Advertisement

ಕಠಿಣ ಲಾಕ್‌ಡೌನ್‌ಗೆ ಜಿಲ್ಲೆ ಸ್ತಬ್ಧ

01:57 PM May 11, 2021 | Team Udayavani |

ಮಂಡ್ಯ: ಜಿಲ್ಲೆಯಲ್ಲಿ ಕೋವಿಡ್ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರ ಘೋಷಿಸಿರುವ ಕಠಿಣ ಲಾಕ್‌ ಡೌನ್‌ಗೆ ಸಕ್ಕರೆ ನಾಡು ಮಂಡ್ಯದಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

Advertisement

ಸೋಮವಾರ ಬೆಳಗ್ಗೆಯಿಂದಲೇ ಅಗತ್ಯ ಸೇವೆಗಳನ್ನು ಹೊರತುಪಡಿಸಿ ಉಳಿದೆಲ್ಲ ವ್ಯಾಪಾರ- ವಹಿ ವಾಟು ಸ್ಥಗಿತಗೊಂಡಿತ್ತು. ಅಂಗಡಿ ಮಾಲೀಕರು ಸ್ವಯಂ ಪ್ರೇರಿತರಾಗಿ ಬಾಗಿಲುಗಳನ್ನು ಮುಚ್ಚಿ ಸಹ ಕರಿಸಿದರು. ಮಂಡ್ಯ, ಮದ್ದೂರು, ಶ್ರೀರಂಗಪಟ್ಟಣ, ಮಳವಳ್ಳಿ, ನಾಗಮಂಗಲ, ಪಾಂಡವಪುರ ಹಾಗೂ ಕೆ. ಆರ್‌. ಪೇಟೆ ಪಟ್ಟಣಗಳಲ್ಲೂ ಎಲ್ಲವೂ ಬಂದ್‌ ಆಗಿತ್ತು. ಹಣ್ಣು, ತರಕಾರಿ ಹಾಗೂ ಹಾಲಿನ ಕೇಂದ್ರಗಳು, ಹೋಟೆಲ್‌ಗ‌ಳು ಸಂಜೆವರೆಗೂ ತೆರೆದಿದ್ದವು.

ಮುಚ್ಚಿದ್ದ ಅಂಗಡಿಗಳು: ನಗರದ ವಾಣಿಜ್ಯ ಕೇಂದ್ರಗಳಾದ ಪೇಟೆ ಬೀದಿ, ವಿವಿ ರಸ್ತೆ, ವಿನೋಬಾ ರಸ್ತೆ, ನೂರಡಿ ರಸ್ತೆ, ಆರ್‌.ಪಿ.ರಸ್ತೆ, ಗುತ್ತಲು ರಸ್ತೆ, ಬೆಂಗಳೂರು-ಮೈಸೂರು ಹೆದ್ದಾರಿ ಸೇರಿದಂತೆ ನಗರದ ಪ್ರಮುಖ ರಸ್ತೆಗಳ ಅಂಗಡಿಗಳು, ಷೋ ರೂಂಗಳು ಸೇರಿದಂತೆ ವಿವಿಧ ಎಲ್ಲ ರೀತಿಯ ಅಂಗಡಿಗಳು ಮುಚ್ಚಿದ್ದವು.

ಸಾರಿಗೆ ಸಂಚಾರ ಸ್ತಬ್ಧ: ಲಾಕ್‌ಡೌನ್‌ ಪರಿಣಾಮ ಯಾವುದೇ ವಾಹನಗಳು ರಸ್ತೆಗಿಳಿಯಲಿಲ್ಲ. ನಗರದ ಪ್ರಮುಖ ರಸ್ತೆಗಳು ಸೇರಿದಂತೆ ಬೆಂಗಳೂರು- ಮೈಸೂರು ಹೆದ್ದಾರಿ ಸಂಪೂರ್ಣ ಖಾಲಿ ಖಾಲಿಯಾಗಿದ್ದು, ಬಿಕೋ ಎನ್ನುತ್ತಿದ್ದವು. ಪೊಲೀಸ್‌ ಬಿಗಿ ಭದ್ರತೆ: ಮಂಡ್ಯ ನಗರ ಸೇರಿದಂತೆ 7 ತಾಲೂಕುಗಳ ಪಟ್ಟಣದಲ್ಲಿ ಕೊರೊನಾ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತರುವ ಉದ್ದೇಶದಿಂದ ಪೊಲೀಸರ ಭದ್ರತೆ ಕೈಗೊಳ್ಳಲಾಗಿತ್ತು. ಪ್ರಮುಖ ರಸ್ತೆಗಳಲ್ಲಿ ಸಂಚರಿಸುವ ಪ್ರತಿಯೊಂದು ವಾಹನಗಳನ್ನು ತಪಾಸಣೆ ಮಾಡಲಾಗುತ್ತಿತ್ತು. ಅಲ್ಲದೆ, ಜಿಲ್ಲೆಯ ಗಡಿ ಭಾಗದಲ್ಲಿರುವ 11 ಚೆಕ್‌ಪೋಸ್ಟ್‌ಗಳಲ್ಲಿ ಜಿಲ್ಲೆಗೆ ಆಗ ಮಿಸುವ ವಾಹನಗಳ ತಪಾಸಣೆ ನಡೆಸಲಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next