Advertisement

Covid; ಮೇ 7ರವರೆಗೆ ಲಾಕ್ ಡೌನ್ ಮುಂದುವರಿಕೆ, ಫುಡ್ ಡೆಲಿವರಿ Appಗೆ ಅವಕಾಶ ಇಲ್ಲ: ತೆಲಂಗಾಣ

08:59 AM Apr 21, 2020 | Nagendra Trasi |

ಹೈದರಾಬಾದ್:ಕೋವಿಡ್ 19 ವೈರಸ್ ತಡೆಗಟ್ಟುವ ಹಿನ್ನೆಲೆಯಲ್ಲಿ ಲಾಕ್ ಡೌನ್ ಅನ್ನು ರಾಜ್ಯದಲ್ಲಿ ಮೇ 7ರವರೆಗೆ ವಿಸ್ತರಿಸಲಾಗಿದೆ ಎಂದು ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಘೋಷಿಸಿದ್ದು, ಫುಡ್ ಡೆಲಿವರಿ ಮೊಬೈಲ್ ಆ್ಯಪ್ಲಿಕೇಷನ್ ಗೆ ಸೋಮವಾರದಿಂದ ಅವಕಾಶ ಇಲ್ಲ ಎಂದು ತಿಳಿಸಿದ್ದಾರೆ.

Advertisement

ಪ್ರಧಾನಿ ನರೇಂದ್ರ ಮೋದಿ ಅವರು ಈಗಾಗಲೇ ಕೋವಿಡ್ 19 ತಡೆಗಟ್ಟಲು ರಾಜ್ಯ ಸರ್ಕಾರಗಳ ಮನವಿ ಮೇರೆಗೆ ಮೇ 3ರವರೆಗೆ ದೇಶಾದ್ಯಂತ ಲಾಕ್ ಡೌನ್ ಮುಂದುವರಿಯಲಿದೆ ಎಂದು ಘೋಷಿಸಿದ್ದರು. ಇದೀಗ ರಾಜ್ಯಗಳಲ್ಲಿನ ಪರಿಸ್ಥಿತಿ ಅವಲೋಕನದ ನಂತರ ಲಾಕ್ ಡೌನ್ ಮುಂದುವರಿಸುವ ನಿರ್ಧಾರ ಸಂಪುಟದಲ್ಲಿ ಕೈಗೊಳ್ಳಲಾಗಿದೆ ಎಂದು ಕೆಸಿಆರ್ ವಿವರಿಸಿದ್ದಾರೆ.

ತೆಲಂಗಾಣದಲ್ಲಿ ಮಾರಣಾಂತಿಕ ಕೋವಿಡ್ ವೈರಸ್ ಸೋಂಕಿತರ ಸಂಖ್ಯೆ 858ಕ್ಕೆ ತಲುಪಿದ್ದು, ಸಾವಿನ ಸಂಖ್ಯೆ 21ಕ್ಕೆ ಏರಿದೆ. ರಾಜ್ಯದ ವಾರಂಗಲ್, ಯಾದ್ರಾದ್ರಿ ಭದ್ರಾದ್ರಿ, ಸಿದ್ದಿಪೇಟ್, ವಾನಪಾರ್ಥೈ ಕೋವಿಡ್ ಮುಕ್ತ ಜಿಲ್ಲೆಗಳಾಗಿದೆ ಎಂದು ತಿಳಿಸಿದ್ದಾರೆ.

ಕೋವಿಡ್ 19 ವೈರಸ್ ಪರೀಕ್ಷಾ ವಿಚಾರದಲ್ಲಿಯೂ ತೆಲಂಗಾಣ ರಾಜ್ಯ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. ರಾಜ್ಯ ಸರ್ಕಾರ 12ಕೆಜಿ ಅಕ್ಕಿ, 87 ಲಕ್ಷ ಪಡಿತರ ಚೀಟಿ ಹೊಂದಿರುವವರಿಗೆ 1,500 ರೂಪಾಯಿ ನಗದು ನೀಡಲಾಗಿದೆ. ತೆಲಂಗಾಣದಲ್ಲಿರುವ ವಲಸೆ ಕಾರ್ಮಿಕ ಕುಟುಂಬಗಳಿಗೆ 1500 ರೂಪಾಯಿ ನಗದು, 12ಕೆಜಿ ಅಕ್ಕಿ ನೀಡಲಾಗಿದೆ ಎಂದು ಮುಖ್ಯಮಂತ್ರಿ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next