Advertisement

ಮಿಡತೆ ದಾಳಿ: ಅಡಕೆ ತೋಟಕ್ಕೆ ಅಧಿಕಾರಿಗಳ ಭೇಟಿ

08:26 AM Jun 12, 2020 | Suhan S |

ಶೃಂಗೇರಿ: ಮಿಡತೆ ದಾಳಿಗೆ ತುತ್ತಾಗಿರುವ ಕೂಗೋಡು ಗ್ರಾಪಂ ವ್ಯಾಪ್ತಿಯ ಕೊಚ್ಚವಳ್ಳಿ ಅಶೋಕ್‌ ಹೆಗ್ಡೆ ಅವರ ಅಡಕೆ ತೋಟಕ್ಕೆ ರೈತಸಂಘದ ಪದಾಧಿಕಾರಿಗಳು ಹಾಗೂ ತೋಟಗಾರಿಕೆ ಇಲಾಖೆ ಅಧಿಕಾರಿಗಳು ಗುರುವಾರ ಭೇಟಿ ನೀಡಿ ಪರಿಶೀಲಿಸಿದರು.

Advertisement

ವಿದ್ಯುತ್‌ ಸ್ಥಗಿತದಿಂದ ನೀರಿನ ಲಭ್ಯತೆ ಇಲ್ಲದೇ ಕೀಟನಾಶಕ ಸಿಂಪಡಣೆಗೆ ಮುಂದೂಡಿದ್ದಾರೆ. ಹಾಗಾಗಿ, ಗುರುವಾರ ಅಡಕೆ ತೋಟದಲ್ಲಿ ಮಿಡತೆ ಕಾಣುತ್ತಿದ್ದು, ಕಾಳು ಮೆಣಸಿನ ಬಳ್ಳಿಯ ಮೇಲೂ ಮಿಡತೆ ದಾಳಿ ಮಾಡಿದೆ. ಈ ಹಿನ್ನೆಲೆಯಲ್ಲಿ ರೈತರಿಗೆ ಸಲಹೆ ನೀಡಿರುವ ತೋಟಗಾರಿಕೆ ಇಲಾಖೆ, ಮಿಡತೆ ನಿಯಂತ್ರಣ ಕ್ರಮ ಸೂಚಿಸಿದೆ. ಉತ್ತರ ಪ್ರದೇಶದಲ್ಲಿ ಕಂಡು ಬಂದಿರುವ ಮಿಡತೆ ಇದಲ್ಲ ಎಂದು ಸ್ಪಷ್ಟಪಡಿಸಲಾಗಿದ್ದು,ಮರಳುಗಾಡಿನ ಮಿಡತೆಯಲ್ಲ. ಈ ಮಿಡತೆ ಮಲೆನಾಡು ಭಾಗದಲ್ಲಿ ಹಿಂದಿನಿಂದಲೂ ಇದ್ದು, ನಿರ್ದಿಷ್ಟ ಕಳೆ, ಸಸ್ಯವನ್ನು ತಿನ್ನುತ್ತವೆ. 1 ಲೀ. ನೀರಿಗೆ 2 ಮಿ.ಲೀ. ಕ್ಲೋರೋಫೈರಿಫಾಸ್‌ ಕೀಟನಾಶಕ ಬಳಸಬೇಕು. ದ್ರಾವಣವನ್ನು ಗರಿ ಮತ್ತು ಕಾಫಿ ಎಲೆಯ ಮೇಲೂ ಸಿಂಪಡಣೆ ಮಾಡಬೇಕು. ಬೊರ್ಡೋ ದ್ರಾವಣದೊಂದಿಗೆ ಮಿಶ್ರಣ ಮಾಡಬಾರದು. ಕೃಷಿ ಇಲಾಖೆಯಲ್ಲಿ ಈ ಔಷ ಧ ಲಭ್ಯವಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಎ.ಬಿ.ಸಂಜಯ್‌ ಹಾಗೂ ಸಹಾಯಕ ನಿರ್ದೇಶಕ ಶ್ರೀಕೃಷ್ಣ, ಅಡಕೆ ಸಂಶೋಧನಾ ಕೇಂದ್ರದ ನಾರಾಯಣಸ್ವಾಮಿ, ಜಿಪಂ ಸದಸ್ಯ ಬಿ.ಶಿವಶಂಕರ್‌, ತಾಪಂ ಅಧ್ಯಕ್ಷೆ ಜಯಶೀಲ, ರೈತಸಂಘದ ಅಧ್ಯಕ್ಷ ಕಾನುವಳ್ಳಿ ಚಂದ್ರಶೇಖರ್‌, ಪದಾಧಿಕಾರಿಗಳಾದ ಶ್ರೀಧರರಾವ್‌, ಚನ್ನಕೇಶವ ಮತ್ತಿತರರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next