Advertisement
ಯಾಕೆಂದರೆ, ಸರ್ಕಾರವು ಜನತಾ ಕರ್ಫ್ಯೂ ಘೋಷಣೆ ಮಾಡಿದ ಬೆನ್ನಲ್ಲೇ ಅತಿಹೆಚ್ಚಿನ ಸಂಖ್ಯೆಯಲ್ಲಿಮರುವಲಸೆ ಹೋಗುತ್ತಿರುವುದು ಕಾರ್ಮಿಕ ವರ್ಗ. ಅದರಲ್ಲೂ ವಿಶೇಷವಾಗಿ ಕಲ್ಯಾಣ ಕರ್ನಾಟಕ ಮತ್ತು ಈಶಾನ್ಯ ರಾಜ್ಯಗಳ ಕಾರ್ಮಿಕರು ಹೆಚ್ಚಾಗಿದ್ದಾರೆ. ಇದು ನಿರ್ಮಾಣ ವಲಯವನ್ನು ತೀವ್ರವಾಗಿ ಬಾಧಿಸಲಿದೆ. ಯಾವುದೇ ಭರವಸೆಗಳನ್ನು ನೀಡಿದರೂ, ಕ್ಯಾಂಪ್ ಗಳಲ್ಲಿದ್ದ ಕಾರ್ಮಿಕರು ಕೇಳುತ್ತಿಲ್ಲ. ಈಗಾಗಲೇ ಶೇ. 50ರಷ್ಟು ಜನ ತಮ್ಮ ಊರುಗಳಿಗೆ ತೆರಳಿದ್ದಾರೆ.
Related Articles
Advertisement
ಶಹರದ ಸಹವಾಸ ಬೇಡ ಸರ್: ಸರ್, ಈಗ ಮಾಲಿಕರು ಯಾವುದೇ ಸಮಸ್ಯೆ ಆಗದಂತೆ ನೋಡಿಕೊಳ್ಳುತ್ತೇವೆ. ಇಲ್ಲಿಯೇ ಆರಾಮಾಗಿ ಇರಬಹುದು. ಲಾಕ್‌ಡೌನ್ ಜಾರಿಯಾದರೂ ಸಂಬಳಕ್ಕೆಕತ್ತರಿ ಹಾಕುವುದಿಲ್ಲ ಎಂದೆಲ್ಲಾ ಭರವಸೆ ನೀಡುತ್ತಾರೆ. ಆದರೆ, ಕಳೆದ ಬಾರಿಯಂತಾದರೆ ಏನು ಮಾಡೋದು? ಕೆಲಸ ಇಲ್ಲದಿದ್ದರೂ ಪರವಾಗಿಲ್ಲ. ಊರಲ್ಲೇ ಇರುತ್ತೇವೆ. ಈ ಶಹರದ ಸಹವಾಸ ಬೇಡ ಎಂದು ಕಲುಬುರಗಿಯತ್ತ ಹೊರಟ ಗಿರಿಯಪ್ಪ ಕೋಳಿ ತಿಳಿಸಿದರು.
ಕೃಷಿ ಹೊರತುಪಡಿಸಿದರೆ, ಅತಿಹೆಚ್ಚು ಕಾರ್ಮಿಕರನ್ನುಹೊಂದಿರುವ ವಲಯ ನಿರ್ಮಾಣ ಉದ್ಯಮ. ರಾಜ್ಯದಲ್ಲಿ ಅದರಲ್ಲೂ ಬೆಂಗಳೂರಿನಲ್ಲಿ ಪಶ್ಚಿಮ ಬಂಗಾಳ, ಅಸ್ಸಾಂ, ಬಿಹಾರದ ಕಾರ್ಮಿಕರು ಹೆಚ್ಚಿದ್ದಾರೆ. ಕೋವಿಡ್ ನಿಯಂತ್ರಣಕ್ಕೆ ಹಾಕಿದ ನಿರ್ಬಂಧಗಳಿಂದ ಆಕಾರ್ಮಿಕರನ್ನು ಹಿಡಿದಿಡುವುದು ತುಸು ಕಷ್ಟ ಆಗಬಹುದು. ಆದರೆ, ಈ ನಿಟ್ಟಿನಲ್ಲಿ ಉದ್ಯಮಿಗಳ ಜತೆ ಸರ್ಕಾರ ಕೂಡ ಮನಸ್ಸು ಮಾಡಬೇಕಾಗುತ್ತದೆ.ಕಾರ್ಮಿಕರಲ್ಲಿ ಆತ್ಮವಿಶ್ವಾಸ ತುಂಬುವ ಕ್ರಮಗಳಿಗೆ ಮುಂದಾಗಬೇಕು.
