Advertisement

ಲೋಕ ಅದಾಲತ್‌; 1793 ಕೇಸ್‌ ರಾಜಿ

09:28 AM Jul 14, 2019 | Team Udayavani |

ಧಾರವಾಡ: ಜಿಲ್ಲೆಯಲ್ಲಿ ಶನಿವಾರ ಜರುಗಿದ ರಾಷ್ಟ್ರೀಯ ಲೋಕ್‌ ಅದಾಲತ್‌ನಲ್ಲಿ ವಿವಿಧ ನ್ಯಾಯಾಲಯಗಳಲ್ಲಿ ಬಾಕಿ ಇರುವ 1793 ಪ್ರಕರಣಗಳಲ್ಲಿ ರಾಜಿ ಸಂಧಾನ ಮಾಡಿಸಲಾಗಿದ್ದು, ಸುಮಾರು 11,33,27,528 ರೂ. ಪರಿಹಾರ ಚೆಕ್‌ ವಿತರಿಸಲಾಗಿದೆ ಎಂದು ಪ್ರಧಾನ ಜಿಲ್ಲಾ ಹಾಗೂ ಸತ್ರ ನ್ಯಾಯಾಧೀಶರಾದ ಈಶಪ್ಪ ಕೆ. ಭೂತೆ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

Advertisement

ರಾಷ್ಟ್ರೀಯ ಲೋಕ್‌ ಅದಾಲತ್‌ ಕಾರ್ಯಕ್ರಮದಲ್ಲಿ ಕಕ್ಷಿದಾರರ ಒಪ್ಪಿಗೆ ಮೇರೆಗೆ ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ಇತ್ಯರ್ಥಪಡಿಸಿ ತೀರ್ಪು ಪ್ರಕಟಿಸಲು ಧಾರವಾಡದಲ್ಲಿ 14, ಹುಬ್ಬಳ್ಳಿಯಲ್ಲಿ 18 ಮತ್ತು ಕಲಘಟಗಿ 2, ಕುಂದಗೋಳ 2, ನವಲಗುಂದ 2 ಸೇರಿದಂತೆ ವಿವಿಧ ತಾಲೂಕುಗಳಲ್ಲಿರುವ ಎಲ್ಲ ನ್ಯಾಯಾಲಯಗಳಲ್ಲಿ ಒಟ್ಟು 38 ನ್ಯಾಯಪೀಠಗಳನ್ನು ಸ್ಥಾಪಿಸಲಾಗಿತ್ತು. ಅದರಂತೆ 38 ಜನ ನ್ಯಾಯಾಧಿಧೀಶರು ಕಾರ್ಯ ನಿರ್ವಹಿಸಿ ಪ್ರಕರಣಗಳನ್ನು ಇತ್ಯರ್ಥ ಪಡಿಸಿದ್ದಾರೆ ಎಂದರು.

ಎಲ್ಲೆಲ್ಲಿ ಎಷ್ಟೆಷ್ಟು ಪ್ರಕರಣ ಇತ್ಯರ್ಥ?: ಧಾರವಾಡ ಜಿಲ್ಲಾ ನ್ಯಾಯಾಲಯದಲ್ಲಿ 704, ಹುಬ್ಬಳ್ಳಿ ನ್ಯಾಯಾಲಯಗಳಲ್ಲಿ 834, ನವಲಗುಂದ ನ್ಯಾಯಾಲಯಗಳಲ್ಲಿ 139, ಕಲಘಟಗಿ ನ್ಯಾಯಾಲಯಗಳಲ್ಲಿ 70 ಮತ್ತು ಕುಂದಗೊಳ ನ್ಯಾಯಾಲಯಗಳಲ್ಲಿ 46 ಪ್ರಕರಣಗಳು ರಾಜಿ ಸಂಧಾನದಲ್ಲಿ ಮುಕ್ತಾಯಗೊಂಡಿವೆ. ಈ ಪೈಕಿ ವಿವಿಧ ಬ್ಯಾಂಕ್‌ ವಸೂಲಾತಿಯ 213 ಪ್ರಕರಣಗಳಲ್ಲಿ 28,85,557 ರೂ., ವಿದ್ಯುತ್‌ ಬಾಕಿ ವಸೂಲಾತಿಯ ಆರು ಪ್ರಕರಣಗಳಲ್ಲಿ 10,700 ರೂ., ಮೋಟಾರ್‌ ವಾಹನ ಅಪಘಾತ ವಿಮೆಯ 142 ಪ್ರಕರಣಗಳಲ್ಲಿ 3,53,47000 ರೂ., ಚೆಕ್‌ ಅಮಾನ್ಯ ಕುರಿತ 558 ಪ್ರಕರಣಗಳಲ್ಲಿ 2,93,85,907 ರೂ., 418 ದಿವಾನಿ ಪ್ರಕರಣಗಳಲ್ಲಿ 1,95,94,841 ರೂ., 493 ಅಪರಾಧ ಪ್ರಕರಣಗಳಲ್ಲಿ 3,16,000 ರೂ. ಮತ್ತು ಕೌಟುಂಬಿಕ ನ್ಯಾಯಾಲಯದ 105 ಪ್ರಕರಣಗಳು ಸೇರಿದಂತೆ ಒಟ್ಟು 1793 ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ಇತ್ಯರ್ಥ ಪಡಿಸಲಾಗಿದೆ ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next