Advertisement

ವಿವಿಧ ರಾಷ್ಟ್ರಗಳಲ್ಲಿ ಕೋವಿಡ್‌ ಹೇಗಿದೆ;ಆಕ್ಲೆಂಡ್‌ನ‌ಲ್ಲಿ ಲಾಕ್‌ಡೌನ್‌ ಒಂದು ವಾರ ವಿಸ್ತರಣೆ

01:47 AM Aug 25, 2020 | mahesh |

ಮಣಿಪಾಲ: ಕೆಲವು ರಾಷ್ಟ್ರಗಳಲ್ಲಿ ಕೋವಿಡ್‌ ಇನ್ನೂ ತನ್ನ ಸಾಮ್ರಾಜ್ಯವನ್ನು ವಿಸ್ತರಿಸುತ್ತಿದೆ. ಕೆಲವು ರಾಷ್ಟ್ರಗಳು ಲಾಕ್‌ಡೌನ್‌ ಅನ್ನು ಹಿಂಪಡೆದಿದ್ದು, ಯಥಾಸ್ಥಿತಿಗೆ ಮರಳುತ್ತಿದೆ. ಇಲ್ಲಿ ಜಾಗತಿಕವಾಗಿ ಕೊರೊನಾದ ಸ್ಥಿತಿಗತಿಗಳನ್ನು ವಿವರಿಸಲಾಗಿದೆ.

Advertisement

ನ್ಯೂಜಿಲೆಂಡ್‌ ಪ್ರಧಾನಿ ಜೆಸಿಂಡಾ ಅರ್ಡೆರ್ನ್ ಸೋಮವಾರ ಆಕ್ಲೆಂಡ್‌ನ‌ಲ್ಲಿ ಲಾಕ್‌ಡೌನ್‌ ಅನ್ನು ಒಂದು ವಾರ ವಿಸ್ತರಿಸಿದ್ದಾರೆ. ಸುಮಾರು ಎರಡು ವಾರಗಳ ಹಿಂದೆ ಹೊಸ ಪ್ರಕರಣಗಳು ಹೊರಬಂದ ಬಳಿಕ ನ್ಯೂಜಿಲೆಂಡ್‌ನ‌ಲ್ಲಿ ಲಾಕ್‌ಡೌನ್‌ ವಿಧಿಸಲಾಗಿದೆ. ಇದು ಲೆವೆಲ್‌ ಟು ಲಾಕ್‌ ಡೌನ್‌ ಆಗಿರುತ್ತದೆ ಎಂದು ಜೆಸಿಂಡಾ ಹೇಳಿದರು. ಇದರಲ್ಲಿ ಜನರು ಸಾರ್ವಜನಿಕ ಸಾರಿಗೆಯಲ್ಲಿ ಪ್ರಯಾಣಿಸಲು ಸಾಧ್ಯವಾಗುತ್ತದೆ. ಆದರೆ ಮಾಸ್ಕ್ ಹಾಗೂ ಸಾಮಾಜಿಕ ದೂರವನ್ನು ಅನುಸರಿಸುವುದು ಅಗತ್ಯವಾಗಿರುತ್ತದೆ.

ಚೀನ: ದೇಶೀಯ ಸೋಂಕಿನ ಪ್ರಕರಣಗಳಿಲ್ಲ ಚೀನದಲ್ಲಿ ಸತತ ಎಂಟನೇ ದಿನವೂ ಯಾವುದೇ ದೇಶೀಯ ವೈರಸ್‌ ಪ್ರಕರಣಗಳು ವರದಿಯಾಗಿಲ್ಲ. ಆದರೆ 24 ಗಂಟೆಗಳಲ್ಲಿ 16 ಸೋಂಕಿತರಲ್ಲಿ ಕೊರೊನಾ ಕಂಡುಬಂದಿದ್ದು, ಅವರೆಲ್ಲರೂ ವಿದೇಶದವರಾಗಿದ್ದಾರೆ. ಈವರೆಗೆ ದೇಶದಲ್ಲಿ 84,967 ಪ್ರಕರಣಗಳು ವರದಿಯಾಗಿದ್ದು, 4634 ಜನರು ಪ್ರಾಣ ಕಳೆದುಕೊಂಡಿ¨ªಾರೆ. ಬೀಜಿಂಗ್‌ ಸೇರಿದಂತೆ ಹಲವು ಸ್ಥಳಗಳಲ್ಲಿ ಸರಕಾರ ನಿರ್ಬಂಧಗಳನ್ನು ಸಡಿಲಗೊಳಿಸಿದೆ. ಬೀಜಿಂಗ್‌ ಜನರು ಇನ್ನು ಮುಂದೆ ಮಾಸ್ಕ್ ಧರಿಸುವ ಅಗತ್ಯ ಇಲ್ಲ.

Advertisement

Udayavani is now on Telegram. Click here to join our channel and stay updated with the latest news.

Next