Advertisement
ಅಶೋಕ ಸರ್ಕಲ್: ಸದಾ ಜನ ಮತ್ತು ವಾಹನ ದಟ್ಟಣೆ ಇರುವ ಸರ್ಕಲ್ ಇದು. ಕಳೆದ ಭಾನುವಾರದ ಹಾಗೆ ಬಸ್ಸುಗಳು ರಸ್ತೆಗಿಳಿದಿರಲಿಲ್ಲ. ವಾಹನ ಸಂಖ್ಯೆಯೂ ವಿರಳವಾಗಿತ್ತು. ಬಸ್ ನಿಲ್ದಾಣದ ಮುಂದಿನ ಅಂಗಡಿಗಳು, ಹೊಟೇಲ್ ಗಳು ಬಂದ್ ಆಗಿದ್ದವು. ರಸ್ತೆಯಲ್ಲಿ ಪೊಲೀಸರು ಬ್ಯಾರಿಕೇಡ್ ಹಾಕಿದ್ದರು.
Related Articles
Advertisement
ಅಮೀರ್ ಅಹಮದ್ ಸರ್ಕಲ್ ಬಂದ್: ಪ್ರಮುಖ ಸರ್ಕಲ್‌ನಲ್ಲಿ ಸಂಪೂರ್ಣ ಬ್ಯಾರಿಕೇಡ್ ಹಾಕಲಾಗಿತ್ತು. ಸರ್ಕಲ್ ಸುತ್ತಲೂ ಬ್ಯಾರಿಕೇಡ್ ಹಾಕಲಾಗಿದ್ದು ಯಾವುದೇ ಮಾರ್ಗದಿಂದ ಬಂದರೂ ಸರ್ಕಲ್‌ಗೆ ಬರಲು ಸಾಧ್ಯವಿರಲಿಲ್ಲ.
ನೆಹರೂ ರಸ್ತೆ, ಗೋಪಿ ಸರ್ಕಲ್: ನೆಹರೂ ರಸ್ತೆಯಲ್ಲಿ ಎಲ್ಲ ಅಂಗಡಿಗಳು ಬಂದ್ ಆಗಿದ್ದವು. ಹಾಲು ಮಾರಾಟ ಮಳಿಗೆ ಮತ್ತು ಮೆಡಿಕಲ್ ಶಾಪ್‌ಗ್ಳನ್ನು ಮಾತ್ರ ಓಪನ್ ಮಾಡಲಾಗಿತ್ತು. ಉಳಿದಂತೆ ವಾಹನ ಸಂಚಾರ ಕಡಿಮೆ ಇತ್ತು. ಅಲ್ಲದೆ ಗೋಪಿ ಸರ್ಕಲ್‌ನಲ್ಲೂ ಬ್ಯಾರಿಕೇಡ್ ಹಾಕಲಾಗಿತ್ತು.
ದುರ್ಗಿಗುಡಿ, ಜೈಲ್ ರೋಡ್: ನಗರದಾದ್ಯಂತ ಜನ ಸಂಚಾರ ಕಡಿಮೆ ಇತ್ತು. ಆದರೆ ದುರ್ಗಿಗುಡಿ ಮತ್ತು ಜೈಲ್ ರೋಡ್‌ನಲ್ಲಿ ಜನ ಸಂಚಾರ ಹೆಚ್ಚಿತ್ತು. ಜೈಲ್ ರಸ್ತೆಯಲ್ಲಿ ಪ್ರತಿ ಭಾನುವಾರದಂತೆಯೇ ಭಾನುವಾರ ಕೂಡ ಜನ ಮತ್ತು ವಾಹನ ದಟ್ಟಣೆ ಇತ್ತು. ಉಳಿದಂತೆ ನಗರದ ಕುವೆಂಪು ರಸ್ತೆಯಲ್ಲಿ ಜನ ಸಂಚಾರ ಕಂಡುಬಂದಿತು. ಆಸ್ಪತ್ರೆಗಳು ಇರುವ ಕಾರಣ ಇಲ್ಲಿ ಜನ ಮತ್ತು ವಾಹನಗಳ ಓಡಾಟವಿತ್ತು. ಸವಳಂಗ ರಸ್ತೆಯಲ್ಲೂ ವಾಹನಗಳ ಸಂಚಾರ ಕಡಿಮೆಯಾಗಿತ್ತು.
ವಿನೋಬನಗರ ನೂರು ಅಡಿ ರಸ್ತೆಯ ಲಕ್ಷ್ಮೀ ಟಾಕೀಸ್ ಸಮೀಪ ಜನ ಸಂಚಾರ ಹೆಚ್ಚಿತ್ತು. ಎಲ್ಲೆಡೆ ಪೊಲೀಸರನ್ನು ನಿಯೋಜಿಸಲಾಗಿದ್ದು, ಅನಗತ್ಯವಾಗಿ ಓಡಾಡುವವರನ್ನು ವಾಪಸ್ ಕಳುಹಿಸುತ್ತಿದ್ದ ಕಂಡುಬಂತು.