Advertisement

ಮನೆಯ ವಿಭಿನ್ನ ಅಲಂಕಾರಕ್ಕೆ ಲೆಗೊ

11:11 AM Mar 08, 2020 | mahesh |

ಮನೆಯನ್ನು ಅಂದಗಾಣಿಸಲು ಮಾರುಕಟ್ಟೆಯಲ್ಲಿ ಹಲವಾರು ಬಗೆಯ ಅಲಂಕಾರಿ ವಸ್ತುಗಳು ಲಭ್ಯವಿದೆ. ಎಷ್ಟೇ ಅಂದಗಾಣಿಸಿದರೂ ಇನ್ನೂ ಏನಾದರೂ ಹೊಸತಿದ್ದರೆ ಒಳ್ಳೆಯದಿತ್ತು ಎನ್ನುವ ಭಾಸ ಸಾಮಾನ್ಯವಾಗಿದೆ. ಅಂಥ ಮನೋಭಾವವುಳ್ಳವರು ಒಮ್ಮೆ ಲೆಗೋವನ್ನು ಬಳಸಿ ನಿಮ್ಮ ಮನೆಯನ್ನು ವಿಭಿನ್ನವಾಗಿ ವಿನ್ಯಾಸಗೊಳಿಸಲು ಸಾಧ್ಯವಾಗಿದೆ. ಏನಿದು ಲೆಗೋ, ಉಪಯುಕ್ತತೆ ಹೇಗಿರುತ್ತದೆ ಎಂಬುದರ ಕುರಿತಾಗಿ ಈ ಲೇಖನದಲ್ಲಿ ನೀಡಲಾಗಿದೆ.

Advertisement

ಲೆಗೊ
ಪಾಶ್ಚಾತ್ಯರಿಂದ ಈ ಒಂದು ಪರಿಕಲ್ಪನೆಯೂ ಹುಟ್ಟಿಕೊಂಡಿದ್ದು ಮೊದ ಮೊದಲು ಮಕ್ಕಳ ಆಟಿಕೆಯ ವಸ್ತುವಾಗಿ ಬಳಸುತ್ತಿದ್ದರಂತೆ. ಇದರಿಂದ ಮಕ್ಕಳ ಮನೆ ತಯಾರಿ, ಕಟ್ಟಡ ತಯಾರಿ ಮಾಡುತ್ತ ಅವರ ಬೌದ್ಧಿಕ ಮಟ್ಟ ಹೆಚ್ಚಿಸುವ ಆಲೋಚನೆಯಿಂದ ಪೋಷಕರು ಲೆಗೊ ಬಳಕೆಗೆ ಆದ್ಯತೆ ನೀಡುತ್ತಿದ್ದರು. ಕಾಲಕ್ರಮೇಣ ಮಕ್ಕಳ ಕೋಣೆಗಳನ್ನು ಶೃಂಗರಿಸಲು ಬಳಸಿ ಇದೀಗ ಮನೆಯನ್ನು ವಿಭಿನ್ನವಾಗಿ ವಿನ್ಯಾಸಗೊಳಿಸುವ ನೆಲೆಯಲ್ಲಿ ಲೆಗೊ ಬಳಕೆಯಾಗುತ್ತಾ ಬಂದಿದ್ದು ನಿಮ್ಮ ಮನೆಯನ್ನು ವರ್ಣರಂಜಿತವಾಗಿ ಶೃಂಗರಿಸಲು ಇದೊಂದು ಉಪಯುಕ್ತವಿಧಾನವಾಗಿದೆ.

ಕ್ರಿಯಾಶೀಲತೆ ಅಗತ್ಯ
ಇದರಲ್ಲಿ ಅನಿಯಮಿತ ಅವಕಾಶಗಳು ಮತ್ತು ಆಕಾರಗಳು ಲಭ್ಯವಿರುವುದರಿಂದ ವಿನ್ಯಾಸ ಸುಲಭವು ಮತ್ತು ಸುಂದರವಾಗಿ ಕಾಣಲು ಸಾಧ್ಯವಿದೆ. ಹಾಗಿದ್ದರೂ ನಿಮ್ಮ ಕ್ರೀಯಾಶೀಲತೆ ಮತ್ತು ಸೃಜನಶೀಲತೆ ಸಹ ವಿನ್ಯಾಸದ ಮೇಲೆ ಪ್ರಭಾವ ಬೀರಲಿದ್ದು ವಿಭಿನ್ನ ವಿನ್ಯಾಸದ ಆಲೋಚನೆಯಲ್ಲಿ ನೀವು ತೋಡಗುವುದು ಅತ್ಯಗತ್ಯವಾಗಿದೆ.

ಕೋಣೆ ವಿಭಾಗ ( ರೂಂ ಡಿವೈಡರ್‌)
ಲಿಗೊ ವನ್ನು ಬಳಸಿಕೊಂಡು ಕೋಣೆಯನ್ನು ವಿಭಾಗಿಸಲು ಸಾಧ್ಯವಿದೆ. ಇದರಲ್ಲಿ ವಿಭಿನ್ನ ವಾದ ಆಕಾರಗಳು ಲಭ್ಯವಿದ್ದು ಸಾಮಾನ್ಯವಾಗಿ ಚೌಕಾಕಾರವನ್ನು ರೂಂ ಡಿವೈಡರ್‌ ಗೆ ಬಳಸುತ್ತಾರೆ. ಡಿವೈರ್‌ ಬಣ್ಣವನ್ನು ಆಯ್ಕೆ ಮಾಡುವಾಗ ನಿಮ್ಮ ಮನೆಯ ಟೈಲ್ಸ್‌ ಮತ್ತು ಫ್ಲೋರ್‌ ಬಣ್ಣವನ್ನು ಹೊಂದಿಕೊಳ್ಳವಂತೆ ಆಯ್ಕೆ ಮಾಡುವುದು ಒಳ್ಳೆಯದು.

