Advertisement

18ರಂದು ಬೃಹತ್‌ ಲೋಕ್‌ ಅದಾಲತ್‌ ಆಯೋಜನೆ

04:57 PM Dec 07, 2021 | Team Udayavani |

ದಾವಣಗೆರೆ: ಜಿಲ್ಲೆಯ ಎಲ್ಲನ್ಯಾಯಾಲಯಗಳಲ್ಲಿ ಡಿ. 18 ರಂದು ಬೃಹತ್‌ಲೋಕ್‌ ಅದಾಲತ್‌ ನಡೆಯಲಿದೆ ಎಂದುಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾ ಧೀಶರಾದರಾಜೇಶ್ವರಿ ಎನ್‌. ಹೆಗಡೆ ತಿಳಿಸಿದ್ದಾರೆ.
ಸೋಮವಾರ ಸುದ್ದಿಗೋಷ್ಠಿಯಲ್ಲಿಮಾತನಾಡಿದ ಅವರು, ಕಳೆದ ಆಗಸ್ಟ್‌,ಸೆಪ್ಟಂಬರ್‌ನಲ್ಲಿ ಲೋಕ್‌ ಅದಾಲತ್‌ ನಡೆದಿತ್ತು.ಈಗ ಮೂರನೇ ಬಾರಿಗೆ ಲೋಕ ಅದಾಲತ್‌ನಡೆಸಲಾಗುತ್ತಿದೆ.

Advertisement

ಸಾರ್ವಜನಿಕರು,ವಕೀಲರು, ಪೊಲೀಸ್‌ ಇಲಾಖೆ ಒಳಗೊಂಡಂತೆಎಲ್ಲಇಲಾಖೆಯವರು ಲೋಕ್‌ ಅದಾಲತ್‌ಯಶಸ್ಸಿಗೆ ಸಹಕರಿಸಬೇಕು ಎಂದು ಮನವಿಮಾಡಿದರು.ರಾಷ್ಟ್ರೀಯ ಮತ್ತು ರಾಜ್ಯ ಕಾನೂನುಸೇವಾಪ್ರಾಧಿ ಕಾರದ ನಿರ್ದೇಶನದ ಮೇರೆಗೆದಾವಣಗೆರೆ, ಹರಿಹರ, ಚನ್ನಗಿರಿ, ಹೊನ್ನಾಳಿಹಾಗೂ ಜಗಳೂರು ನ್ಯಾಯಾಲಯಗಳಆವರಣದಲ್ಲಿ ಮೆಗಾ ಲೋಕ್‌ ಅದಾಲತ್‌ಆಯೋಜಿಸಲಾಗಿದೆ.

ರಾಜಿಯಾಗಬಹುದಾದ ವಿವಿಧ ಪ್ರಕರಣಗಳ ಜೊತೆಗೆ ವ್ಯಾಜ್ಯ ಪೂರ್ವಪ್ರಕರಣಗಳನ್ನೂ ಕೂಡ ರಾಜಿ ಸಂಧಾನದಮೂಲಕ ಇತ್ಯರ್ಥಪಡಿಸಿಕೊಳ್ಳಲು ಅವಕಾಶಕಲ್ಪಿಸಲಾಗಿದೆ ಎಂದರು.ಸಿವಿಲ್‌ ಹಾಗೂ ಕ್ರಿಮಿನಲ್‌(ರಾಜಿಮಾಡಿಕೊಳ್ಳಬಹುದಾದ) ಪ್ರಕರಣಗಳು,ಮೋಟರ್‌ ವಾಹನ ಅಪಘಾತ ಪರಿಹಾರ,ಚೆಕ್‌ ಅಮಾನ್ಯ, ಭೂಸ್ವಾಧಿಧೀನ ಪರಿಹಾರ,ಬ್ಯಾಂಕ್‌ ಸಾಲ ವಸೂಲಾತಿ, ವಿಮೆ, ಅಕ್ರಮಮರಳುಗಾರಿಕೆ ಪ್ರಕರಣ, ವೈವಾಹಿಕ ಕುಟುಂಬನ್ಯಾಯಾಲಯದ ಪ್ರಕರಣ (ವಿಚ್ಚೇದನಹೊರತುಪಡಿಸಿ), ಪಿಂಚಣಿ, ವೇತನ ಭತ್ಯೆ,ವಿದ್ಯುತ್‌, ನೀರಿನ ಶುಲ್ಕ, ಕೈಗಾರಿಕೆ ಕಾರ್ಮಿಕರವೇತನ, ಕಾರ್ಮಿಕ ವಿವಾದ ಇತ್ಯಾದಿಪ್ರಕರಣಗಳನ್ನು ಪರಸ್ಪರ ಮಾತುಕತೆಯಮೂಲಕ ಬಗೆಹರಿಸಿಕೊಳ್ಳಬಹುದು.ರಾಜಿ ಸಂಧಾನದ ಮೂಲಕ ಪ್ರಕರಣಇತ್ಯರ್ಥಪಡಿಸಿಕೊಂಡಲ್ಲಿ ಅದೇ ಅಂತಿಮ.ಮೇಲ್ಮನವಿ ಸಲ್ಲಿಸಲು ಅವಕಾಶ ಇರುವುದಿಲ್ಲ.

