ಕೊಪ್ಪಳ: ಕೊರೊನಾ ನಿಯಂತ್ರಣಕ್ಕಾಗಿ ಜಿಲ್ಲಾಡಳಿತ ಹಲವು ದಿಟ್ಟ ಕ್ರಮ ಕೈಗೊಂಡಿದ್ದು, ಜಿಲ್ಲೆಯಲ್ಲಿ ಇಲ್ಲಿವರೆಗೂ ಸೋಂಕು ಕಾಣಿಸಿಕೊಂಡಿಲ್ಲದಿರುವುದು ನೆಮ್ಮದಿ ವಿಷಯ. ಆದರೆ ವೈರಸ್ ಬಗ್ಗೆ ಆತಂಕವಿದ್ದರೂ ಜನತೆಯಲ್ಲಿ ಸಾಮಾಜಿಕ ಅಂತರವೇ ಕಾಣುತ್ತಿಲ್ಲ. ಲಾಕ್ ಡೌನ್‌ನಿಂದ ವಿನಾಯಿತಿ ಸಿಕ್ಕ ಬಳಿಕವಂತೂ ಅಂತರ ಕಾಯ್ದುಕೊಳ್ಳುವುದನ್ನೇ ಮರೆತು ಬಿಟ್ಟಿದ್ದಾರೆ. ಕೋವಿಡ್-19 ಇಡೀ ವಿಶ್ವವನ್ನೇ ಬೆಚ್ಚಿ ಬೀಳಿಸಿದೆ.
ಮುಂದುವರಿದ ರಾಷ್ಟ್ರಗಳೇ ಕೊರೊನಾ ಭೀತಿಗೆ ತಲ್ಲಣಗೊಂಡಿವೆ. ನಿಯಂತ್ರಣಕ್ಕೆ ಎಷ್ಟೆಲ್ಲ ಪ್ರಯತ್ನ ಮಾಡಿದರೂ ಸಾಧ್ಯವಾಗುತ್ತಿಲ್ಲ. ಆದರೆ ಸೋಂಕು ನಿರ್ಮೂಲನೆಗೆ ಸಾಮಾಜಿಕ ಅಂತರವೊಂದೇ ದಿವ್ಯ ಔಷ ಧ ಎಂದು ವಿಶ್ವ ಆರೋಗ್ಯ ಸಂಸ್ಥೆ ಘಂಟಾ ಘೋಷವಾಗಿ ಹೇಳುತ್ತಿದೆ. ಸಾಮಾಜಿಕ ಅಂತರ ಒಬ್ಬರಿಂದ ಒಬ್ಬರ ನಡುವೆ ಅಂತರ ಕಾಯ್ದುಕೊಳ್ಳುವುದಾಗಿದೆ. ಗಣ್ಯಾತೀತರು, ಅ ಧಿಕಾರಿ ವರ್ಗವು ಲಾಕ್‌ಡೌನ್ ವೇಳೆ ಪ್ರತಿಯೊಬ್ಬರೂ ಸಾಮಾಜಿಕ ಅಂತರ ಕಾಯ್ದುಕೊಂಡು ಕೊರೊನಾ ನಿರ್ಮೂಲನೆಗೆ ಕೈ ಜೋಡಿಸಬೇಕೆಂದು ಹೇಳುತ್ತಿದೆ.
ಮನೆ ಬಿಟ್ಟು ಯಾರೂ ಹೊರಗೆ ಬರಬೇಡಿ. ಅಗತ್ಯವಿದ್ದರೆ ಮಾತ್ರ ಬನ್ನಿ, ಗುಂಪು ಸೇರಬೇಡಿ, ಜನದಟ್ಟಣೆ ಇರುವ ಸ್ಥಳಕ್ಕೆ ತೆರಳಬೇಡಿ ಎಂದು ಹೇಳುತ್ತಿದೆ. ಆದರೆ ಜಿಲ್ಲೆಯ ಜನರು ಮಾತ್ರ ಅದನ್ನು ಸರಿಯಾಗಿ ಪಾಲಿಸುತ್ತಿಲ್ಲ. ಸಂಸದ ಸಂಗಣ್ಣ ಕರಡಿ ಸೇರಿದಂತೆ ಜಿಲ್ಲೆಯ ಐದು ಕ್ಷೇತ್ರದ ಶಾಸಕರು, ಜಿಲ್ಲಾಧಿಕಾರಿ ಸುನೀಲ್ ಕುಮಾರ, ಎಸ್‌ಪಿ ಜಿ. ಸಂಗೀತಾ, ನಗರಸಭೆ, ಪಪಂ, ಪುರಸಭೆ ಸೇರಿದಂತೆ ಗ್ರಾಪಂ ಹಂತದಲ್ಲೂ ನಿತ್ಯ ಜಾಗೃತಿ ಮೂಡಿಸುವ ಕೆಲಸ ಮಾಡಲಾಗುತ್ತಿದೆ.
