Advertisement
ತಗ್ಗಿದ ಸೋಂಕು ಪ್ರಮಾಣಎಪ್ರಿಲ್ ಪ್ರಾರಂಭವಾದಾಗಿನಿಂದ ಸೋಂಕಿನ ಪ್ರಮಾಣವು ಗಮನಾರ್ಹವೆನ್ನುವಂತೆ ನಿಧಾನವಾಗಿದೆ. ವಾರದ ಹಿಂದೆ 4068 ಜನರು ತೀವ್ರ ನಿಗಾ ಘಟಕಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಇದೀಗ ಆ ಸಂಖ್ಯೆ 3497 ಕ್ಕೆ ಇಳಿದಿದೆ. ಇದರೊಂದಿಗೆ ಸಾವಿನ ಪ್ರಮಾಣವೂ ಗಮನಾರ್ಹವಾಗಿ ಇಳಿಕೆಯಾಗಿದೆ.
ಮೇ 3ರ ವರೆಗೆ ಲಾಕ್ ಡೌನ್ ನಿಯಮಗಳು ಜಾರಿಯಲ್ಲಿದ್ದರೂ ಎ. 14ರ ಅನಂತರ ಕೆಲವು ನಿರ್ದಿಷ್ಟ ಉದ್ಯಮಗಳಿಗೆ ನಿಯಮ ಸಡಿಲಿಕೆ ಮಾಡಲಾಗಿದೆ. ಮರದ ಕಂಪೆನಿಗಳು, ಪುಸ್ತಕ ಮಳಿಗೆಗಳು ಮತ್ತು ಮಕ್ಕಳ ವಸ್ತುಗಳನ್ನು ಮಾರಾಟ ಮಾಡುವ ಮಳಿಗೆಗಳಂತಹ ವ್ಯವಹಾರಗಳು ಆರಂಭಿಸಬಹುದೆಂದು ಕಾಂಟೆ ತಿಳಿಸಿದ್ದರು. ಪ್ರಸ್ತುತ ಸೋಂಕು ಮರುಕಳಿಕೆಯ ಬಗ್ಗೆಯೇ ಹೆಚ್ಚು ಆತಂಕ ಇಟಲಿಯನ್ನೂ ಕಾಡತೊಡಗಿದೆ. ಯಾಕೆಂದರೆ ಚೀನದಲ್ಲೂ ಇಂಥ ಪ್ರಕರಣಗಳು ಹೆಚ್ಚುತ್ತಿವೆ. ಈ ಹಿನ್ನೆಲೆಯಲ್ಲಿ ಸಾಂಕ್ರಾಮಿಕ ರೋಗದ ಹರಡುವಿಕೆ ಇನ್ನಷ್ಟು ಏರುತ್ತಲೇ ಇದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಕಾರ್ಯನಿರ್ವಾಹಕ ಮಂಡಳಿ ಸದಸ್ಯ ಮತ್ತು ಇಟಾಲಿಯನ್ ಆರೋಗ್ಯ ಸಚಿವಾಲಯದ ಸಲಹೆಗಾರ ವಾಲ್ಟರ್ ರಿಕಿ ಯಾರ್ಡಿ ಆಲ್ ಜಜೀರಾ ಮಾಧ್ಯಮಕ್ಕೆ ತಿಳಿಸಿದ್ದಾರೆ. ಹುಬೈ ಪ್ರಾಂತ್ಯದಲ್ಲಿ ಹೊಸ ಸೋಂಕುಗಳ ಬೆಳವಣಿಗೆ ಶೇ.0.1ರಷ್ಟು ಇಳಿಮುಖವಾದಾಗ ಚೀನಾ ಸಹ ಕೆಲವು ಕಠಿನ ಕ್ರಮಗಳನ್ನು ಸಡಿಲಗೊಳಿಸಲು ಆರಂಭಿಸಿತು.