ಗೌರಿಬಿದನೂರು: ನಗರದ ನ್ಯಾಯಾ ಲಯ ಆವರಣದಲ್ಲಿ ಮಾ.12ರಂದು ಬೃಹತ್ ಲೋಕ್ ಅದಾಲತ್ ಆಯೋ ಜನೆ ಮಾಡಲಾಗಿದ್ದು, ಇದರ ಉಪ ಯೋಗವನ್ನು ಕಕ್ಷಿದಾರರು ಪಡೆಯಬೇಕಿದೆ ಎಂದು ಹಿರಿಯ ಶ್ರೇಣಿ ನ್ಯಾಯಾಧೀಶೆ ರೇಣುಕಾ ದೇವಿದಾಸ್ ರಾಯ್ಕರ್ ತಿಳಿಸಿದರು. ನ್ಯಾಯಾಲಯದ ಸಭಾಂಗಣದಲ್ಲಿ ನಡೆದ ಪೂರ್ವಭಾವಿ ಸಭೆ ಯಲ್ಲಿ ಮಾತನಾಡಿದರು.
ಸಮಯ ಉಳಿಸಿ: ಹೈಕೋರ್ಟ್ ಆದೇಶ ದಂತೆ ತಾಲೂಕುವಾರು ಬೃಹತ್ ಲೋಕ್ ಅದಾಲತ್ ಆಯೋಜಿಸಿದ್ದು ಇದು ಅನೇಕ ಕಕ್ಷಿದಾರರಿಗೆ ವರದಾನವಾಗಲಿದೆ. ವಿನಾಕಾರಣ ಸಣ್ಣಪುಟ್ಟ ಪ್ರಕರಣಗಳನ್ನು ನ್ಯಾಯಾಲಯಕ್ಕೆ ದಾವೆ ಹೂಡಿ ಅಲೆದಾಡುತ್ತಾರೆ. ಅಮೂಲ್ಯವಾದ ಸಮಯ ಹಣ ಉಳಿಸುವ ಸಲುವಾಗಿ ಈ ಅದಾಲತ್ ಉಪಯೋಗವಾಗಲಿದೆ ಎಂದು ಹೇಳಿದರು.
ಪ್ರಕರಣಗಳು: ಕುಟುಂಬ ವ್ಯಾಜ್ಯ, ಸಿವಿಲ್, ಹಣದ ವಿಚಾರ ಬ್ಯಾಂಕ್‌ನಲ್ಲಿ ಸಾಲ ಪಡೆದಿರುವ ಪ್ರಕರಣಗಳನ್ನು ರಾಜೀ ಸಂಧಾನಕ್ಕೆ ಸೂಕ್ತವಾದ ಪ್ರಕರಣ ಗಳೆಂದು ಆಯ್ಕೆ ಮಾಡಲಾಗುವುದು. ನ್ಯಾಯಾಲಯದಲ್ಲಿ ರಾಜೀ ಮಾಡಿ ಕೊಂಡರೆ ಮಾನವ ಸಂಬಂಧ, ಮೌಲ್ಯ ಗಳು ಉಳಿದು ಸಮಾಜದಲ್ಲಿ ಶಾಂತಿ ಮೂಡಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.
ವಕೀಲರ ಪಾತ್ರ ಮಹತ್ವದ್ದು: ಹೆಚ್ಚುವರಿ ಸಿವಿಲ್ ನ್ಯಾಯಾಧೀಶ ಡಿ.ಕೆ.ಮಂಜು ನಾಥಚಾರಿ ಮಾತನಾಡಿ, ಲೋಕ್ ಅದಾಲತ್ ನಲ್ಲಿ ವಕೀಲ ಪಾತ್ರ ಮಹತ್ವವಾಗಿದೆ. ಇಲ್ಲಿ ಕಕ್ಷಿದಾರರ ಪ್ರಕರಣಗಳ ವಿಚಾರ ಮತ್ತು ಅದರ ಸ್ವರೂಪ ವಕೀಲರಿಗೆ ತಿಳಿದ ವಿಷಯ ಗಳಾಗಿರುತ್ತದೆ. ಆದ್ದರಿಂದ ವಕೀಲರು ಅದಾಲತ್‌ನಲ್ಲಿ ಪ್ರಮುಖ ಪಾತ್ರ ವಹಿಸಬೇಕು ಎಂದರು.
ಇತ್ಯರ್ಥಪಡಿಸಿ: ಕುಟುಂಬಕ್ಕೆ ಸಂಬಂಧಿಸಿದಂತೆ ಬರುವ ಪ್ರಕರಣಗಳನ್ನು ಬಹಳ ಸೂಕ್ಷ್ಮವಾಗಿ ಇತ್ಯರ್ಥ ಮಾಡ ಬೇಕು. ಯಾವುದೇ ಮನುಷ್ಯ ಕುಟುಂಬದ ವಿಷಯದಲ್ಲಿ ಪ್ರಕರಣ ದಾಖಲಿಸು ತ್ತಾನೆ. ಅವನು ಜೀವನದಲ್ಲಿ ಸಂಪೂರ್ಣ ವಾಗಿ ಸೋತಾಗ ಮಾತ್ರ ಇಲ್ಲಿಗೆ ಬರಲು ಕಾರಣವಾಗುತ್ತದೆ. ಇದನ್ನುವಕೀಲರು ಸಂಯಮದಿಂದ ಇತ್ಯರ್ಥಪಡಿಸಬೇಕಿದೆ ಎಂದು ಹೇಳಿದರು.
ಪೂರ್ವಭಾವಿ ಸಭೆಯಲ್ಲಿ ವಕೀಲ ಸಂಘದ ಉಪಾಧ್ಯಕ್ಷ ಬಿ.ಲಿಂಗಪ್ಪ, ವಕೀಲ ರಾದ ರಾಮಚಂದ್ರರೆಡ್ಡಿ, ನಾಗರಾಜ್,ದಿನೇಶ್, ರಂಗನಾಥ್, ವಿಜಯ್ ಕುಮಾರ್ ಹಾಜರಿದ್ದರು.