Advertisement

ಲಾಕ್ ಡೌನ್: ಹಿರಿಯರಿಗೆ ಹೋಂ ಡೆಲಿವರಿಯ ಆಸರೆ

02:06 PM May 09, 2020 | sudhir |

ಮಣಿಪಾಲ: ತನ್ನ ಮನೆಯ ಸುತ್ತ ಇರುವ ಗುಲಾಬಿ ತೋಟಕ್ಕೆ ಹೋಗಿ ನೀರು ಹಾಕಿದ್ದು ಬಿಟ್ಟರೆ ಬಹುತೇಕರು ಮನೆಯಿಂದ ಹೊರಬಂದಿಲ್ಲ. ಇದು ಕ್ಯಾಲಿಫೋರ್ನಿಯಾದ ಹಲವರ ಕಥೆಯಿದು. ಸುಮಾರು 8 ವಾರಗಳಿಂದ ಇವರದ್ದು ಇದೇ ದಿನಚರಿ. ಕೆಲವರು ತಮ್ಮ ಮೆಡಿಕಲ್‌ ಮತ್ತು ದಿನಸಿ ಅಂಗಡಿಗೆ ತೆರಳಬೇಕಿತ್ತು. ಆದರೆ ಮನೆಯ ಕಂಪೌಡ್‌ನಿಂದ ಹೊರಗೆ ಹೋಗದೇ ಎಲ್ಲವನ್ನೂ ನಿಭಾಯಿಸಿದ್ದರು.

Advertisement

ಕೆಲವರು ಹೃದಯದ ಕಾಯಿಲೆಯಿಂದ ಬಳಲುತ್ತಿದ್ದರು. ಇನ್ಯಾರೋ ಒಬ್ಬರು ಉರಿಯೂತದ ಕಾಯಿಲೆಯಿಂದ ಬಳಲುತ್ತಿದ್ದರು. ಈ ಕಾರಣಕ್ಕೆ ಅವರು ಹೊರಗೆ ಹೋಗಿಲ್ಲ. ಕೋವಿಡ್‌-19 ಹೃದಯ ಸಂಬಂಧಿ ಕಾಯಿಲೆ ಇರುವ ಜನರಲ್ಲಿ ಹೆಚ್ಚಾಗಿ ಕಂಡು ಬಂದಿರುವ ಕಾರಣ ಆ ಸಮಸ್ಯೆ ಎದುರಿಸುತ್ತಿರುವವರು ಲಕ್ಷಾಂತರ ಮಂದಿ ಇದ್ದಾರೆ. ಬೇರೆ ಊರಿನಲ್ಲಿರುವ ತಮ್ಮ ಮಕ್ಕಳೊಂದಿಗೆ ಮಾತನಾಡಬೇಕೆಂದರೆ ಫೋನ್‌ನಲ್ಲಿ ಮಾತನಾಡಿ ಮುಗಿಸುತ್ತಾರೆ. ಹೊರಗೆ ಕಾಲಿಡದಿದ್ದರೂ ಯಾರೂ ಒಂದು ಹೊತ್ತೂ ಉಪವಾಸ ಮಲಗಿಲ್ಲ. ಮನೆಗೆ ದಿನಸಿ ಸಾಮಗ್ರಿಗಳು ಪೂರೈಕೆಯಾಗುತ್ತಿತ್ತು.

ಸೋಂಕು ಹೆಚ್ಚಾಗುತ್ತಿದ್ದ ಸಂದರ್ಭ ಮನೆಯಿಂದ ಹೊರ ಹೋಗಲು ಅಸಾಧ್ಯ. ಹಾಗಾಗಿ ತಮ್ಮ ರಸ್ತೆಯಲ್ಲೇ ಇರುವ ಸ್ವಯಂ ಸೇವಕಿಯೊಬ್ಬರೊಂದಿಗೆ ಸ್ನೇಹವಿತ್ತು. ಸ್ಥಳೀಯ ಸೇವಾ ಸಂಸ್ಥೆಯೊಂದರ ಕಾರ್ಯಕರ್ತೆ. ಈ ಇಳಿವಯಸ್ಸಿನವರ ಅಗತ್ಯವನ್ನು ಈ ಕಾರ್ಯಕರ್ತೆ ಪೂರೈಸುತ್ತಾರೆ.

