Advertisement
ಬಸ್ ಹತ್ತಿದ ಕೂಡಲೇ, ಪ್ರಯಾಣಿಕರಿಗೆಬಸ್‌ನಲ್ಲಿ ಶೇ.50ರಷ್ಟು ಪ್ರಯಾಣಿಕರಿಗೆ ಮಾತ್ರ ಅವಕಾಶ. ಸಾಮಾಜಿಕ ಅಂತರ ಕಾಯ್ದುಕೊಂಡು ಕುಳಿ ತುಕೊಳ್ಳಿ. ಸರಿಯಾಗಿ ಮಾಸ್ಕ್ ಧರಿಸುವಂತೆ ಜಾಗೃತಿಮೂಡಿಸುತ್ತಲೇ ಟಿಕೆಟ್ ನೀಡುತ್ತಿದ್ದ ಕಂಡಕ್ಟರ್.. ಇದು.. ಸರ್ಕಾರ, ಕೊರೊನಾ ಕರ್ಫ್ಯೂ ಆದೇಶ ಜಾರಿಗೊಳಿಸಿದ ಹಿನ್ನೆಲೆಯಲ್ಲಿ ಮೆಜೆಸ್ಟಿಕ್ ಬಸ್ ನಿಲ್ದಾಣದಿಂದ ಪ್ರಾರಂಭವಾಗಿ ನೆಲಮಂಗಲ- ತುಮಕೂರು ರಸ್ತೆ ಮಾರ್ಗದಲ್ಲಿನ ಬಹುತೇಕ ಬಸ್ ನಿಲ್ದಾಣ(ಬಸ್‌ಸ್ಟಾಪ್)ಗಳ ಬಳಿ ಕಂಡು ಬಂದ ದೃಶ್ಯ.
Related Articles
Advertisement
ಉತ್ತರ ಕರ್ನಾಟಕ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆ ಹಾಗೂ ವಿವಿಧ ರಾಜ್ಯಗಳಿಂದ ಬದುಕು ಕಟ್ಟಿಕೊಳ್ಳುವುದಕ್ಕೆ ಬೆಂಗಳೂರಿಗೆ ಬಂದಿದ್ದವರು, ಬೆಂಗಳೂರನ್ನೇ ಖಾಲಿಮಾಡಿ ತೆರಳಿದರು. ಕೆಲವರು ಟಾಟಾ ಏಸ್, ಆಟೋ,ಮ್ಯಾಕ್ಸಿ ಕ್ಯಾಬ್, ಕಾರು, ಚಿಕ್ಕ ಗೂಡ್ಸ್ ವಾಹನಗಳಲ್ಲಿ ಮನೆಯಲ್ಲಿದ್ದ ಸಾಮಾನುಗಳನ್ನೆಲ್ಲ ತುಂಬಿಕೊಂಡುಊರಿನತ್ತ ಪಯಣ ಬೆಳೆಸಿದರು. ತಮಿಳುನಾಡಿನಿಂದ ಕೆಲಸ ಅರಸಿ ಬಂದಿದ್ದ ಕಾರ್ಮಿಕರು ಮತ್ತೆ ಅತ್ತಿಬೆಲೆ ಗಡಿ ಮುಖಾಂತರ ತೆರಳಿದ್ದಾರೆ. ಉಳಿದಂತೆ, ನಗರದ ವಿವಿಧಬಸ್ ನಿಲ್ದಾಣದಲ್ಲಿ ತಮ್ಮೂರಿಗೆ ತೆರಳಲು ಜನರು ಬಸ್‌ಗಾಗಿ ಕಾಯುತ್ತಿದ್ದ ದೃಶ್ಯ ಕಂಡುಬಂದಿತು.
ನೆಲಮಂಗಲ- ತುಮಕೂರು ರಸ್ತೆಯಲ್ಲಿ ಸಂಚಾರ ದಟ್ಟಣೆ : ವೀಕೆಂಡ್ ಕರ್ಫ್ಯೂ ಹಿನ್ನೆಲೆ ಭಾನುವಾರ ತಮ್ಮಊರುಗಳಿಗೆ ತೆರಳಲು ಸಾಧ್ಯವಾಗಿರಲಿಲ್ಲ. ಹೀಗಾಗಿ, ಸೋಮವಾರ ಸರ್ಕಾರ ಲಾಕ್‌ಡೌನ್‌ಘೋಷಿಸಬಹುದು ಎಂಬ ಸೂಚನೆ ಅರಿತವರು,ಭಾನುವಾರವೇ ಬೆಂಗಳೂರಿನಿಂದ ತಮ್ಮಊರುಗಳತ್ತ ತೆರಳಲು ಸಿದ್ಧತೆ ಮಾಡಿಕೊಂಡಿದ್ದರು. ಅದರಂತೆ ಬೆಳಗ್ಗೆಯೇ ಜನರು ಬಸ್‌ನಿಲ್ದಾಣಗಳತ್ತ ಮುಖ ಮಾಡಿದರು. ಹೀಗಾಗಿ,ನಗರದ ಜಾಲಹಳ್ಳಿ ಕ್ರಾಸ್, ಯಶವಂತಪುರ, ಗೊರಗುಂಟೆಪಾಳ್ಯ, ಪೀಣ್ಯ ಬಸ್‌ನಿಲ್ದಾಣದಲ್ಲಿ ಜನಜಂಗುಳಿ ಕಂಡುಬಂದಿತು.
ಕೋವಿಡ್ ನಿಯಂತ್ರಣಕ್ಕೆ ಸರ್ಕಾರ ಮತ್ತೆ14 ದಿನ ಕರ್ಫ್ಯೂ ಜಾರಿಗೊಳಿಸಿದೆ.ಹೀಗಾಗಿ, ಜನರು ತಮ್ಮ ಊರುಗಳತ್ತ ತೆರಳುತ್ತಿದ್ದಾರೆ. ಬಸ್‌ನಲ್ಲಿ ಶೇ.50ರಷ್ಟುಪ್ರಯಾಣಿಕರಿಗೆ ಅವಕಾಶ ನೀಡಿದ್ದಾರೆ. ನಾನು ವಿಶೇಷ ಚೇತನ. ಗುಲ್ಬರ್ಗಾಕ್ಕೆ ತೆರಳಬೇಕು. ನನ್ನ ಬಳಿ ಪಾಸ್ ಇದ್ದರೂ, ಬಸ್ ಟಿಕೆಟ್ ಸಿಗುತ್ತಿಲ್ಲ. – ಪ್ರಶಾಂತ್, ಪ್ರಯಾಣಿಕ
ನಾನು ಗುಲ್ಬರ್ಗಾದಿಂದ ಉದ್ಯೋಗ ಅರಸಿ ಬೆಂಗಳೂರಿಗೆ ಬಂದಿದ್ದೆ.ಕಂಪನಿಯಲ್ಲಿ ಕೆಲಸ ಮಾಡುವ ಅನೇಕರಿಗೆ ಕೋವಿಡ್ ಪಾಸಿಟಿವ್ ಬಂದಿದೆ.ಬೆಂಗಳೂರಿನಲ್ಲಿ ಜೀವನ ನಡೆಸುವುದಕ್ಕೆಭಯ ಆಗುತ್ತದೆ. ಹೀಗಾಗಿ, ಕೆಲಸಕ್ಕೆ ರಾಜಿನಾಮೆ ನೀಡಿ ಊರಿಗೆ ತೆರಳುತ್ತಿದ್ದೇನೆ. – ನವೀನ್, ಪ್ರಯಾಣಿಕ