Advertisement

ಕೊರೊನಾ ಸರಪಳಿ ತುಂಡರಿಸಲು ಲಾಕ್‌ಡೌನ್‌ ಅಗತ್ಯ

09:15 PM Jun 05, 2021 | Team Udayavani |

ತುಮಕೂರು: ಹಳ್ಳಿಗಳಲ್ಲಿ ಕೊರೊನಾ ಇನ್ನೂ ಹೆಚ್ಚುವ್ಯಾಪಿಸು ತ್ತಲೇ ಇದೆ. ಕೊರೊನಾ ಸರಪಳಿಯನ್ನುತುಂಡರಿಸಲು ಇನ್ನೂ ಎರಡು ವಾರ ರಾಜ್ಯದಲ್ಲಿಲಾಕ್‌ಡೌನ್‌ ಜಾರಿ ಮಾಡುವುದು ಮತ್ತು ಆರ್‌ಟಿಪಿಸಿಆರ್‌ ಪರೀಕ್ಷೆ ಹೆಚಿ cಸು ವುದು ಅಗತ್ಯ ಇದೆಎಂದು ಮಾಜಿ ಉಪ ಮುಖ್ಯಮಂತ್ರಿಡಾ.ಜಿ.ಪರಮೇಶ್ವರ್‌ ಅಭಿಪ್ರಾಯ ಪಟ್ಟರು.

Advertisement

ಗುರುವಾರ ಮಾಧ್ಯಮಗಳೊಂದಿಗೆ ಮಾತನಾಡಿದಅವರು, ಕೊವಿಡ್‌ ಸರಪಳಿಯನ್ನು ತುಂಡು ಮಾಡಲುಲಾಕ್‌ಡೌನ್‌ ಉಪಯುಕ್ತ ಎಂಬುದನ್ನು ನಾನೂ ಒಪ್ಪುತ್ತೇನೆ.ಆದರೆ, ಲಾಕ್‌ಡೌನ್‌ ಪರಿಣಾಮಕಾರಿಯಾಗಿ ಆಗಬೇಕು. ಆದರೆ,ಈಗ ಆಗುತ್ತಿರುವ ಲಾಕ್‌ಡೌನ್‌ ನೋಡಿದರೆ ಅಷ್ಟೊಂದು ಪರಿಣಾಮಕಾರಿ ಆಗಿಲ್ಲ ಎಂದರು.

ಕೋವಿಡ್‌ ಪರೀಕ್ಷೆಗಳನ್ನು ಕಡಿಮೆ ಮಾಡಿ ಪಾಸಿಟಿವ್‌ ರೇಟ್‌ಕಡಿಮೆ ಆಯಿತು ಎಂದು ಹೇಳುವುದು ಸರಿಯಲ್ಲ. ಪರೀಕ್ಷೆಗಳಸಂಖ್ಯೆ ಹೆಚ್ಚಾಗಬೇಕು. ಪರೀûಾ ವರದಿಗಳನ್ನೂ ಬೇಗನೆನೀಡುವಂತಾಗಬೇಕು. ಅದೇ ರೀತಿ ಪಾಸಿಟಿವ್‌ ಬಂದವವರನ್ನುಆದಷ್ಟು ಬೇಗನೆ ಆಸ್ಪತ್ರೆಗಳಿಗೆ ದಾಖಲಿಸಿ ಚಿಕಿತ್ಸೆ ನೀಡಬೇಕು. ಲಾಕ್‌ಡೌನ್‌ ಎಲ್ಲ ರಾಜ್ಯಗಳಲ್ಲಿ ಒಂದೇ ಬಾರಿ ಆಗಬೇಕು. ಇಲ್ಲವೇರಾಜ್ಯದ ಗಡಿಗಳನ್ನು ಮುಚ್ಚುವ ಕೆಲಸ ವಾಗಬೇಕು ಎಂದರು.ತಜ್ಞರು 2ನೇ ಅಲೆ ಬರುತ್ತದೆ ಅದು ಭೀಕರವಾಗಿರುತ್ತದೆ ಎಂಬಸೂಚನೆ ನೀಡಿದ್ದರೂ ಸರ್ಕಾರ ಅದನ್ನು ಗಂಭೀರವಾಗಿ ಪರಿಗಣಿಸದೆಸೂಕ್ತ ಪರಿಹಾರ ಕಾರ್ಯ ಕೈಗೊಳ್ಳದೆ ಇದ್ದದ್ದು, ಇಷ್ಟು ಭೀಕರ ವಾಗಲುಕಾರಣವಾಯಿತು.

