Advertisement

ಲಾಕ್ ಡೌನ್ ಸ್ಟೋರಿ: ಹಲವು ವರ್ಷಗಳ ಕಾಲ ಕಳೆದು ಹೋಗಿದ್ದ ಮಕ್ಕಳು ಮನೆ ಸೇರುವಂತಾಯ್ತು!

08:00 AM May 15, 2020 | Nagendra Trasi |

ಭೋಪಾಲ್:ದೇಶಾದ್ಯಂತ ಕೋವಿಡ್ 19 ತಡೆಗಟ್ಟಲು ಲಾಕ್ ಡೌನ್ ಮುಂದುವರಿದಿದ್ದರೆ, ಮತ್ತೊಂದೆಡೆ ಲಾಕ್ ಡೌನ್ ಚತ್ತೀಸ್ ಗಢ ಮತ್ತು ಮಧ್ಯಪ್ರದೇಶದ ಎರಡು ಕುಟುಂಬಗಳಿಗೆ ಸಂತಸವನ್ನೇ ನೀಡಿದೆ. ಯಾಕೆಂದರೆ ಹಲವು ವರ್ಷಗಳಿಂದ ನಾಪತ್ತೆಯಾಗಿದ್ದ ಮಕ್ಕಳನ್ನು ಮತ್ತೆ ಒಂದಾಗುವಂತೆ ಮಾಡಿದೆ!

Advertisement

ಮಧ್ಯಪ್ರದೇಶದ ಛಾತಾರ್ ಪುರ್ ಜಿಲ್ಲೆಯ ಬುಂದೇಲ್ ಖಾಂಡ್ ಪ್ರದೇಶದ ದೇಲಾರಿ ಗ್ರಾಮದ ಬುಡಕಟ್ಟು ಕುಟುಂಬದ 16 ವರ್ಷದ ಮಗ ಉದಯ್ ಆದಿವಾಸಿಯನ್ನು ಮತ್ತೆ ಒಟ್ಟುಗೂಡಿಸಿದೆ. ಉದಯ್ 2017ರಲ್ಲಿ ನಾಪತ್ತೆಯಾಗಿದ್ದ. ಸ್ಥಳೀಯ ಪೊಲೀಸರು ಅಪಹರಣ ಪ್ರಕರಣ ದಾಖಲಿಸಿಕೊಂಡಿದ್ದರು. ಆದರೆ ಈತ ಸಾವನ್ನಪ್ಪಿರಲಿಲ್ಲ ಎಂಬುದು ಖಚಿತವಾಗಿತ್ತು.

ಉದಯ್ ದಿಲ್ಲಿ ಮತ್ತು ಗುರುಗ್ರಾಮದ ಅಂಗಡಿ, ಹೋಟೆಲುಗಳಲ್ಲಿ ಕೆಲಸ ಮಾಡುತ್ತಿದ್ದ. ಈ ವರ್ಷದ ಹೋಳಿ ಸಂದರ್ಭದಲ್ಲಿ ತಂದೆಗೆ ಕರೆ ಮಾಡಿದ್ದ. ಆದರೆ ತಂದೆ ಕರೆ ಮಾಡಿದ ಮಗನಿಗೆ ನೀನು ತಪ್ಪಾಗಿ ಕರೆ ಮಾಡಿದ್ದೀಯಾ ನನ್ನ ಮಗ ಮೂರು ವರ್ಷದ ಹಿಂದೆಯೇ ಸಾವನ್ನಪ್ಪಿದ್ದ ಎಂದು ತಿಳಿಸಿರುವುದಾಗಿ ಸಬ್ ಡಿವಿಷನಲ್ ಅಧಿಕಾರಿ ಸೀತಾರಾಮ್ ಅಸ್ವಾ ತಿಳಿಸಿದ್ದಾರೆ.

ಲಾಕ್ ಡೌನ್ ಹಿನ್ನೆಲೆಯಲ್ಲಿ ಉದಯ್ ಊರಿಗೆ ಮರಳಲು ನಿರ್ಧರಿಸಿಬಿಟ್ಟಿದ್ದ. ಸೋಮವಾರ ಬೆಳಗ್ಗೆ ಮನೆಯಲ್ಲಿದ್ದವರಿಗೆ ಅಚ್ಚರಿ, ಸಂತಸ ಎಲ್ಲವೂ ಏಕಕಾಲದಲ್ಲಿ ಆಗಿತ್ತು. ಯಾಕೆಂದರೆ ಸತ್ತು ಹೋಗಿದ್ದ ಎಂದು ತಿಳಿದುಕೊಂಡಿದ್ದ ಮಗ ಮನೆಗೆ ಬಂದಿದ್ದ.