ನ್ಯಾಯಾಲಯದ ಸಂಪೂರ್ಣ ಶುಲ್ಕವನ್ನುಮರುಪಾವತಿ ಮಾಡಲಾಗುವುದು.ಕಕ್ಷಿಗಾರರು ಭೌತಿಕವಾಗಿ ಅಥವಾ ವಿಡಿಯೋಕಾನ್ಪ ರೆನ್ಸ್‌ ಮುಖಾಂತರ ಪ್ರಕರಣಗಳನ್ನುಇತ್ಯರ್ಥಪಡಿಸಿಕೊಳ್ಳಬಹುದು ಎಂದುಹೇಳಿದರು.ವಿಶೇಷವೆಂದರೆ ನ್ಯಾಯಾಲಯಗಳಲ್ಲಿಬಾಕಿ ಇರುವ ಪ್ರಕರಣಗಳ ಜೊತೆಗೆನ್ಯಾಯಾಲಯಕ್ಕೆ ದಾಖಲಾಗುವ ಮುನ್ನಅಂದರೆ ವ್ಯಾಜ್ಯಪೂರ್ವ ಪ್ರಕರಣಗಳನ್ನೂಕೂಡ ಲೋಕ್‌ ಅದಾಲತ್‌ನಲ್ಲಿ ರಾಜಿಸಂಧಾನದ ಮೂಲಕ ಇತ್ಯಥಪಡಿಸಲುಅವಕಾಶ ಒದಗಿಸಲಾಗಿದೆ. ಅದಾಲತ್‌ನಿಂದಾಗಿ ಕಡಿಮೆ ಸಮಯದಲ್ಲಿ ವೆಚ್ಚರಹಿತವಾಗಿ ವ್ಯಾಜ್ಯಗಳು ಇತ್ಯರ್ಥಗೊಳ್ಳಲಿವೆ.ಸಮಾಜದಲ್ಲಿ ಉತ್ತಮ ಬಾಂಧವ್ಯ ಮೂಡಲುಸಹಕಾರಿ ಆಗಲಿದೆ ಎಂದರು.ಜಿಲ್ಲೆಯಲ್ಲಿ ಪ್ರಸ್ತುತ 32,738 ಪ್ರಕರಣಗಳುಬಾಕಿ ಇದ್ದು, ಈ ಪೈಕಿ ಸುಮಾರು 18 ಸಾವಿರಸಿವಿಲ್‌ ಪ್ರಕರಣಗಳಿವೆ. ನ್ಯಾಯಾಲಯದಲ್ಲಿಚಾಲ್ತಿಯಲ್ಲಿರುವ ಹಾಗೂ ವ್ಯಾಜ್ಯಪೂರ್ವಪ್ರಕರಣಗಳನ್ನು ಕಡಿಮೆ ಖರ್ಚಿನಲ್ಲಿ ಶೀಘ್ರವಾಗಿಪರಿಹರಿಸಿಕೊಳ್ಳಲು ಸಾರ್ವಜನಿಕರಿಗೆ ಲೋಕ್‌ಅದಾಲತ್‌ನಲ್ಲಿ ಅವಕಾಶ ಕಲ್ಪಿಸಲಾಗಿದೆಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next