2ನೇ ಅಲೆಯನ್ನು ಎದುರಿಸಲು ವೈದ್ಯಕೀಯವಾಗಿಯೂ ಸರ್ಕಾರ ಜಿಲ್ಲಾಡಳಿತಗಳನ್ನು ಜಾಗೃತಗೊಳಿಸಲಿಲ್ಲಎಂದರು.ತಾವು 2ನೇ ಅಲೆ ಆರಂಭದಲ್ಲಿಯೇ ಎಚ್ಚೆತ್ತುಕೊಂಡು ತಮ್ಮಕ್ಷೇತ್ರದಲ್ಲಿ ಹಲವು ಮಂಜಾಗ್ರತಾ ಕ್ರಮ ಕೈಗೊಂಡಿದ್ದೇವೆ. ಈಗ 3ನೇಅಲೆಯ ಸೂಚನೆಯನ್ನೂ ಸಹ ತಜ್ಞರು ನೀಡಿರುವ ಹಿನ್ನೆಲೆ ಕೊರಟಗೆರೆಕ್ಷೇತ್ರದಲ್ಲಿ ಸಿದ್ಧಾರ್ಥ ಆಸ್ಪತ್ರೆಯ ವೈದ್ಯರು ಮನೆ ಮನೆಗೆ ಭೇಟಿ ನೀಡಿಜನರ ಆರೋಗ್ಯ ಪರಿಶೀಲನೆ ಮಾಡಿ ಅವರಿಗೆ ಆರೋಗ್ಯ ಕಿಟ್‌ನೀಡುತ್ತಿದ್ದಾರೆ.

ಯಾರಿಗಾದರೂ ಸೋಂಕು ಇರುವುದು ಮೇಲ್ನೋಟಕ್ಕೆಕಂಡು ಬಂದರೂ ಸಹ ಅವರನ್ನು ತಾಲೂಕು ಆಸ್ಪತ್ರೆಗೆ ಕರೆ ತಂದುಕೋವಿಡ್‌ ಪರೀಕ್ಷೆ ನಡೆಸಲಾಗುತ್ತದೆ ಎಂದರು.
ಔಷಧ ದೊರೆಯಲಿಲ್ಲ: ಕೋವಿಡ್‌ ಸೋಂಕಿತರಿಗೆ ಚಿಕಿತ್ಸೆ ನೀಡುವಲ್ಲಿಯೂ ವಿಳಂಬ ಮಾಡಲಾಯಿತು. ಸರಿಯಾದ ಸಮಯಕ್ಕೆವೆಂಟಿ ಲೇಟರ್‌ ಒದಗಿಸುವಲ್ಲಿ ಹಾಗೂ ವೆಂಟಿಲೇಟರ್‌ ಬಳಕೆಗೆಅಗತ್ಯ ವಾದ ತಜ್ಞರನ್ನು ನೀಡಲಿಲ್ಲ. ಸಮಯಕ್ಕೆ ಸರಿಯಾಗಿ ಔಷಧದೊರೆ ಯ ಲಿಲ್ಲ,

Advertisement

ಸೋಂಕಿತರಿಗೆ ಚಿಕಿತ್ಸೆ ನೀಡಲು ಸರ್ಕಾರ ವಿಫ‌ಲವಾಯಿತು. ತಾಲೂಕುಮಟ್ಟದಲ್ಲಿ ತಜ್ಞ ವೈದ್ಯರ ಕೊರತೆಯಿಂದ ಸ್ವಲ್ಪಹೆಚ್ಚು ಕಮ್ಮಿಯಾದರೂ ಸಹ ರೋಗಿಗಳನ್ನು ಜಿಲ್ಲಾ ಕೇಂದ್ರಕ್ಕೆ ಕಳುಹಿಸಲಾಗುತ್ತಿತ್ತು. ಆದರೆ, ಇಲ್ಲಿ ಜಿಲ್ಲಾಸ್ಪತ್ರೆಯಲ್ಲಿ ಅವರನ್ನು ಸೇರಿಸಿಕೊಳ್ಳುವುದಕ್ಕೆ ಹಾಸಿಗೆಗಳೇ ಇರುತ್ತಿರಲಿಲ್ಲ, ಈ ಬಗ್ಗೆ ಜವಾಬ್ದಾರಿ ಇರುವವರು ಯಾರೂ ಸಹ ಗಮನಿಸುವ ಕೆಲಸ ಮಾಡಲಿಲ್ಲ.ಆಸ್ಪತ್ರೆ ಯಿಂದ ಆಸ್ಪತ್ರೆಗೆ ಅವರು ಅಲೆದಾಡುವ ವೇಳೆಗೆ ಅವರಪರಿಸ್ಥಿತಿ ಗಂಭೀರವಾಗಿ ಅವರನ್ನು ಸಾವಿನ ದವಡೆಗೆ ತಳ್ಳುವಂತಾಯಿತು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next