ಹತ್ತು ವರ್ಷದಿಂದ ನಾಪತ್ತೆಯಾಗಿದ್ದ ಮಗ ಮನೆ ಸೇರಿದ್ದ!
ಹತ್ತು ವರ್ಷಗಳ ಹಿಂದೆ ಚತ್ತೀಸ್ ಗಢದ ಕೋಬ್ರಾ ಜಿಲ್ಲೆಯ ವಲಸೆ ಕಾರ್ಮಿಕ ಲಕ್ಷ್ಮಿ ದಾಸ್ ಮಾಣಿಕ್ ಪುರಿ ಎಂಬಾತ ನಾಪತ್ತೆಯಾಗಿದ್ದ. 25 ವರ್ಷದ ಈತ ಮಧ್ಯಪ್ರದೇಶದ ಬಾರ್ವಾನಿ ಜಿಲ್ಲೆಯಲ್ಲಿರುವ ವಲಸೆ ಕಾರ್ಮಿಕರ ಶಿಬಿರದಿಂದ ನಾಪತ್ತೆಯಾಗಿದ್ದ ಎಂದು ವರದಿ ತಿಳಿಸಿದೆ.

Advertisement

ಕಳೆದ ತಿಂಗಳು ಲಕ್ಷ್ಮಿ ದಾಸ್ ಮಾಣಿಕ್ ಪುರಿ ಮಹಾರಾಷ್ಟ್ರದಿಂದ ಮಧ್ಯಪ್ರದೇಶ, ಉತ್ತರ ಪ್ರದೇಶ ಮತ್ತು ಇತರ ರಾಜ್ಯಗಳಿಗೆ ತೆರಳುತ್ತಿದ್ದ ವಲಸೆ ಕಾರ್ಮಿಕರ ಲಾರಿಯಲ್ಲಿ ಹೋಗುತ್ತಿದ್ದ. ಏತನ್ಮಧ್ಯೆ ಮಹಾರಾಷ್ಟ್ರ ಮಧ್ಯಪ್ರದೇಶ ಗಡಿಯಲ್ಲಿ ಬಾರ್ವಾನಿ ಜಿಲ್ಲೆಯ ಅಧಿಕಾರಿಗಳು ಪ್ರಶ್ನಿಸಿದ್ದರು. ಈತ ತನ್ನ ಹೆಸರನ್ನು ಮಾಲ್ಟು ಯುರಾವೊ ಎಂದು ಚಿಕ್ಕ ಪೇಪರ್ ತುಣುಕನ್ನು ನೀಡಿದ್ದ.

ಕೊನೆಗೆ ಚತ್ತೀಸ್ ಗಢದಲ್ಲಿ ಈತನ ಕುಟುಂಬ ಇದೆಯೇ ಎಂಬ ಬಗ್ಗೆ ಅಧಿಕಾರಿಗಳು ಶೋಧ ನಡೆಸಿದ್ದರು. ಅಂತೂ ಎರಡು ವಾರಗಳ ನಂತರ ಚತ್ತೀಸ್ ಗಢದ ಕೋಬ್ರಾ ಜಿಲ್ಲೆಯಲ್ಲಿ ಪತ್ತೆಹಚ್ಚಿದ್ದರು. ತಂದೆ ಇಟ್ವಾರಿ ದಾಸ್ ಅವರಿಗೆ ಮಗನ ಪೋಟೋ ಕಳುಹಿಸಿದಾಗ ಕೂಡಲೇ ಮಗನ ಗುರುತು ಕಂಡುಹಿಡಿದ್ದರು ಎಂದು ವರದಿ ವಿವರಿಸಿದೆ. ಮೇ 9ರಂದು ಬಾರ್ವಾನಿಯಲ್ಲಿರುವ ತನ್ನ ಮನೆಗೆ ತಲುಪಿದ್ದಾನೆ. ಹತ್ತು ವರ್ಷಗಳಿಂದ ನಾಪತ್ತೆಯಾಗಿದ್ದ ಮಗನನ್ನು ಕಂಡು ತಂದೆ, ತಾಯಿ ಹಾಗೂ ಕುಟುಂಬದ ಸದಸ್ಯರು ಆನಂದಬಾಷ್ಪ ಸುರಿಸಿ ಆಲಿಂಗನದೊಂದಿಗೆ ಬರಮಾಡಿಕೊಂಡಿರುವುದಾಗಿ ವರದಿ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next