ಬೇಕಾಗುವ ಸಾಮಗ್ರಿ: ಐದು ಮೀಡಿಯಂ ಅಳತೆಯ ಟೊಮೇಟೊ ಸಣ್ಣಗೆ ಹೆಚ್ಚಿದ್ದು, ಸಣ್ಣಗೆ ಹೆಚ್ಚಿದ ಎರಡು ಈರುಳ್ಳಿ, ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪು,ನಾಲ್ಕು ಎಸಳುಕರಿಬೇವು, ಸ್ವಲ್ಪ ಹುಣಸೆ ಹಣ್ಣು, ಸ್ವಲ್ಪ ಕಾಯಿ ತುರಿ, ಹುರಿದಸೇಂಗಾ ಹಾಗೂ ಹುರಿದ ಎಳ್ಳು ಪುಡಿ ಉಪ್ಪು, ಬೆಲ್ಲ, ಸ್ವಲ್ಪಕಾರದ ಪುಡಿ, ಒಂದುಚಮಚೆಯಷ್ಟು ಸಾರಿನ ಪುಡಿ, ಒಂದುಚಮಚದಷ್ಟು ಅಡಿಗೆ ಎಣ್ಣೆ
ಮಾಡುವ ವಿಧಾನ: ಟೊಮೇಟೊಹೋಳುಗಳನ್ನು ಸ್ವಲ್ಪನೀರು ಹಾಕಿ ಚೆನ್ನಾಗಿ ಬೇಯಿಸಿಕೊಳ್ಳಿ. ಅದು ಸ್ವಲ್ಪ ತಣಿದ ನಂತರ ಅದಕ್ಕೆ ಹುಣಸೆ ಹಣ್ಣಿನ ರಸ,ಕೊತ್ತಂಬರಿ ಸೊಪ್ಪು,ಕಾಯಿತುರಿ, ಸಾರಿನಪುಡಿ,ಕಾರದ ಪುಡಿ ಎಲ್ಲವನ್ನೂ ಹಾಕಿ ಅಗತ್ಯ ಇದ್ದರೆ ಸ್ವಲ್ಪ ನೀರು ಹಾಕಿ ನುಣ್ಣಗೆ ರುಬ್ಬಿಕೊಂಡು ಒಂದೆಡೆ ಇರಿಸಿ.
ಒಂದು ಬಾಣಲೆಯಲ್ಲಿ ಒಗ್ಗರಣೆ ಹಾಕಿ,ಕರಿಬೇವಿನ ಎಸಳು ಹಾಕಿ, ನಂತರ ಈರುಳ್ಳಿಯನ್ನು ಹಾಕಿ ಬಾಡಿಸಿರಿ. ನಂತರ ಅದಕ್ಕೆ ರುಬ್ಬಿಟ್ಟುಕೊಂಡ ಸಾಮಗ್ರಿಯನ್ನು ಹಾಕಿ ಚೆನ್ನಾಗಿ ಕಲಕಿ, ಉಪ್ಪು, ಬೆಲ್ಲ ಸೇರಿಸಿ, ಒಂದುಕುದಿ ಬಂದನಂತರ ಹುರಿದ ಸೇಂಗಾ ಹಾಗೂ ಎಳ್ಳು ಪುಡಿಯನ್ನು ಹಾಕಿಕುದಿಸಿದರೆ ಟೊಮೇಟೊ ಗೊಜ್ಜು ರೆಡಿ.
-ಮಾಲತಿ ಮುದಕವಿ, ಧಾರವಾಡ