ಕಲಬುರಗಿ: ಕೊರೊನಾ ಸೋಂಕು ನಿಯಂತ್ರಣಕ್ಕಾಗಿ ಈ ವಾರ ಮೂರು ದಿನಗಳ ಕಾಲ ಜಾರಿ ಮಾಡಿದ್ದ ಕಠಿಣ ಲಾಕ್‌ಡೌನ್ ಬಹುತೇಕ ಯಶಸ್ವಿಯಾಗಿದೆ. ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ಬಿಗಿ ಕ್ರಮ ಕೈಗೊಂಡಿದ್ದ ಕಾರಣ ಜನ ಮನೆಯಿಂದ ಹೊರಗೆ ಬರುವುದಕ್ಕೆ ಕಡಿವಾಣ ಬಿದ್ದಿತ್ತು.
ಮೇ 23ರಿಂದ ಬೆಳಗ್ಗೆ 6ರಿಂದ 10 ಗಂಟೆ ವರೆಗೆ ನಾಲ್ಕು ಗಂಟೆ ಕಾಲ ದಿನಸಿ ಸಾಮಾನು ಖರೀದಿ, ತರಕಾರಿ ಮಾರಾಟಕ್ಕೆ ಮತ್ತೆ ಅವಕಾಶ ಒದಗಿಸಲಾಗಿದೆ. ಮೇ 18ರಂದು ಕೊರೊನಾ ಸಂಬಂಧ ಪ್ರಧಾನ ಮಂತ್ರಿ ನರೇಂದ್ರ ಮೋದಿ ಡಿಸಿಗಳ ಸಭೆ ನಡೆಸಿದ ಬೆನ್ನಲ್ಲೇ ಡಿಸಿ ವಿ.ವಿ. ಜ್ಯೋತ್ಸಾ ° ವಾರದ ಮೂರು ದಿನಗಳ ಕಾಲ ಕಠಿಣ ಲಾಕ್‌ಡೌನ್ ಜಾರಿ ಮಾಡಿ ಆದೇಶಿಸಿದ್ದರು. ಗುರುವಾರ, ಶುಕ್ರವಾರ, ಶನಿವಾರದಂದು ಮೂರು ದಿನ ಕಾಲಗಳ ಅನುಷ್ಠಾನಗೊಳಿಸಿದ್ದರು.
ಮೂರು ದಿನಗಳ ಲಾಕ್‌ಡೌನ್ ಬಹುತೇಕ ಯಶಸ್ವಿಯಾಗಿದೆ. ಈ ಮೂರು ದಿನ ಆಸ್ಪತ್ರೆಗಳು, ಮೆಡಿಕಲ್‌ಗಳ ಸೇವೆ ಮತ್ತು ಹೋಟೆಲ್ ಗಳಲ್ಲಿ ಪಾರ್ಸೆಲ್ ಹೊರತುಪಡಿಸಿದರೆ, ದಿನಸಿ ಮತ್ತು ತರಕಾರಿ ಖರೀದಿಗೂ ಸಂಪೂರ್ಣ ನಿರ್ಬಂಧ ಹೇರಲಾಗಿತ್ತು. ಪರಿಣಾಮ ಪ್ರಮುಖ ರಸ್ತೆಗಳು ಮಾತ್ರ ವಲ್ಲದೇ, ಬಡಾವಣೆಗಳಲ್ಲಿನ ಬಹುತೇಕ ಕಿರಾಣಿ ಅಂಗಡಿಗಳು ಬಾಗಿಲು ಹಾಕಿದ್ದವು. ಅಲ್ಲದೇ, ಪೊಲೀಸರು ಬೆಳಗ್ಗೆಯೇ ರಸ್ತೆಗಿಳಿದು ಕಟ್ಟುನಿಟ್ಟಾಗಿ ಲಾಕ್‌ಡೌನ್ ಜಾರಿಗೆ ಕ್ರಮ ಕೈಗೊಂಡಿದ್ದರು. ಆದ್ದರಿಂದ ಸಾರ್ವಜನಿಕರು ಮನೆಯಿಂದ ಹೊರ ಬಂದಿರಲಿಲ್ಲ.
ಪ್ರಮುಖ ರಸ್ತೆಗಳಿಗೆ ಬ್ಯಾರಿಕೇಡ್ ಗಳನ್ನು ಹಾಕಿ ಅನಗತ್ಯ ಜನ ಸಂಚಾರ ಮತ್ತು ವಾಹನ ಓಡಾಟಕ್ಕೆ ಕಡಿವಾಣ ಹಾಕಿದ್ದರು. ಸಕಾರಣವಿಲ್ಲದೇ ಬೈಕ್, ಕಾರು ಸೇರಿದಂತೆ ಖಾಸಗಿ ವಾಹನಗಳಲ್ಲಿ ಓಡಾಡುತ್ತಿದ್ದವರನ್ನು ಪೊಲೀಸರು ತಡೆದು ವಿಚಾರಣೆ ನಡೆಸಿ, ಅಗತ್ಯವಿರುವವರಿಗೆ ಮಾತ್ರ ಓಡಾಡಲು ಅವಕಾಶ ನೀಡುತ್ತಿದ್ದರು. ಅನಗತ್ಯವಾಗಿ ಓಡಾಡುವವರ ವಾಹನ ಜಪ್ತಿ ಮಾಡಿ ದಂಡ ವಿಧಿ ಸುತ್ತಿದ್ದರು. ಹೀಗಾಗಿ ನಗರದ ಜನನಿ ಬಿಡ ಪ್ರದೇಶಗಳಾದ ಸೂಪರ್ ಮಾರ್ಕೆಟ್, ಗಂಜ್ ಸೇರಿದಂತೆ ಪ್ರಮುಖ ಪ್ರದೇಶಗಳೂ ಜನರಿಲ್ಲದೇ ಭಣಗುಡುತ್ತಿದ್ದವು.
ಜತೆಗೆ ಬಹುತೇಕ ರಸ್ತೆಗಳು ಜನ ಮತ್ತು ವಾಹನಗಳ ಓಡಾಟ ವಿಲ್ಲದೆ ಬಿಕೋ ಎನ್ನುತ್ತಿದ್ದವು. ಕೊರೊನಾ ಚೈನ್ ಹಬ್ಬುವುದನ್ನು ತಡೆಯಲು ಮುಂದಿನ ವಾರದ ಗುರು ವಾರ, ಶುಕ್ರವಾರ ಮತ್ತು ಶನಿವಾರವೂ ಲಾಕ್‌ಡೌನ್ ಜಾರಿಯಾಗುವ ನಿರೀಕ್ಷೆಯಿದೆ ಎನ್ನಲಾಗಿದೆ.