Advertisement
2017ರಲ್ಲಿ ಮದುವೆಯಾದ ದಂಪತಿಗಳು 2019 ರಲ್ಲಿ ಬೇರೆಯಾಗಿ ಸ್ಥಳೀಯ ಸಿವಿಲ್ ನ್ಯಾಯಾಲಯದಲ್ಲಿ ವಿಚ್ಛೇದನಕ್ಕಾಗಿ ದಾವೆ ಮಾಡಿದ್ದರು. ಆದರೆ ಶನಿವಾರ ನಡೆದ ಲೋಕ ಅದಾಲತನಲ್ಲಿ ನ್ಯಾಯಾಧೀಶರು, ವಕೀಲರ ಮತ್ತು ಹಿರಿಯರ ಸಮ್ಮುಖದಲ್ಲಿ ರಾಜಿಯಾಗಿ ಮತ್ತೆ ಒಂದಾದರು. ಅರ್ಜಿದಾರ ಪರ ಎ.ಎನ್. ಜಿಡ್ಡಿಮನಿ. ವಿ.ಬಿ.ಖೇಮನ್ನವರ ಮತ್ತು ಎದುರುದಾರ ಪರ ಹರ್ಷವರ್ಧನ ಪಟವರ್ಧನ ಮತ್ತು ಶಿವಕುಮಾರ ಷಣ್ಮುಖ ವಕಾಲತ್ತು ವಹಿಸಿದ್ದರು.
Related Articles
Advertisement
ಇದೇ ಸಂದರ್ಭದಲ್ಲಿ ಕಿರಿಯ ಶ್ರೇಣಿಯ ನ್ಯಾಯಾಧೀಶೆ ಸುಷ್ಮಾ ಟಿ.ಸಿ. ಮಾತನಾಡಿ, ಐದು ಹಳೆಯ ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ಬಗೆ ಹರಿಸಲಾಗುವುದು. ಇನ್ನೂ ಅನೇಕ ಪ್ರಕರಣಗಳು ಮುಕ್ತಾಯಗೊಳ್ಳುವ ಸಾಧ್ಯತೆ ಇದೆ ಎಂದರು.
ಈ ಸಂದರ್ಭದಲ್ಲಿ ವಕೀಲರ ಸಂಘದ ಅಧ್ಯಕ್ಷ ಶ್ರೀಕಾಂತ ಕುಲಕರ್ಣಿ, ಎಂ.ಎನ್. ಕೋಪರ್ಡೆ, ಹಿರಿಯ ನ್ಯಾಯಾವಾದಿಗಳಾದ ಎಂ.ಜಿ.ಕೆರೂರ, ಅರವಿಂದ ವ್ಯಾಸ್, ಭೀಮಶಿ ಯಲ್ಲಟ್ಟಿ, ಜಿ.ಡಿ.ಪಾಟೀಲ ಸೇರಿದಂತೆ ಅನೇಕ ಇದ್ದರು.