Advertisement

ಲೋಕ್‌ ಅದಾಲತ್‌: 1529 ಪ್ರಕರಣಗಳಿಗೆ ರಾಜಿ ಸಂಧಾನ

04:37 PM Feb 10, 2020 | Team Udayavani |

ಬಾಗಲಕೋಟೆ: ಜಿಲ್ಲಾ ನ್ಯಾಯಾಲಯದಲ್ಲಿ ರಾಷ್ಟ್ರೀಯ ಲೋಕ್‌ ಅದಾಲತ್‌ ಮೂಲಕ ಒಟ್ಟು 3538 ಪ್ರಕರಣಗಳ ಪೈಕಿ 1529 ಪ್ರಕರಣಗಳಿಗೆ ರಾಜಿ ಸಂಧಾನದ ಮೂಲಕ ಇತ್ಯರ್ಥಪಡಿಸಲಾಯಿತು. ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಅನಿಲ ಕಟ್ಟಿ ಅವರ ಮಾರ್ಗದರ್ಶನದಲ್ಲಿ ಜಿಲ್ಲೆಯ

Advertisement

ಎಲ್ಲ ನ್ಯಾಯಾಲಯಗಳಲ್ಲಿ ರಾಷ್ಟ್ರೀಯ ಲೋಕ ಅದಾಲತ್‌ ಶಿಬಿರ ಕಾರ್ಯಕ್ರಮದಲ್ಲಿ ಒಟ್ಟು 3538 ಪ್ರಕರಣಗಳಲ್ಲಿ ಪೈಕಿ 997 ವಾಜ್ಯ ಪೂರ್ವ ಪ್ರಕರಣಗಳು ಮತ್ತು 2541 ನ್ಯಾಯಾಲಯದಲ್ಲಿ ವಿಚಾರಣೆಗಾಗಿ ಬಾಕಿ ಇರುವ ಪ್ರಕರಣಗಳನ್ನು ತೆಗೆದುಕೊಳ್ಳಲಾಗಿತ್ತು. ಈ ಪೈಕಿ 452 ವಾಜ್ಯ ಪೂರ್ವ ಹಾಗೂ 1077 ನ್ಯಾಯಾಲಯದಲ್ಲಿ ವಿಚಾರಣೆಗಾಗಿ ಬಾಕಿ ಇರುವ ಪ್ರಕರಣಗಳು ಸೇರಿ ಒಟ್ಟು 1529 ಪ್ರಕರಣಗಳನ್ನು ಇತ್ಯರ್ಥ ಪಡಿಸಿ ರಾಜಿ ಸಂಧಾನ ಮಾಡಿಸಲಾಯಿತು. ಈ ಎಲ್ಲ ಪ್ರಕರಣಗಳಿಗೆ ಅಂದಾಜು 6.20 ಕೋಟಿ ರೂ.ಗಳಿಗೆ ರಾಜಿ ಮಾಡಿಸಲಾಯಿತು.

ಬ್ಯಾಂಕ್‌ ಮರುಪಾವತಿಗೆ ಸಂಬಂಧಿಸಿದಂತೆ 736 ಪ್ರಕರಣಗಳ ಪೈಕಿ 147, ಕ್ರಿಮಿನಲ್‌ ಸಂಯುಕ್ತ ಅಪರಾಧಕ್ಕೆ ಸಂಬಂಧಿಸಿದಂತೆ 160 ಪ್ರಕರಣಗಳ ಪೈಕಿ 146, ವಿದ್ಯುತ್‌ ಬಿಲ್‌ ಗಳಿಗೆ ಸಂಬಂಧಿಸಿದ 82 ಪ್ರಕರಣಗಳ ಪೈಕಿ 71 ಹಾಗೂ ನೀರಿನ ಬಿಲ್‌ ಗಳಿಗೆ ಸಂಬಂಧಿಸಿದ 283 ಪ್ರಕರಣಗಳ ಪೈಕಿ 169 ಪ್ರಕರಣ ಇತ್ಯರ್ಥ ಪಡಿಸಲಾಯಿತು.

ಲೋಕ ಅದಾಲತ್‌ ಶಿಬಿರದಲ್ಲಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹೇಮಲತಾ ಹುಲ್ಲೂರ, 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಸಂತೋಷ ಸಿ.ಬಿ, ಕೌಟುಂಬಿಕ ನ್ಯಾಯಾಲಯದ ಜಿಲ್ಲಾ ನ್ಯಾಯಾಧೀಶೆ ಶೀಲಾ ಎನ್‌., ಪ್ರಧಾನ ಹಿರಿಯ ದಿವಾಣಿ ನ್ಯಾಯಾಧೀಶ ಪ್ರಕಾಶ ವಿ., 1ನೇ ಹೆಚ್ಚುವರಿ ಹಿರಿಯ ದಿವಾಣಿ ನ್ಯಾಯಾಧೀಶ ಎಂ.ಎ.ಹೆಚ್‌. ಮೊಘಲಾನಿ, 2ನೇ ಹೆಚ್ಚುವರಿಹಿರಿಯ ದಿವಾಣಿ ನ್ಯಾಯಾಧೀಶ ಆರ್‌.ಎಲ್‌. ಹೊನೊಲೆ, ಪ್ರಧಾನ ದಿವಾಣಿ ನ್ಯಾಯಾಧೀಶಪದ್ಮಾಕರ ವನಕುದ್ರಿ, ಹೆಚ್ಚುವರಿ ದಿವಾಣಿ ನ್ಯಾಯಾಧೀಶ ಮಹೇಶ ಚಂದ್ರಕಾಂತ ಸೇರಿದಂತೆ ಕಕ್ಷಿದಾರರು, ವಕೀಲರು ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next