Advertisement

BJP ಅವಧಿಯ 21 ಹಗರಣಕ್ಕೂ ತಾರ್ಕಿಕ ಅಂತ್ಯ: ಸಚಿವ ಪ್ರಿಯಾಂಕ್‌ ಖರ್ಗೆ

10:45 PM Sep 02, 2024 | Team Udayavani |

ಬೆಂಗಳೂರು: ಕೋವಿಡ್‌ ಹಗರಣ ಕುರಿತು ನಿವೃತ್ತ ನ್ಯಾ| ಮೈಕಲ್‌ ಕುನ್ಹಾ ನೇತೃತ್ವದ ಆಯೋಗ ಮಧ್ಯಾಂತರ ವರದಿ ಸಲ್ಲಿಸಿದೆ. ಅದರಲ್ಲಿ ಏನಿದೆ ಎಂಬುದು ನಮಗೇ ಗೊತ್ತಿಲ್ಲ. ಕುಂಬಳಕಾಯಿ ಕಳ್ಳ ಎಂದರೆ ಡಾ| ಸುಧಾಕರ್‌ ಹೆಗಲು ಮುಟ್ಟಿ ನೋಡಿಕೊಳ್ಳುವುದೇಕೆ? ಎಂದು ಪ್ರಶ್ನಿಸಿರುವ ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್‌ ಖರ್ಗೆ, ಬಿಜೆಪಿ ಅವಧಿಯ 21 ಹಗರಣಗಳನ್ನೂ ತಾರ್ಕಿಕ ಅಂತ್ಯ ಕಾಣಿಸುವವರೆಗೆ ಬಿಡುವುದಿಲ್ಲ ಎಂದೂ ಹೇಳಿದ್ದಾರೆ.

Advertisement

ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ನ್ಯಾ| ಕುನ್ಹಾ ವರದಿಯಲ್ಲಿ ಅಧಿಕಾರಿಗಳಿಂದ ಲೋಪ ಆಗಿದೆ, ಕೆಲವು ಖರೀದಿ ಪ್ರಕ್ರಿಯಗಳಲ್ಲಿ ಮೇಲ್ನೋಟಕ್ಕೆ ತಪ್ಪು ಕಂಡುಬಂದಿದೆ ಎಂಬುದನ್ನು ಸಹಜವಾಗಿ ಮಾತನಾಡುವಾಗ ಹೇಳಿದ್ದಾರೆ. ವರದಿಯಲ್ಲಿ ಏನಿದೆ ಎಂಬುದನ್ನು ಸಂಪುಟದಲ್ಲಿ ಚರ್ಚಿಸಿ ಅಗತ್ಯ ಕ್ರಮ ತೆಗೆದುಕೊಳ್ಳುತ್ತೇವೆ ಎಂದರು.

ವಿಚಾರಣ ಆಯೋಗದ ಮೇಲೆ ಒತ್ತಡ ಹಾಕಿ ವರದಿ ಪಡೆದಿಲ್ಲ. ಒಂದು ವೇಳೆ ಒತ್ತಡ ಹಾಕಿದ್ದರೆ ತಪ್ಪೇನು? ಅದರಲ್ಲಿ ಕಾನೂನುಬಾಹಿರ ಏನಿದೆ? ಜನ ನಮ್ಮ ಬಗ್ಗೆ ಅನುಮಾನ ಪಡುತ್ತಾರೆ ಸ್ವಲ್ಪ ಬೇಗ ಕೊಡಿ ಎಂದು ಹೇಳಿ ವರದಿ ಪಡೆಯುವುದು ನಮ್ಮ ಹಕ್ಕಲ್ಲವೇ? ಒಂದು ವೇಳೆ ಮುಡಾ ಪ್ರಕರಣ ಇರಲಿಲ್ಲ ಎಂದಿದ್ದರೆ ಈ ಮಾತು ಬರುತ್ತಿತ್ತಾ? ಎಂದು ಮರು ಪ್ರಶ್ನೆ ಹಾಕಿದರು.

ನಾವೇನು ರಾಜ್ಯಪಾಲರೇ?
ಕೋವಿಡ್‌ ವೇಳೆ ನಾವೆಲ್ಲ ಮನೆಯಲ್ಲಿದ್ದೆವು ಎಂದು ಸುಧಾಕರ್‌ ಹೇಳುತ್ತಾರೆ. ವಲಸೆ ಕಾರ್ಮಿಕರಿಗೆ ಉಚಿತ ಸಾರಿಗೆ ವ್ಯವಸ್ಥೆ ಕೊಡಿ ಎಂದು ನಾವು ಬೀದಿಗಿಳಿದು ಹೋರಾಟ ಮಾಡಿದ ಅನಂತರವೇ ಇವರು ಕೊಟ್ಟಿದ್ದು. ನಾವು ಸಿದ್ಧಪಡಿಸಿದ್ದ 1 ಸಾವಿರ ಹಾಸಿಗೆಯನ್ನು ನಮಗೆಲ್ಲಿ ಹೆಸರು ಬರುತ್ತದೋ ಎಂದು ಕೊಟ್ಟರೂ ತೆಗೆದುಕೊಂಡಿರಲಿಲ್ಲ. ಮೋದಿ ಫೋಟೋ ಹಾಕುತ್ತೇವೆ ಎಂದ ಅನಂತರ ಒಪ್ಪಿದರು. ಇದೊಂದೇ ಹಗರಣ ಎಂದಲ್ಲ ಬಿಜೆಪಿ ಅವಧಿಯ 21 ಹಗರಣಗಳನ್ನು ತನಿಖೆಗೆ ಒಪ್ಪಿಸಿದ್ದೇವೆ. ಸಾಕ್ಷ್ಯ ಇಲ್ಲದೆ ಏನೂ ಮಾಡಲಾಗುವುದಿಲ್ಲ. ಹಾಗೆ ಮಾಡಲು ನಾವೇನು ರಾಜ್ಯಪಾಲರೇ ಎಂದೂ ಪ್ರಶ್ನಿಸಿದರು.

 

Advertisement
Advertisement

Udayavani is now on Telegram. Click here to join our channel and stay updated with the latest news.

Next