ಅಧಿ ಕಾರಿ ವರ್ಗವಂತೂ ತಮ್ಮ ಜೀವದ ಹಂಗು ತೊರೆದು ಹಗಲು-ರಾತ್ರಿ ಎನ್ನದೇ ಕೆಲಸ ಮಾಡುತ್ತಿದ್ದಾರೆ. ಕೊರೊನಾ ಬಗ್ಗೆ ಭಯ ಬೇಡ, ಆದರೆ ಎಚ್ಚರವಿರಲಿ ಎನ್ನುವ ಸಂದೇಶ ನೀಡುತ್ತಿದ್ದಾರೆ. ಲಾಕ್‌ಡೌನ್ ಬಳಿಕ ಆರಂಭದಲ್ಲಿ ಸಾಮಾಜಿಕ ಅಂತರಕ್ಕೆ ಜಿಲ್ಲೆಯಲ್ಲಿ ಉತ್ತಮ ಸ್ಪಂದನೆ ದೊರೆತಿತ್ತು. ನಂತರ ವಿನಾಯಿತಿಗಳು ದೊರೆತ ಬಳಿಕವಂತೂ ಜಿಲ್ಲೆಯ ಜನರು ಅಂತರ ಕಾಯ್ದುಕೊಳ್ಳುವುದನ್ನೇ ಮರೆತುಬಿಟ್ಟಿದ್ದಾರೆ. ಜಿಲ್ಲಾ ಕೇಂದ್ರದಲ್ಲಂತೂ ಗುಂಪು ಗುಂಪಾಗಿ ಸುತ್ತಾಟ, ಎಲ್ಲೆಂದರಲ್ಲಿ ಓಡಾಟ ಹೆಚ್ಚಾಗುತ್ತಿದೆ. ಹಲವು ಅಂಗಡಿಗಳ ಮುಂದೆ ಅಂತರ ಪಾಲನೆ ಆಗುತ್ತಿಲ್ಲ.
ಪೊಲೀಸರು, ನಗರಸಭೆ ಅ ಧಿಕಾರಿಗಳು ನಿತ್ಯವೂ ಲಾಠಿ ಹಿಡಿದು ರಸ್ತೆಯುದ್ದಕ್ಕೂ ಸಂಚಾರ ನಡೆಸಿ ಜನರಲ್ಲಿ ಎಚ್ಚರ ಮೂಡಿಸುತ್ತಿದ್ದರೂ ಜನ ಜಾಗೃತರಾಗುತ್ತಿಲ್ಲ. ಇದರಿಂದ ಅ ಧಿಕಾರಿ ವರ್ಗ, ಪೊಲೀಸರೇ ಬೇಸತ್ತು ಹೋಗಿದ್ದಾರೆ. ಕೊನೆಗೂ ಅಧಿ ಕಾರಿಗಳು ನಗರದಲ್ಲಿನ ಅಂಗಡಿ-ಮುಂಗಟ್ಟುಗಳ ಮುಂದೆ ಅಂತರ ಕಾಯ್ದುಕೊಳ್ಳದೇ ಇರುವುದು ಕಂಡುಬಂದರೆ ಅಂತಹ ಅಂಗಡಿಗಳ ಮಾಲೀಕರಿಗೆ ಎಚ್ಚರಿಕೆ ನೀಡುತ್ತಿರುವುದಲ್ಲದೇ, ದಂಡ ಹಾಕಿ ತೆರಳುತ್ತಿದ್ದಾರೆ.
* ದತ್ತು ಕಮ್ಮಾರ