ಏನು ಮಾಡಬಹುದು? ಕ್ಯಾಂಪ್‌ಗ್ಳಲ್ಲಿ ಉಚಿತ ಲಸಿಕೆ ಅಭಿಯಾನ ನಡೆಸಲು ನೆರವಾಗಬೇಕು. ಆಯ್ದ ಕಡೆಗಳಲ್ಲಿ ಕೋವಿಡ್ ಪರೀಕ್ಷೆ ಶಿಬಿರ ನಡೆಸಬೇಕು.ಸೋಂಕು ದೃಢಪಟ್ಟವರನ್ನು ಪ್ರತ್ಯೇಕವಾಗಿಡುವುದು. ಅವರೆಲ್ಲರಿಗೂ ಆಹಾರ, ಚಿಕಿತ್ಸಾ ಸೌಲಭ್ಯದಂತಹ ಕ್ರಮಕೈಗೊಳ್ಳಬೇಕಾಗುತ್ತದೆ. ಹಾಗಂತ, ಎಲ್ಲವನ್ನೂ ಸರ್ಕಾರಮಾಡಬೇಕು ಎಂದು ನಾನು ಹೇಳುವುದಿಲ್ಲ; ಸರ್ಕಾರನೆರವಾದರೆ, ಉದ್ಯಮಿಗಳೂ ಕೈಜೋಡಿಸುತ್ತಾರೆ ಎಂದು ಕ್ರೆಡಾಯ್ ಮೆಂಟರ್ ಬಾಲಕೃಷ್ಣ ಹೆಗಡೆ ತಿಳಿಸುತ್ತಾರೆ.
ನಗರದಲ್ಲಿ ನಾಲ್ಕೂವರೆ ಲಕ್ಷ ಅಧಿಕ ಕಾರ್ಮಿಕರು : ಬೆಂಗಳೂರಿನಲ್ಲೇ ಸುಮಾರು ನಾಲ್ಕೂವರೆ ಲಕ್ಷ ಕಾರ್ಮಿಕರಿರಬಹುದು ಎಂದುಅಂದಾಜಿಸಲಾಗಿದೆ. ಈ ಪೈಕಿ ಕೆಲವರು ಈಗಾಗಲೇವಲಸೆ ಹೋಗಿದ್ದಾರೆ. ಉಳಿದವರನ್ನು ಹಿಡಿದಿಡಬೇಕಾಗಿದೆ. ಇನ್ನು ಅಪಾರ್ಟ್‌ಮೆಂಟ್‌ಗಳವ್ಯಾಪಾರ ವಹಿವಾಟು ಕೊರೊನಾ ಪೂರ್ವದಲ್ಲಿರುವಂತೆ ಇದೆ. ನಗರದಲ್ಲಿ ಕೊರೊನಾ ಪೂರ್ವ ದಲ್ಲಿ ವಾರ್ಷಿಕ 35-40 ಸಾವಿರ ಯೂನಿಟ್‌ಗಳುಮಾರಾಟ ಆಗುತ್ತಿದ್ದವು. ಈಗ ವಾರ್ಷಿಕ 30ಸಾವಿರ ಯೂನಿಟ್‌ಗಳು ಮಾರಾಟ ಆಗುತ್ತಿವೆ ಎಂದು ಬಾಲಕೃಷ್ಣ ಹೆಗಡೆ ಅಭಿಪ್ರಾಯಪಟ್ಟರು.
-ವಿಜಯಕುಮಾರ್ ಚಂದರಗಿ