ರಾಮನಗರ: ಜಿಲ್ಲೆ ಮಾಗಡಿ ತಾಲೂಕಿನಲ್ಲಿ ದಿನೇ ದಿನೇ ಕೋವಿಡ್ 19 ಪ್ರಕರಣಗಳು ಹೆಚ್ಚಾಗುತ್ತಿದ್ದು ಅಲ್ಲಿನ ವ್ಯಾಪಾರಸ್ಥರು ತಿಂಗಳಾಂತ್ಯದವರೆಗೆ ಸ್ವಯಂ ಪ್ರೇರಿತರಾಗಿ ಲಾಕ್ ಡೌನ್ ವಿಧಿಸಿಕೊಳ್ಳಲು ನಿರ್ಧರಿಸಿದ್ದಾರೆ.
ನಾಳೆಯಿಂದಲೇ ಮಾಗಡಿ ಪಟ್ಟಣ ಲಾಕ್ ಡೌನ್ ಆಗಲಿದೆ. ಇಂದು ಮಾಗಡಿ ಶಾಸಕ ಎ ಮಂಜು ಆಯೋಜಿಸಿದ್ದ ಸಭೆಯಲ್ಲಿ ಈ ನಿರ್ಧಾರ ಪ್ರಕಟವಾಗಿದೆ.
ಸಭೆಯಲ್ಲಿ ವರ್ತಕರ ಸಂಘದ ಸದಸ್ಯರು ಹಾಗೂ ತಹಶೀಲ್ದಾರ್ ಭಾಗವಹಿಸಿದ್ದರು.
ಅಗತ್ಯ ವಸ್ತುಗಳಿಗೆ ತೊಂದರೆಯಾಗದಂತೆ ಬೆಳಗ್ಗೆ 7 ರಿಂದ 10 ಗಂಟೆಯವರೆಗೆ ಮಾತ್ರ ಅಂಗಡಿಗಳು ತೆಗೆಯಲು ಸಭೆಯಲ್ಲಿ ನಿರ್ಧರಿಸಲಾಗಿದೆ.
ಮಾಗಡಿ ವಿಧಾನಸಭೆ ಕ್ಷೇತ್ರದಲ್ಲಿ ಇಬ್ಬರು ಕೋವಿಡ್ ಸೋಂಕು ವ್ಯಕ್ತಿಗಳು ಸಾವು ಸಂಭವಿಸಿದ್ದು ಜನ ಎಚ್ಚರಿಕೆಯಿಂದ ಇರಬೇಕು ಎಂದು ಶಾಸಕರು ಮನವಿ ಮಾಡಿದ್ದಾರೆ.
ನಿನ್ನೆಯಷ್ಟೇ ಕನಕಪುರ ನಗರ ಲಾಕ್ ಡೌನ್ ಗೆ ನಿರ್ಧಾರವಾಗಿದೆ. ರಾಮನಗರ ಜಿಲ್ಲೆಯಲ್ಲಿ ಎರಡು ತಾಲೂಕುಗಳು ಸ್ವಯಂ ಪ್ರೇರಿತ ಲಾಕ್ ಡೌನ್ ಘೋಷಣೆಯಾಗಿದೆ.