Advertisement

ಲೋಕ ಅದಾಲತ್‌: 48 ಪ್ರಕರಣ ಇತ್ಯರ್ಥ

06:37 PM Sep 20, 2020 | Suhan S |

ಹರಪನಹಳ್ಳಿ: ಪಟ್ಟಣದ ಜೆಎಂಎಫ್‌ಸಿ ನ್ಯಾಯಾಲಯದ ಹಿರಿಯ ಮತ್ತು ಕಿರಿಯ ನ್ಯಾಯಾಧೀಶರ ನೇತೃತ್ವದಲ್ಲಿ ಶನಿವಾರ ಜರುಗಿದ ಬೃಹತ್‌ ಲೋಕ ಅದಾಲತ್‌ನಲ್ಲಿ ರಾಜಿ ಸಂಧಾನ ಮೂಲಕ ಒಟ್ಟು 48 ಪ್ರಕರಣಗಳು ಇತ್ಯರ್ಥಗೊಳಿಸಿ, ರಾಜಿ ಪ್ರಕರಣದಲ್ಲಿ ಒಟ್ಟು ಮೊತ್ತ 42.8 ಲಕ್ಷರೂ ವಸೂಲಿ ಮಾಡಿ ಪಾವತಿಸಲಾಗಿದೆ ಎಂದು ಹಿರಿಯ ನ್ಯಾಯಾಧಿಧೀಶರಾದ ಉಂಡಿ ಮಂಜುಳಾ ಶಿವಪ್ಪ ಮತ್ತು ಬಿ.ಜಿ. ಶೋಭಾ ತಿಳಿಸಿದರು.

Advertisement

ಜೆಎಂಎಫ್‌ಸಿ ನ್ಯಾಯಾಲಯದ ಹಿರಿಯ ಶ್ರೇಣಿ ನ್ಯಾಯಾಲಯದಲ್ಲಿ ಒಟ್ಟು 20 ಪ್ರಕರಣಗಳು ಇತ್ಯರ್ಥಗೊಂಡಿದ್ದು, ರಾಜಿ ಸಂಧಾನದ ಮೂಲಕ 19.4 ಲಕ್ಷರೂ ಸಂದಾಯ ಮಾಡಲಾಗಿದೆ. ಹರಪನಹಳ್ಳಿ ಪಟ್ಟಣದ ಎಸ್‌ಬಿಐ ಬ್ಯಾಂಕ್‌ 7 ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ 7.73 ಲಕ್ಷರೂಗಳನ್ನು ರಾಜಿ ಸಂಧಾನದ ಮೂಲಕ ಇತ್ಯರ್ಥಪಡಿಸಲಾಗಿದೆ ಎಂದರು.

ಕಿರಿಯ ಶ್ರೇಣಿ ನ್ಯಾಯಾಲಯದಲ್ಲಿ ಒಟ್ಟು 28 ಪ್ರಕರಣಗಳು ಇತ್ಯರ್ಥವಾಗಿದ್ದು, ಸಿವಿಲ್‌ ಪ್ರಕರಣದಲ್ಲಿ 8 ಪ್ರಕರಣಗಳಲ್ಲಿ 9.13 ಲಕ್ಷ ರೂ. ರಾಜಿ ಸಂಧಾನದ ಮೂಲಕ ವಸೂಲಿ ಮಾಡಲಾಗಿದೆ. ಚೆಕ್‌ ಬೋನಸ್‌ ಪ್ರಕರಣಕ್ಕೆ ಸಂಬಂಧಿಸಿದಂತೆ 10 ಪ್ರಕರಣಗಳ ಪೈಕಿ 6.82 ಲಕ್ಷ ರೂಗಳನ್ನು ಇತ್ಯರ್ಥ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ವಕೀಲರ ಸಂಘದ ಅಧ್ಯಕ್ಷ ಚೆಂದ್ರೇಗೌಡ, ಹಿರಿಯ ವಕೀಲರಾದ ಕೆ. ಜಗದೀಶ್‌, ಕೃಷ್ಣಮೂರ್ತಿ, ರಾಮನಗೌಡ, ಕೆ.ಗೋಣಿಬಸಪ್ಪ, ರವಿಶಂಕರ್‌, ಜಿ.ಎಸ್‌ .ತಿಪ್ಪೇಶ್‌, ಆನಂದ, ಬಿ.ಆರ್‌.ಜಿ. ಮಂಜ್ಯಾನಾಯ್ಕ, ಸಿ.ಹನುಮಂತಪ್ಪ, ನಂದೀಶ್‌, ಹಾಲೇಶ್‌, ಕೋಟ್ರೇಶ್‌, ಉಮೇಶ್‌, ರವಿಕುಮಾರ್‌, ಪ್ರಕಾಶ್‌, ಸಣ್ಣನಿಂಗನಗೌಡ ಬಸವರಾಜ್‌ ಮಂಜುನಾಥ್‌ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next