲಿ ಬಾಕಿಯಿದ್ದ 2.64 ಲಕ್ಷ ಪ್ರಕರಣಗಳು ಹಾಗೂ 37.3 ಲಕ್ಷ ವ್ಯಾಜ್ಯಪೂರ್ವ ಪ್ರಕರಣಗಳು ಸೇರಿ ಒಟ್ಟು 40.3 ಲಕ್ಷ ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದೆ. 1,550 ವೈವಾಹಿಕ ಪ್ರಕರಣಗಳನ್ನು ಇತ್ಯರ್ಥಪಡಿಸಿ, 259 ದಂಪತಿಯನ್ನು ಮತ್ತೆ ಒಂದುಗೂಡಿಸಿರುವುದು ಈ ಬಾರಿಯ ಅದಾಲತ್‌ನ ಮತ್ತೊಂದು ವಿಶೇಷ ಎಂದರು.

ಇದೇ ಮೊದಲ ಬಾರಿಗೆ ಆಸ್ತಿ ತೆರಿಗೆ ಪಾವತಿಗೆ ರಿಯಾಯಿತಿ ಸೌಲಭ್ಯವನ್ನು ಲೋಕ ಅದಾಲತ್‌ಗೆ ವಿಸ್ತರಿಸಲಾಗಿದೆ. ರಾಜ್ಯದ ಎಲ್ಲ ಮುನ್ಸಿಪಾಲಿಟಿ ವ್ಯಾಪ್ತಿಯ 9 ಲಕ್ಷ ಪ್ರಕರಣಗಳ ಆಸ್ತಿ ತೆರಿಗೆದಾರರು ರಿಯಾಯಿತಿ ಸೌಲಭ್ಯದ ಪ್ರಯೋಜನ ಪಡೆದಿದ್ದಾರೆ ಎಂದರು.

Advertisement

Udayavani is now on Telegram. Click here to join our channel and stay updated with the latest news.