ಚಾಮರಾಜನಗರ: ಸಂಧಾನದ ಮೂಲಕನ್ಯಾಯಾಲಯದಲ್ಲಿ ಹೂಡಲಾಗಿರುವ ಪ್ರಕರಣಗಳನ್ನು ಇತ್ಯರ್ಥ ಪಡಿಸಿಕೊಳ್ಳಲು ಆ. 14ರಂದುಜಿಲ್ಲೆಯ ಎಲ್ಲಾ ನ್ಯಾಯಾಲಯಗಳಲ್ಲಿ ಮೆಗಾಲೋಕ್ ಅದಾಲತ್ ಏರ್ಪಡಿಸಲಾಗಿದೆ ಎಂದುಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಅಧ್ಯಕ್ಷ ಸದಾಶಿವ ಎಸ್. ಸುಲ್ತಾನ್‌ಪುರಿತಿಳಿಸಿದರು.
ನಗರದ ಜಿಲ್ಲಾ ನ್ಯಾಯಾಲಯ ಆವರಣದಲ್ಲಿರುವ ವ್ಯಾಜ್ಯಪೂರ್ವ ಪರ್ಯಾಯ ಪರಿಹಾರಕೇಂದ್ರದಲ್ಲಿ ಮಂಗಳವಾರ ನಡೆದ, ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು,ಯಾವುದೇ ಪ್ರಕರಣದ ಎರಡು ಪಕ್ಷಗಾರರು,ಸಂಧಾನಕಾರರ ಹಾಗೂ ಸಾಕ್ಷಿದಾರರ ಸಲಹೆಸೂಚನೆಗಳಿಗೆ ಸಂಪೂರ್ಣ ಸಮ್ಮತಿ ಸೂಚಿಸಿ ರಾಜಿತೀರ್ಮಾನ ಕೈಗೊಳ್ಳಲು ಲೋಕ್ ಅದಾಲತ್‌ನಾಗರಿಕರಿಗೆ ಅನುಕೂಲ ಕಲ್ಪಿಸಿದೆ ಎಂದರು.
ಪ್ರಸ್ತುತ 2021ರ ಜೂನ್ ಅಂತ್ಯದವರೆಗೆ ಜಿಲ್ಲೆಯ ನಾಲ್ಕು ತಾಲೂಕುಗಳ ಒಟ್ಟು 20148ಪ್ರಕರಣಗಳು ಇತ್ಯರ್ಥಕ್ಕೆ ಬಾಕಿ ಇದ್ದು, ಈ ಪೈಕಿ7806 ಪ್ರಕರಣಗಳನ್ನು ಆಗಸ್ಟ್ 14ರಂದುನಡೆಯಲಿರುವ ಮೆಗಾ ಲೋಕ್ ಅದಾಲತ್ ನಲ್ಲಿರಾಜಿ ಸಂಧಾನದ ಮೂಲಕ ಇತ್ಯರ್ಥ ಪಡಿಸಲುಗುರುತಿಸಲಾಗಿದೆ ಎಂದರು.
ಮೆಗಾ ಲೋಕ್ ಅದಾಲತ್‌ನಲ್ಲಿ ಕಕ್ಷಿದಾರರು ಸಹಕಾರ ನೀಡಿದ್ದಲ್ಲಿ ಸಂಧಾನಕಾರರು ನೀಡುವ ಸಲಹೆಗಳನ್ನು ಆಲಿಸಿ ಒಪ್ಪಿಗೆಯಾಗಿದ್ದಲ್ಲಿ,ಸಲಹೆಗಳನ್ನು ಪಾಲಿಸಿದಲ್ಲಿ ಉಭಯ ಪಕ್ಷಗಾರರುಪರಸ್ಪರ ಒಪ್ಪಿ ಪ್ರಕರಣವನ್ನು ಲೋಕ್ ಆದಾಲತ್‌ನಲ್ಲಿ ಯಾವುದೇ ಖರ್ಚಿಲ್ಲದೇ ಶೀಘ್ರವಾಗಿಬಗೆಹರಿಸಿಕೊಳ್ಳಬಹುದು ಎಂದರು.
ಯಾವುದೇ ವ್ಯಾಜ್ಯ ಹಾಗೂ ವ್ಯಾಜ್ಯ ಪೂರ್ವಪ್ರಕರಣಗಳಲ್ಲಿ ಪಕ್ಷಗಾರರು ಪರಿಶಿಷ್ಟ ಜಾತಿ,ಪರಿಶಿಷ್ಟ ವರ್ಗಕ್ಕೆ ಸೇರಿದ್ದಲ್ಲಿ, ಮಹಿಳೆಯರು,ದಿವ್ಯಾಂಗರು,ಕಾರ್ಮಿಕರು,ಪ್ರವಾಹಕ್ಕಿಡಾದವರುಕಾನೂನು ಸೇವಾ ಪ್ರಾಧಿಕಾರವನ್ನುಸಂಪರ್ಕಿಸಿದ್ದಲ್ಲಿ, ಅವರಿಗೆ ವಕೀಲರನ್ನುಉಚಿತವಾಗಿನೇಮಕಮಾಡಿಸೂಕ್ತಪರಿಹಾರವನ್ನುಕಲ್ಪಿಸಿಕೊಡಲಾಗುವುದು ಎಂದು ಹೇಳಿದರು.
ಕೊರೊನಾ ಬಗ್ಗೆ ಆತಂಕವಿರುವವರು ಆನ್‌ಲೈನ್ ಮುಖಾಂತರ ಹಾಗೂ ವಕೀಲರು ವಿಮಾಕಂಪನಿ, ಇಲಾಖಾ ಅಧಿಕಾರಿಗಳು ವಿಡಿಯೋಕಾನ್ಫರೆನ್ಸ್ ಮೂಲಕವು ಸಹ ಹಾಜರಾಗಿಪ್ರಕರಣಗಳನ್ನು ಇತ್ಯರ್ಥಗೊಳಿಸಿಕೊಳ್ಳಬಹುದುಎಂದು ತಿಳಿಸಿದರು.ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದಸದಸ್ಯ ಕಾರ್ಯದರ್ಶಿ ಎಂ.ಶ್ರೀಧರ್ ಮಾತನಾಡಿ,ಅದಾಲತ್‌ನಲ್ಲಿ ರಾಜಿಯಾಗುವುದರಿಂದಸಮಯ, ಶ್ರಮ, ಹಣದ ಉಳಿತಾಯವಾಗುತ್ತದೆ.ಕೋರ್ಟ್ ಶುಲ್ಕ ಪಾವತಿಸುವ ಅಗತ್ಯವಿರುವುದಿಲ್ಲಎಂದರು.ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಉಮ್ಮತ್ತೂರುಇಂದುಶೇಖರ್, ಪ್ರಧಾನ ಕಾರ್ಯದರ್ಶಿಮಂಜು ಹರವೆ ಪತ್ರಿಕಾಗೋಷ್ಠಿಯಲ್ಲಿಹಾಜರಿದ್ದರು.