Advertisement

ಲಾಕ್‌ಡೌನ್‌ ಸಡಿಲಿಕೆ: ಸಿಎಂಗೆ ಅಧಿಕಾರಿಗಳ ಸಲಹೆ?

01:15 AM Apr 20, 2020 | Sriram |

ಬೆಂಗಳೂರು: ಕೇಂದ್ರ ಸರಕಾರ ನೀಡಿದ್ದ ಮಾರ್ಗಸೂಚಿಗಳ ಅಡಿಯಲ್ಲೇ ಎ.20ರಿಂದ ಆಯ್ದ ಕಡೆ ಲಾಕ್‌ಡೌನ್‌ ನಿರ್ಬಂಧ ಸಡಿಲಿಕೆ ಸೂಕ್ತ ಎಂಬುದು ಅಧಿಕಾರಿ ವರ್ಗದ ಸಲಹೆಯಾಗಿತ್ತು!

Advertisement

ಆ ಸಲಹೆ ಪ್ರಕಾರ, ಕೇಂದ್ರದ ಮಾರ್ಗಸೂಚಿಗಳು ಉಲ್ಲಂಘನೆಯಾಗದಿದ್ದಲ್ಲಿ ಮುಂದುವರಿ ಯಬಹುದು ಎಂದು ಸಿಎಂ ಯಡಿಯೂರಪ್ಪ ಸಡಿಲಿಕೆ ವಿಚಾರ ಪ್ರಸ್ತಾವಿಸಿದ್ದರು. ಇದಕ್ಕೆ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದ್ದಂತೆ ಕೆಲವೇ ಹೊತ್ತಿನಲ್ಲಿ ನಿರ್ಧಾರ ಹಿಂಪಡೆಯಬೇಕಾಯಿತು ಎಂದು ಮೂಲಗಳು ತಿಳಿಸಿವೆ.

ವರದಿ ಸಲ್ಲಿಕೆಗೆ ಸೂಚನೆ
ಅಂಕಿ-ಸಂಖ್ಯೆ ನಿತ್ಯವೂ ಪತ್ರಿಕೆಗಳಲ್ಲಿ ಸಿಗುತ್ತಿದೆ. ಅದರ ಹೊರತಾಗಿ ಕೋವಿಡ್ 19 ನಿಯಂತ್ರಣಕ್ಕೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಏನು ಚಿಂತಿಸಿದ್ದೀರಿ? ಸಭೆಗೆ ಬರುವಾಗ ಎ.20ರ ಅನಂತರ ಏನೆಲ್ಲ ಕ್ರಮಗಳನ್ನು ಕೈಗೊಳ್ಳಬಹುದು, ಅವುಗಳ ಸಾಧಕ-ಬಾಧಕಗಳ ಕುರಿತ ಸಲಹೆಗಳೊಂದಿಗೆ ಬನ್ನಿ ಎಂದು ಸಿಎಂ ಖಾರವಾಗಿಯೇ ಅಧಿಕಾರಿಗಳಿಗೆ ತಾಕೀತು ಮಾಡಿದ್ದಾರೆ ಎನ್ನಲಾಗಿದೆ.

ಕೇಂದ್ರದ ಮಾರ್ಗಸೂಚಿ ಮಿತಿಯಲ್ಲೇ ಸಡಿಲಿಕೆ?
ಕೇಂದ್ರದ ಮಾರ್ಗಸೂಚಿ ಮಿತಿಯಲ್ಲೇ ಸಡಿಲಿಕೆ ಬಗ್ಗೆ ಅಧಿಕಾರಿಗಳು ಸಲಹೆ ನೀಡಿದ ಪ್ರಕಾರ ಚರ್ಚೆ ನಡೆಸಿ ಇದರಿಂದ ಆರ್ಥಿಕ ಚಟುವಟಿಕೆಗೂ ಉತ್ತೇಜನ ಸಿಗಲಿದೆ ಎಂಬ ದೃಷ್ಟಿಯಿಂದ ಮುಖ್ಯಮಂತ್ರಿಗಳು ಸಹಮತ ವ್ಯಕ್ತಪಡಿಸಿ ಲಾಕ್‌ಡೌನ್‌ ಸಡಿಲಗೊಳಿಸುವ ಬಗ್ಗೆ ಅಧಿಕೃತವಾಗಿ ಘೋಷಿಸಿದರು. ಆದರೆ ಇದರ ಬಗ್ಗೆ ಮಾಧ್ಯಮ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ತೀಕ್ಷ್ಣ ಅಭಿಪ್ರಾಯ ಬರುತ್ತಿದ್ದಂತೆ ಸಡಿಲಿಕೆ ನಿರ್ಧಾರ ಹಿಂಪಡೆದರು. ಸೋಮವಾರ ನಡೆಯುವ ಸಚಿವ ಸಂಪುಟ ಸಭೆಯಲ್ಲಿ ಈ ಬಗ್ಗೆ ಚರ್ಚಿಸಲು ನಿರ್ಧರಿಸಲಾಯಿತು ಎನ್ನಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next