Advertisement

ಕುಣಿಗಲ್‌ನಲ್ಲಿ ಲಾಕ್‌ಡೌನ್‌ ಸಡಿಲ

02:52 PM Apr 29, 2020 | mahesh |

ಕುಣಿಗಲ್‌: ತಾಲೂಕಿನಲ್ಲಿ ಕೋವಿಡ್ ಸೋಂಕು ಇಲ್ಲದ ಕಾರಣ, ಬುಧವಾರದಿಂದ ಲಾಕ್‌ಡೌನ್‌ ಸಡಿಲಗೊಳ್ಳಲಿದೆ ಎಂದು ಸಂಸದ ಡಿ.ಕೆ.ಸುರೇಶ್‌ ಹೇಳಿದರು. ಪಟ್ಟಣದ ಸಂಸದರ ಕಚೇರಿಯಲ್ಲಿ ರೈತರ ಹಾಗೂ ಸಾರ್ವಜನಿಕರ ಸಮಸ್ಯೆ ಆಲಿಸಲು ಹಮ್ಮಿಕೊಂಡಿದ ಫೇಸ್‌ಬುಕ್‌ ಲೈವ್‌, ಫೋನ್‌ ಇನ್‌ ಕಾರ್ಯಕ್ರಮದಲ್ಲಿ ಮಾತನಾಡಿದರು.

Advertisement

ಅನೇಕ ಮಂದಿ ಸಾಮಾಜಿಕ ಅಂತರ ಹಾಗೂ ಮುನ್ನೆಚ್ಚರಿಕೆ ವಹಿಸಿದ ಕಾರಣ ಕೋವಿಡ್ ಗೆ ಹಲವು ಮಂದಿ ಬಲಿಯಾಗಿದ್ದಾರೆ. ಲಾಕ್‌ಡೌನಿಂದ ಅನೇಕರು ಸಮಸ್ಯೆಗಳು ಅನುಭವಿಸಿದ್ದಾರೆ, ಆದರೆ ತಾಲೂಕಿನಲ್ಲಿ ಈವರೆಗೂ ಯಾವುದೇ ಕೋವಿಡ್ ಸೋಂಕು ಪ್ರಕರಣ ಇಲ್ಲದ ಕಾರಣ ಜಿಲ್ಲಾಡಳಿತ ಇಂದಿನಿಂದ ಲಾಕ್‌ಡೌನ್‌ ಸಡಿಲುಗೊಳಿಸಿ ಸಣ್ಣ ಮತ್ತು ಮಧ್ಯಮ ಕೈಗಾರಿಕೆ, ಕಾರ್ಖಾನೆಗಳ ಪ್ರಾರಂಭಕ್ಕೆ ಮತ್ತು ಸಾರ್ವಜನಿಕರ ಅಗತ್ಯ ಸೇವೆಗಳಿಗೆ ವಿನಾಯಿತಿ ನೀಡಿದೆ, ಹಾಗಂತ ಪರಿಪೂರ್ಣವಾಗಿ ಲಾಕ್‌ಡೌನ್‌ ಸಡಿಲಗೊಂಡಿಲ್ಲ ಮೇ 3ವರೆಗೂ ಸರ್ಕಾರ ಆದೇಶ ಜಾರಿಯಲ್ಲಿ ಇರುತ್ತದೆ ಹಾಗಾಗಿ ಜನರು ಕಡ್ಡಾಯವಾಗಿ ಸಾಮಾಜಿಕ ಅಂತಕ ಕಾಯ್ದುಗೊಳ್ಳಬೇಕು, ಮಾಸ್ಕ್ ದರಿಸಬೇಕು ಹಾಗೂ ರೋಗದ ಬಗ್ಗೆ ಎಚ್ಚರಿಕೆ ವಹಿಸಬೇಕು ಎಂದರು.

ದುರ್ಬಳಕೆ: ಲಾಕ್‌ಡೌನ್‌ ಅನ್ನು ಕೆಲ ವರ್ತಕರು ದುರ್ಬಳಕೆ ಮಾಡಿಕೊಂಡು ಹೆಚ್ಚಿನ ಬೆಲೆಗೆ ವಸ್ತುಗಳನ್ನು ಮಾರಾಟ ಮಾಡುತ್ತಿದ್ದಾರೆ ಎಂದು ಚಲಮಸಂದ್ರ ಗ್ರಾಮದ ವ್ಯಕ್ತಿ
ಸಂಸದರ ಗಮನ ಸೆಳೆದರು ತಕ್ಷಣ ತಹಶೀಲ್ದಾರ್‌ಗೆ ದೂರವಾಣಿ ಮೂಲಕ ಸಂಪರ್ಕಿಸಿದ ಡಿ.ಕೆ. ಸುರೇಶ್‌ ನಿಗದಿಗಿಂತ ಹೆಚ್ಚಿನ ಬೆಲೆಗೆ ವಸ್ತುಗಳನ್ನು ಮಾಡುವ
ಅಂಗಡಿಗಳ ಮೇಲೆ ದಾಳಿ ನಡೆಸಿ ಮಾಲೀಕರ ವಿರುದ್ಧ ಕ್ರಮಕೈಗೊಳ್ಳುವಂತೆ ಸೂಚಿಸಿದರು. ಶಾಸಕ ಡಾ.ಎಚ್‌.ಡಿ.ರಂಗನಾಥ್‌ ಇದ್ದರು. ಇದೇ ವೇಳೆ ತಾಲೂಕಿನ ರೈತರಿಂದ ಖರೀದಿಸಿದ 250 ಟನ್‌ ವಿವಿಧ ತರಕಾರಿಯ 7.50 ಲಕ್ಷ ರೂ. ಚೆಕ್‌ ವಿತರಣೆ ಮಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next