Advertisement

ಪುಷ್ಪ ಕೃಷಿಗೂ ಲಾಕ್‌ಡೌನ್‌ ಹೊಡೆತ

04:08 PM May 07, 2020 | mahesh |

ಯಳಂದೂರು: ಕೋವಿಡ್ ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಪುಷ್ಪ ಕೃಷಿಯಲ್ಲಿ ತೊಡಗಿದ್ದ ರೈತರು ನೆಲಕಚ್ಚಿದ್ದಾರೆ. ಅಲಂಕಾರಿಕ ಹೂಗಳನ್ನು ಯಾರೂ ಕೇಳದಂತಾಗಿದೆ. ರೈತರು ಹೂವು
ಕೊಯ್ದದೆ ಗಿಡಗಳಲ್ಲಿಯೇ ಬಿಟ್ಟು ಸಾಲ ತೀರಿಸುವ ದಾರಿ ಕಾಣದೆ ಕಂಗಾಲಾಗಿದ್ದಾರೆ. ತಾಲೂಕಿನ ಮಾಂಬಳ್ಳಿಯ ಯುವ ರೈತ ಸತೀಶ್‌ ಕಳೆದ 4 ವರ್ಷಗಳಿಂದಲೂ ಪುಷ್ಪ ಕೃಷಿಯಲ್ಲಿ ತೊಡಗಿದ್ದಾರೆ. ಇವರು ಬೆಳೆಯುತ್ತಿದ್ದ ಕ್ರೆಸೆಂತೆಮಮ್‌ ತಳಿಯ ಹೂವು ವಿದೇಶಕ್ಕೆ ರಫ್ತಾಗುತ್ತಿತ್ತು. ಚಾಮರಾಜನಗರ ಹಾಗೂ ಮೈಸೂರು ಜಿಲ್ಲೆಯಲ್ಲಿ ಈ ತಳಿಯ ಹೂವನ್ನು ಬೆಳೆದಿರುವ ಏಕಮಾತ್ರ ರೈತ. ಆದರೆ ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಕಟಾವಿಗೆ ಬಂದಿದ್ದ ಈ ಹೂವನ್ನುಜಮೀನಿನಲ್ಲೇ ಬಿಟ್ಟಿದ್ದಾರೆ. ಮೂರೂವರೆ ತಿಂಗಳಿಗೆ ಕಟಾವಿಗೆ ಬರುವ ಈ ಹೂವಿನ ಗಿಡಗಳು
ಕೊಲ್ಕತ್ತಾದಿಂದ ತಂದು ಬೆಳೆದಿದ್ದರು. ಈ ಹೂವು ಸೇವಂತಿಗೆ ಯಂತೆ ಕಾಣುತ್ತದೆ. ಆದರೆ ಇದನ್ನು 8 ದಿನಗಳವರೆಗೂ ಕೆಡದ ಹಾಗೆ ಇಡಬಹುದು. ವಿದೇಶಕ್ಕೆ ರಫ್ತಾಗುವ ಇದು ಲಾಕ್‌
ಡೌನ್‌ ಹಿನ್ನೆಲೆಯಲ್ಲಿ ಜಮೀನಿನಲ್ಲೇ ಕೊಳೆಯುತ್ತಿದೆ.

Advertisement

ಜರ್ಬೆರಾ ಬೆಳೆದು ಜರ್ಜರಿತ: 2 ಎಕರೆ ಪ್ರದೇಶದಲ್ಲಿ ಜರ್ಬೆರಾ ಹೂವು ಬೆಳೆದಿದ್ದರು. ಇದರಿಂದ 10 ಲಕ್ಷ ರೂ. ಆದಾಯದ ನಿರೀಕ್ಷೆ ಇತ್ತು. ಲಾಕ್‌ಡೌನ್‌ ಪರಿಣಾಮ ಹೂವೆಲ್ಲಾ ರಸ್ತೆಗೆ ಚೆಲ್ಲಿದರು. ಗಿಡವನ್ನು ಉಳಿಸಿಕೊಳ್ಳಬೇಕಾದರೆ ಹೂವನ್ನು ಕೀಳಲೇಬೇಕು. ಲಾಕ್‌ಡೌನ್‌ನಿಂದ 30 ಲಕ್ಷ ರೂ. ನಷ್ಟವಾಗಿದೆ. ರಾಜ್ಯದಲ್ಲಿ ಹೂವು ಬೆಳಗಾರರ ಒಂದು ವ್ಯಾಟ್ಸಪ್‌ ಗ್ರೂಪ್‌ ಮಾಡಿಕೊಂಡಿದ್ದೇವೆ. ಕೋಟ್ಯಂತರ ರೂಪಾಯಿ ನಷ್ಟವಾಗಿದೆ. ಬೆಳೆಗಾರರಿಗೆ ಸರ್ಕಾರ ವಿಶೇಷ ಪ್ಯಾಕೇಜ್‌ ಘೋಷಿಸಬೇಕು ಎಂದು ಮನವಿ ಮಾಡಿದ್ದಾರೆ.

ವೈಜ್ಞಾನಿಕ ಪರಿಹಾರ ಕೊಡಿ: ಮುಖ್ಯಮಂತ್ರಿ ಯಡಿಯೂರಪ್ಪ ಪುಷ್ಪ ಕೃಷಿಕರಿಗೆ ಪ್ರತಿ ಹೆಕ್ಟೇರ್‌ಗೆ 25 ಸಾವಿರ ರೂ. ಪರಿಹಾರ ಘೋಷಿಸಿರುವ ಪರಿಹಾರ ಸಾಲದು. ವೈಜ್ಞಾನಿಕ ಪರಿಹಾರ ನೀಡಬೇಕು ಎಂಬುದು ಪುಷ್ಪ ಕೃಷಿಕರ ಆಗ್ರಹವಾಗಿದೆ.

● ಫೈರೋಜ್‌ ಖಾನ್‌

Advertisement

Udayavani is now on Telegram. Click here to join our channel and stay updated with the latest news.

Next