ಗೋಡೆ ಅಲಂಕಾರ
ವಿಭಿನ್ನ ವಿನ್ಯಾಸಗಳಿಂದ ಗೋಡೆಯನ್ನು ಅಂದಗಾಣಿಸಲು ಲೆಗೋ ಬಳಕೆಯಾಗುತ್ತಿದೆ. ಲೆಗೋ ಬಾಕ್ಸ್‌ಗಳನ್ನು ಬಳಸಿ ಗಡಿಯಾರ, ಹೂ ಚಿತ್ತಾರಗಳನ್ನು ಕೂಡ ನೀವೆ ತಯಾರಿಸ ಬಹುದು. ಅಷ್ಟೇ ಅಲ್ಲದೇ ಇಡೀ ಗೊಡೆಯನ್ನೇ ಇದರಿಂದ ತಯಾರಿಸಲು ಸಾಧ್ಯವಿದ್ದು, 55 ಸಾವಿರ ಲೆಗೊ ಚಿತ್ತಾರ ಮನೆಯನ್ನು ಅಂದಗಾಣಿಸುತ್ತದೆ. ಆದರೆ ಇಂದು ವಿನ್ಯಾಸ ಕಾರರು ವಿಭಿನ್ನವದ ಆಲೋಚನೆಯ ನೆಲೆಯಲ್ಲಿ ಗುರುತಿಸಿಕೊಂಡಿದ್ದು ಲೆಗೋ ಒಂದು ಕಲೆಯಾಗಿ ಆದಾಯದ ಮೂಲವಾಗಿ ಕಾರ್ಯ ನಿರ್ವಹಿಸುತ್ತದೆ ಎಂದರೂ ತಪ್ಪಾಗಲಾರದು.

Advertisement

ಇತರ ವಿನ್ಯಾಸ
ಇದರಿಂದ ಟೇಬಲ್‌, ಬೇಡ್‌ ರೂಂ ಲೈಟ್‌, ಕೀ ಚೈನ್‌ ಹೋಲ್ಡ್‌ಡರ್‌, ಸ್ಟಾಂಡ್‌, ಟಿಶೂ ಬಾಕ್ಸ್‌ ಇನ್ನೂ ಹಲವಾರು ವಿನ್ಯಾಸಗಳನ್ನು ಲೆಗೋದಲ್ಲಿ ತಯಾರಿಸಬಹುದು. ವಿನ್ಯಾಸವನ್ನು ನೀವು ಮಾಡಬಹುದು ಇಲ್ಲವೇ ಮಾರುಕಟ್ಟೆಯಲ್ಲಿ ಸಿದ್ಧಗೊಂಡದ್ದನೆ ಬಳಸಿ ನಿಮ್ಮ ಮನೆಯನ್ನು ವಿಭಿನ್ನವಾಗಿ ಅಂದಗಾನಿಸಲು ಲೆಗೊವನ್ನು ಒಮ್ಮೆ ಬಳಸಿ ನೋಡಿ.

ಏನಿದರ ಉಪಯುಕ್ತತೆ ?
 ಕಡಿಮೆ ವೆಚ್ಚದಲ್ಲಿ ಮನೆಯನ್ನು ಅಂದಗಾಣಿಸಲು ಸಾಧ್ಯ.
 ನೂರಕ್ಕೂ ಮಿಕ್ಕಿದ ಬಣ್ಣಗಳಲ್ಲಿ ಲೆಗೋ ಲಭ್ಯವಿದ್ದು ಮನೆಯನ್ನು ಚಿತ್ತಾರಮಯ ಗೊಳಿಸಲು ಸಾಧ್ಯ.
 ಬಳಕೆಯಲ್ಲಿ ಸರಳತೆಯಿದ್ದು ನಿಮ್ಮ ಕ್ರೀಯಾಶೀಲತೆಯ ಮೆರುಗು ತಿಳಿಯಲು ಸಾಧ್ಯ.
 ಮನೆಗೆ ಬಂದ ಅತಿಥಿಗಳಿಗೂ ಈ ವಿನ್ಯಾಸ ಆಕರ್ಷಣಿಯ ಬಿಂದುವಾಗಿ ಕಂಗೊಳಿಸಲಿದೆ.
 ಮಕ್ಕಳ ಕೋಣೆಯನ್ನು ಇದರಿಂದ ಶೃಂಗರಿಸಿದರೆ ನೋಡಲು ಸುಂದರವಾಗಿ ಕಾಣುವುದರ ಜತೆಗೆ ಖುಷಿಯ ಅನುಭವ ನೀಡುವುದು.
 ಅತೀ ಮುಖ್ಯವಾಗಿ ನಿಮಗೆ ಬೇಕಾದಾಗ ಬಳಸಿ ಬೇಡವೆಂದಾದರೆ ತೆಗೆಯಲು ಸಾಧ್ಯವಿದೆ.

– ರಾಧಿಕಾ, ಕುಂದಾಪುರ

Advertisement

Udayavani is now on Telegram. Click here to join our channel and stay updated with the latest news.

Next