ದಿನಸಿ ವಸ್ತುಗಳನ್ನು ಖರೀದಿಸಲು ಹೊರಬರಲು ಅಸಾಧ್ಯವಾದವರಿಗೆ ನೆರವಾಗುತ್ತಾರೆ. ಹಿರಿಯರಿರುವ ಮನೆಗಳಿಗೇ ಅಗತ್ಯ ವಸ್ತುಗಳನ್ನು ತಲುಪಿಸುತ್ತಾರೆ. ಅದು ಸೇವೆ. ಮನೆಯವರು ಪಾವತಿಸುವುದು ದಿನಸಿಯ ಹಣ ಮಾತ್ರ. ಈ ಕಾರ್ಯಕರ್ತೆಯರು ಟಿಪ್ಸ್‌ ಅಥವಾ ಸಾಗಣೆ ವೆಚ್ಚವನ್ನು ತೆಗೆದುಕೊಳ್ಳುವುದಿಲ್ಲ.

“ನಾನು ಏನು ಮಾಡಬೇಕು ಎಂದು ನನಗೆ ತಿಳಿದಿರಲಿಲ್ಲ. ಸಾಕಷ್ಟು ಖನ್ನತೆಗೆ ಒಳಗಾಗಿದ್ದೆ. ನಾನು ಆನ್‌ಲೈನ್‌ನಲ್ಲಿ ಬರ್ಕ್ಲಿ ಸೇವಾ ಸಂಸ್ಥೆಯ ಹೆಸರು ನೋಡಿದ ಬಳಿಕ ನಿರಾಳವಾದೆ. ಇಂದು ನನ್ನ ಅಗತ್ಯವನ್ನು ಇದು ಪೂರೈಸುತ್ತಿದೆ ಎನ್ನುತ್ತಾರೆ ಹಾಗೆ ಸಹಾಯ ಪಡೆದವರಲ್ಲಿ ಒಬ್ಬರು. ಕ್ಯಾಲಿಫೋರ್ನಿಯಾದ ಗವರ್ನರ್‌ ರಾಜ್ಯವ್ಯಾಪಿ ಲಾಕ್‌ಡೌನ್‌ಗೆ ಆದೇಶಿಸಿದಾಗ “ಬರ್ಕ್ಲಿ ಮ್ಯೂಚುವಲ್‌ ಏಡ್‌ ನೆಟ್ವರ್ಕ್’ ಪ್ರಾರಂಭಗೊಂಡಿತ್ತು.

Advertisement

ಕೋವಿಡ್‌-19ನಿಂದ ನಾವು ಜನರನ್ನು ಸುರಕ್ಷಿತವಾಗಿಡಲು ಹೇಗೆ ಸಹಾಯ ಮಾಡಬಹುದು? ಎಂಬುದನ್ನು ಈ ಯೋಚಿಸಿದಾಗ ಈ ಐಡಿಯಾ ಬಂತು ಎಂದು ಇದರ ಸ್ಥಾಪಕರಲ್ಲಿ ಒಬ್ಬರಾದ ಮಾರ್ಕ್ಸ್ ಅವರ ಅಭಿಪ್ರಾಯ. ತಮ್ಮ ನೆರೆಹೊರೆಯಲ್ಲಿ ವಾಸಿಸುತ್ತಿರುವ ಹಿರಿಯರಿಗೆ ದಿನಸಿ ವಸ್ತುಗಳನ್ನು ನೀಡಲು ಪ್ರಾರಂಭಿಸಿದರು. ಈಗ ಈ ಸಂಸ್ಥೆ 750ಕ್ಕೂ ಹೆಚ್ಚು ಸ್ವಯಂಸೇವಕರನ್ನು ಹೊಂದಿದೆ. ಈ ಸ್ವಯಂಸೇವಕರು ತಮ್ಮ ಗ್ರಾಹಕರಿಂದ ಕನಿಷ್ಠ ಆರು ಅಡಿಯ ಸಾಮಾಜಿಕ ಅಂತರವನ್ನು ಕಾಯ್ದುಕೊಂಡೇ ಸೇವೆ ಸಲ್ಲಿಸುತ್ತಾರೆ.

Advertisement

Udayavani is now on Telegram. Click here to join our channel and stay updated with the latest news.

Next