Advertisement
ಮಾತ್ರವಲ್ಲ, ಬಿಸಿಸಿಐ ಆಡಳಿತಾಧಿಕಾರಿ ಗಳು ಮುಂದಿನ ಮೂರು ವಾರಗಳಲ್ಲಿ ಲೋಧಾ ಶಿಫಾರಸು ಜಾರಿಗೆ ತರುವಲ್ಲಿ ಪ್ರತಿಕ್ರಿಯೆ ನೀಡುವಲ್ಲಿ ವಿಫಲವಾದರೆ ನ್ಯಾಯಾಂಗ ನಿಂದನೆಯ ಗಂಭೀರ ಪರಿಣಾಮ ಎದುರಿಸಬೇಕಾಗಿ ಬರಬೇಕಾ ಗುತ್ತದೆ ಎಂದು ಖಡಕ್ ಎಚ್ಚರಿಕೆ ನೀಡಿದೆ. ಜು.18ರಂದು ನ್ಯಾಯಾಲಯ ಲೋಧಾ ಶಿಫಾರಸು ಅನ್ನುಜಾರಿಗೆ ತನ್ನಿ ಎಂದು ಬಿಸಿಸಿಐಗೆ ಸೂಚಿಸಿತ್ತು. ಆದರೆ ಇದುವರೆಗೆ ಯಾವುದೇ ಕ್ರಮವನ್ನೂ ಬಿಸಿಸಿಐ ತೆಗೆದುಕೊಂಡಿಲ್ಲ. ಇಂದು ನ್ಯಾಯಾಲಯದ ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ.
ಗುರುವಾರ ಸುಪ್ರೀಂ ಕೋರ್ಟ್‌ನ ತ್ರಿ ಸದಸ್ಯ ನ್ಯಾಯಪೀಠ ವಿಚಾರಣೆ ನಡೆಸಿತು. ಬಿಸಿಸಿಐ ಹಂಗಾಮಿ ಅಧ್ಯಕ್ಷ ಸಿ.ಕೆ.ಖನ್ನಾ, ಹಂಗಾಮಿ ಕಾರ್ಯದರ್ಶಿ ಅಮಿತಾಬ್ ಚೌಧರಿ ಹಾಗೂ ಖಜಾಂಚಿ ಅನಿರುದ್ಧ್ ಚೌಧರಿಯನ್ನು ಇದೇ ವೇಳೆ ನ್ಯಾಯಾಲಯ ತರಾಟೆಗೆ ತೆಗೆದುಕೊಂಡಿತು. ನೀವು ಲೋಧಾ ಶಿಫಾರಸು ಜಾರಿಗೆ ತರುವಲ್ಲಿ ಅನಗತ್ಯ ವರ್ತನೆ ಪ್ರದರ್ಶಿಸುತ್ತಿದ್ದೀರಿ. ಇಷ್ಟು ದಿನವಾದರೂ ಲೋಧಾ ಶಿಫಾರಸು ಅನ್ನು ಬಿಸಿಸಿಐನಲ್ಲಿ ಏಕೆ ಜಾರಿಗೆ ತರಲಾಗಲಿಲ್ಲ. ನ್ಯಾಯಾಲಯ ನೀಡಿರುವ ಆದೇಶವನ್ನು ನೀವು ಜಾರಿಗೆ ತರಲೇಬೇಕು. ಇದುವರೆಗೆ ನಾವು ಆದೇಶವನ್ನು ನೀಡಿದ್ದೇವೆ ಹೊರತೂ ಬಿಸಿಸಿಐನಲ್ಲಿ ಯಾವ ಬದಲಾವಣೆಯೂ ಆಗಿಲ್ಲ. ಈ ಮೂಲಕ ಸ್ಟಾಕ್ ಹೋಲ್ಡರ್, ಬಿಸಿಸಿಐ ಆಡಳಿತಾಧಿಕಾರಿ ನಾವು ಕೆಲವು ವಿಷಯಗಳನ್ನು ಸ್ಪಷ್ಟಪಡಿಸಲು ಬಯಸುತ್ತೇವೆ. ನೀವು ಈ ಕುರಿತಂತೆ ನ್ಯಾಯಾಲಯಕ್ಕೆ ಶೀಘ್ರದಲ್ಲೇ ಪ್ರತಿಕ್ರಿಯೆ ನೀಡಬೇಕು. ನಿಮ್ಮ ಅಭಿಪ್ರಾಯವನ್ನು ತಿಳಿಸಲೇ ಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಗಂಭೀರ ಕ್ರಮವನ್ನು ಎದುರಿಸಿ ಎಂದು ಚಾಟಿ ಬೀಸಿದೆ. ಶಿಫಾರಸು ಜಾರಿಗೆ ಸಜ್ಜಾಗಿದ್ದೇವೆ
ಲೋಧಾ ಶಿಫರಸು ಜಾರಿಗೆ ಸಂಬಂಧಿಸಿ ದಂತೆ ಬಿಸಿಸಿಐ ಕರಡು ಪ್ರತಿ ಸಿದ್ಧಪಡಿಸಿದೆ. ಇನ್ನು ದೊಡ್ಡ ಕೆಲಸವೇನೂ ಉಳಿದಿಲ್ಲ. ಇದಕ್ಕೆ ಸಲಹೆಗಳು ಬರುವುದಷ್ಟೇ ಬಾಕಿ ಇದೆ ಎಂದು ಬಿಸಿಸಿಐ ಪರ ವಕೀಲರು ನ್ಯಾಯಾಲಯಕ್ಕೆ ವರದಿ ನೀಡಿದರು.
Related Articles
Advertisement