Advertisement
ಹೌದು, ಜಿಲ್ಲೆಯ 198 ಗ್ರಾಪಂ. ವ್ಯಾಪ್ತಿಯಲ್ಲೂ ಸ್ಥಳೀಯ ಜನ ಪ್ರತಿನಿಧಿಗಳು ಒಳಗೊಂಡ ಟಾಸ್ಕ್ಪೋರ್ಸ್ ಸಮಿತಿ ರಚಿಸಿದ್ದು, ಈ ಸಮಿತಿ ಸಕ್ರಿಯವಾಗಿ ಕೆಲಸ ಮಾಡುತ್ತಿದೆ. ಜತೆಗೆ ಆಯಾ ಗ್ರಾಮದಲ್ಲಿ ಕೋವಿಡ್-19ರ ಕುರಿತು ಜಾಗೃತಿಗೆ ಜಿಪಂನಿಂದ ಆಶಾ, ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸ್ತ್ರೀಶಕ್ತಿ ಸಂಘಗಳ ಮಹಿಳೆಯರು ಒಳಗೊಂಡ ಜಾಗೃತಿ ಸಮಿತಿ ಕೂಡ ಮಾಡಿದ್ದು, ಈ ಸಮಿತಿಯ ಮಹಿಳೆಯರು, ಕೈಯಲ್ಲಿ ಲಾಠಿ ಹಿಡಿದು, ರಸ್ತೆಗಿಳಿಯುತ್ತಿದ್ದಾರೆ. ತುರ್ತು ಕೆಲಸವಿಲ್ಲದಿದ್ದರೂ ಮನೆಯಿಂದ ಹೊರಗೆ ಬರುವ ಜನರತ್ತ ಲಾಠಿ ಬೀಸಿ, ಮನೆ ಸೇರಿಕೊಳ್ಳಲು ಎಚ್ಚರಿಕೆ ನೀಡುತ್ತಿದ್ದಾರೆ. ಜತೆಗೆ ಕೋವಿಡ್-19ರ ಕುರಿತು ಜಾಗೃತಿಯನ್ನೂ ಮೂಡಿಸುತ್ತಿದ್ದು, ಕಡ್ಡಾಯವಾಗಿ ಮಾಸ್ಕ್ ಧರಿಸುವಂತೆ ತಿಳಿ ಹೇಳುತ್ತಿದ್ದಾರೆ. Advertisement
ಲಾಕ್‌ಡೌನ್; ಲಾಠಿ ಹಿಡಿದ ಮಹಿಳೆಯರು!
05:08 PM Mar 30, 2020 | Suhan S |
Advertisement
Udayavani is now on Telegram. Click here to join our channel and stay updated with the latest news.