ಪಣಜಿ: ಕರ್ನಾಟಕದಲ್ಲಿ ಕಠಿಣ ಲಾಕ್‍ಡೌನ್ ಜಾರಿಯಾದ ಹಿನ್ನೆಲೆಯಲ್ಲಿ ಬೆಳಗಾವಿಯಿಂದ ಗೋವಾಕ್ಕೆ ತರಕಾರಿ ಪೂರೈಕೆ ಸ್ಥಗಿತಗೊಂಡಿದೆ. ಗೋವಾದಲ್ಲಿ ತರಕಾರಿಯ ಪೂರೈಕೆಯಿಲ್ಲದೆಯೇ ಗೋವಾದ ಜನತೆ ಬೆಲೆ ಏರಿಕೆ ಸಮಸ್ಯೆ ಎದುರಿಸುವಂತಾಗಿದೆ.
ಕಳೆದ ಶನಿವಾರದಿಂದ ಸೋಮವಾರದ ವರೆಗೆ ಬೆಳಗಾವಿಯಲ್ಲಿ ಲಾಕ್‍ಡೌನ್ ಕಠಿಣ ನಿಯಮದಿಂದಾಗಿ ಬೆಳಗಾವಿ ಎಪಿಎಂಸಿ ಮಾರುಕಟ್ಟೆ ಸಂಪೂರ್ಣ ಬಂದ್ ಆಗಿತ್ತು. ಆದರೆ ಮಂಗಳವಾರದಿಂದ ಬೆಳಗಾವಿಯಿಂದ ಗೋವಾಕ್ಕೆ ತರಕಾರಿ ಪೂರೈಕೆ ಆರಂಭಗೊಳ್ಳುವ ಸಾಧ್ಯತೆಯಿದೆ ಎನ್ನಲಾಗಿದೆ.
ಬೆಳಗಾವಿಯಿಂದ ಗೋವಾಕ್ಕೆ ತರಕಾರಿ ಪೂರೈಕೆಯಾಗದ ಕಾರಣ ರಾಜ್ಯದಲ್ಲಿ ತರಕಾರಿ ತುಟ್ಟಾಗೃತೆಯಿಂದಾಗಿ ತರಕಾರಿ ಬೆಲೆ ಗಗನಕ್ಕೇರಿದೆ. ಗೋವಾ ಫಲೋತ್ಪಾದನ ಮಹಾಮಂಡಳದ ವತಿಯಿಂದ ರಾಜ್ಯದಲ್ಲಿ ಜನತೆಗೆ ಸಬ್ಸಿಡಿ ದರದಲ್ಲಿ ತರಕಾರಿ ನೀಡಲಾಗುತ್ತಿತ್ತು. ಆದರೆ ಸದ್ಯ ತರಕಾರಿ ಪೂರೈಕೆಯಿಲ್ಲದೆಯೇ ಜನತೆ ಹೆಚ್ಚಿನ ಬೆಲೆ ತೆತ್ತು ತರಕಾರಿ ಖರೀದಿಸುವಂತಾಗಿದೆ.
ಇದನ್ನೂ ಓದಿ : ಎನ್ ಟಿ ಆರ್ ಜೊತೆಗಿನ ಚಿತ್ರಕ್ಕೆ ಪ್ರಶಾಂತ್ ಪಡೆಯುತ್ತಿರುವ ಸಂಭಾವನೆ ಎಷ್ಟು ಕೋಟಿ ?
ಗೋವಾ ರಾಜ್ಯವು ತರಕಾರಿ, ಹೂವು, ಹಣ್ಣು, ಕಿರಾಣಿ ಸಾಮಾನುಗಳಿಗಾಗಿ ಕರ್ನಾಟಕ ರಾಜ್ಯವನ್ನೇ ಅವಲಂಭಿಸಿದೆ. ಪ್ರತಿದಿನ ಗೋವಾಕ್ಕೆ ಅಗತ್ಯ ವಸ್ತುಗಳು ಹೆಚ್ಚಿನ ಪ್ರಮಾಣದಲ್ಲಿ ಪೂರೈಕೆಯಾಗುತ್ತದೆ. ಆದರೆ ಕರ್ನಾಟಕದಲ್ಲಿ ಕಠಿಣ ಲಾಕ್‍ಡೌನ್ ನಂತರ ಪ್ರಮುಖವಾಗಿ ತರಕಾರಿ ಪೂರೈಕೆ ಬಂದ್ ಆಗಿರುವುದರಿಂದ ಗೋವಾದಲ್ಲಿ ತರಕಾರಿ ತುಟ್ಟಾಗೃತೆಯುಂಟಾಗಿದೆ. ಮಂಗಳವಾರದಿಂದ ಗೋವಾಕ್ಕೆ ತರಕಾರಿ ಪೂರೈಕೆ ಪುನರಾರಂಭಗೊಳ್ಳುವ ಸಾಧ್ಯತೆಯಿದೆ ಎಂದು ಪಣಜಿ ತರಕಾರಿ ಮಾರಾಟಗಾರರು ಮಾಹಿತಿ ನೀಡಿದ್ದಾರೆ.