Advertisement

ಲೋಕ ಅದಾಲತ್‌: 64 ಪ್ರಕರಣ ಇತ್ಯರ್ಥ

03:32 PM Jul 15, 2019 | Team Udayavani |

ಅಂಕೋಲಾ: ಇಲ್ಲಿನ ನ್ಯಾಯಾಲಯದಲ್ಲಿ ನಡೆದ ಲೋಕ ಅದಾಲತ್‌ನಲ್ಲಿ ಹಲವಾರು ಕ್ಲಿಷ್ಟಕರವಾದ ಪ್ರಕರಣಗಳು ರಾಜಿ ಸಂಧಾನದ ಮೂಲಕ ಇತ್ಯರ್ಥಗೊಂಡವು.

Advertisement

ನ್ಯಾಯಾಂಗ ಸಂಧಾನಕಾರರಾಗಿ ಹಿರಿಯ ನ್ಯಾಯಾಧೀಶ ಸುಹೇಲ್ ಅಹಮ್ಮದ್‌ ಕುನ್ನಿಬಾವಿ, ಹೆಚ್ಚುವರಿ ನ್ಯಾಯಾಧೀಶ ರಾಜು ಶೇಡ್‌ಬಾಳಕರ, ಪ್ರಧಾನ ಸಿವಿಲ್ ನ್ಯಾಯಾಧೀಶ ರಂಗಸ್ವಾಮಿ ಜೆ. ಹಾಗೂ ನ್ಯಾಯಾಂಗೇತರ ಸಂಧಾನಕಾರರಾಗಿ ಸುಹಾಸ ಶೆಟ್ಟಿ ಉಪಸ್ಥಿರಿದ್ದರು.

ಲೋಕ ಅದಾಲತ್‌ನಲ್ಲಿ 347 ಪ್ರಕರಣ ದಾಖಲಾಗಿದ್ದು, 64 ಪ್ರಕರಣಗಳು ಇತ್ಯರ್ಥಗೊಂಡವು. ಬ್ಯಾಂಕ್‌ ವಸೂಲಾತಿ ಪ್ರಕರಣದಲ್ಲಿ 561759 ರೂ, ಚೆಕ್‌ ಅಮಾನ್ಯ ಪ್ರಕರಣದಲ್ಲಿ 4029362 ಒಟ್ಟು 4591121 ರೂ. ಹಣವನ್ನು ರಾಜಿ ಸಂಧಾನದ ಮೂಲಕ ಕೊಡಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next