Advertisement

ಲಾಕ್‌ಡೌನ್‌ ಉಲ್ಲಂಘನೆ; ರಾಹುಲ್‌ ತ್ರಿಪಾಠಿಗೆ ದಂಡ

10:42 PM May 29, 2021 | Team Udayavani |

ಪುಣೆ : ಮಹಾರಾಷ್ಟ್ರ ಹಾಗೂ ಕೆಕೆಆರ್‌ ತಂಡದ ಅಗ್ರ ಕ್ರಮಾಂಕದ ಬ್ಯಾಟ್ಸ್‌ಮನ್‌ ರಾಹುಲ್‌ ತ್ರಿಪಾಠಿ ಬೇಡದ ಕಾರಣಕ್ಕೆ ಸುದ್ದಿಯಾಗಿದ್ದಾರೆ. ಅವರು ಲಾಕ್‌ಡೌನ್‌ ನಿಯಮವನ್ನು ಉಲ್ಲಂಘಿಸಿ ದಂಡ ಕಟ್ಟಿದ್ದಾರೆ!

Advertisement

ಪುಣೆಯ ಕೋಂಧ್ವಾದಲ್ಲಿ ಮಾಸ್ಕ್ ಧರಿಸದೆ ಕಾರು ಚಲಾಯಿಸಿಕೊಂಡು ಬರುತ್ತಿದ್ದ ರಾಹುಲ್‌ ತ್ರಿಪಾಠಿ ಅವರನ್ನು ಪೊಲೀಸರು ತಡೆದಿದ್ದಾರೆ. ಅಲ್ಲದೇ ಅವರ ಸುತ್ತಾಟಕ್ಕೆ ಯಾವುದೇ ಕಾರಣ ಕೂಡ ಇರಲಿಲ್ಲ. ಪುಣೆಯಲ್ಲಿ ಕಠಿನ ಲಾಕಡೌನ್‌ ನಿಬಂಧನೆ ಇರುವುದರಿಂದ ಪೊಲೀ ಸರು ಕ್ರಿಕೆಟಿಗನನ್ನೂ ಬಿಡಲಿಲಿಲ್ಲ. ತ್ರಿಪಾಠಿ ಅವರಿಂದ 500 ರೂ. ದಂಡ ವಸೂಲಿ ಮಾಡಿ ರಶೀದಿ ಹರಿದು ಕೊಟ್ಟಿದ್ದಾರೆ.

ಕೋಂಧ್ವಾ ಪೊಲೀಸ್‌ ಠಾಣೆಯ ಹಿರಿಯ ಅಧಿಕಾರಿ ಸರ್ದಾರ್‌ ಪಾಟೀಲ್‌ ಈ ಕುರಿತು ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next