Advertisement

ಬಿಟ್ಟು ಬಿಡಿ ಸರ್‌; ಇನ್ನೊಮ್ಮೆ ಹೊರಗೆ ಬರಲ್ಲ

10:44 AM May 22, 2021 | Team Udayavani |

ಹೊಸಪೇಟೆ: ವಿಜಯನಗರ ಜಿಲ್ಲೆಯಲ್ಲಿ ಕಟ್ಟುನಿಟ್ಟಿನ ಲಾಕ್‌ಡೌನ್‌ ಜಾರಿಗೊಳಿಸಿರುವಹಿನ್ನೆಲೆಯಲ್ಲಿ ಮನೆಯಿಂದ ಹೊರಬರುವವರನ್ನು ವಶಕ್ಕೆ ಪಡೆದುವಾಹನಗಳನ್ನು ಪೊಲೀಸರು ಶುಕ್ರವಾರ ಸೀಜ್‌ ಮಾಡಿದರು. ಲಾಕ್‌ಡೌನ್‌ನ ಮೂರನೇ ದಿನ ಪೊಲೀಸರು ಕಟ್ಟುನಿಟ್ಟಿನ ತಪಾಸಣೆ ನಡೆಸಿದರು.

Advertisement

ನಗರದ ಮೂರಂಗಡಿ ವೃತ್ತ, ಗಾಂಧಿ  ಚೌಕ್‌,ಬಸ್‌ ಡಿಪೋ ಬಳಿ ವಾಹನಗಳನ್ನು ಪೊಲೀಸರುಸೀಜ್‌ ಮಾಡಿದರು. ಅನಗತ್ಯವಾಗಿ ಮನೆಗಳಿಂದಹೊರಗಡೆ ಬಂದವರಿಗೆ ಪೊಲೀಸರು ಎಚ್ಚರಿಕೆಯೂನೀಡಿದರು. ವಾಹನ ಸೀಜ್‌ ಮಾಡಿ, ಪೊಲೀಸ್‌ ಠಾಣೆಗೆ ಒಯ್ದರು.

ಹೊರ ಬಂದವರು ವಶಕ್ಕೆ: ಮನೆಗಳಿಂದ ಅನಗತ್ಯ ಹೊರಬಂದವರನ್ನು ಪೊಲೀಸರು ವಶಕ್ಕೆ ಪಡೆದರು.ಈ ವೇಳೆ “ಸರ್‌ ಬಿಟ್ಟು ಬಿಡಿ ಸರ್‌, ಇನ್ನೊಂದು ಸಲಬರೋಲ್ಲಾ, ನಮ್ಮ ಮನೆಯಲ್ಲಿ ತಾಯಿ ಒಬ್ರೆ ಇದ್ದಾರೆ,ಇನ್ನೊಂದು ಸಲ ಬರೋಲ್ಲಾ ಬಿಡಿ ಸರ್‌’ ಎಂದುಹೊರ ಬಂದಿದ್ದ ಯುವಕರು ಗೊಗರೆದರು.ಪೊಲೀಸ್‌ ಜೀಪ್‌ ಏರಲು ಹಿಂದೇಟು ಹಾಕಿದಯುವಕರು ತಮ್ಮ ಮನೆಗಳಲ್ಲಿ ಒಬ್ಬಬ್ಬರೇ ಇದ್ದಾರೆ.ದಯವಿಟ್ಟು ಬಿಟ್ಟುಬಿಡಿ ಎಂದು ಪೊಲೀಸರ ಬಳಿಕೋರಿದರು. ನಿಮ್ಮನ್ನ ಹೊಡೆಯೋಲ್ಲಾ, ಮೊದಲು ಜೀಪ್‌ ಹತ್ತಿ ಎಂದು ವಾಹನ ಹತ್ತಿಸಿದ ಪೊಲೀಸರು. ನಗರದ ಹಂಪಿ ರಸ್ತೆಯಲ್ಲಿ ಅನಗತ್ಯ ಹೊರ ಬಂದು ನಾಟಕವಾಡಿದ ಯುವಕರಿಗೆ ಪೊಲೀಸರು ಲಾಠಿರುಚಿ ಕೂಡ ತೋರಿಸಿದರು. ಹೊರಬಂದಿದ್ದವರನ್ನು ಪೊಲೀಸರು ವಶಕ್ಕೆ ಪಡೆದು ಠಾಣೆಗೆ ಕರೆದೊಯ್ದರು.

ನಗರ ಸೇರಿದಂತೆ ಕಮಲಾಪುರ, ಮರಿಯಮ್ಮನಹಳ್ಳಿ, ಹಂಪಿ ಭಾಗದಲ್ಲೂಪೊಲೀಸರು ನಾಕಾಬಂದಿ ಹಾಕಿ ಅನಗತ್ಯ ಹೊರಬಂದಿದ್ದ ವಾಹನಗಳನ್ನು ತಪಾಸಣೆ ನಡೆಸಿದರು. ಈವೇಳೆ ಕೆಲವರನ್ನು ವಶಕ್ಕೆ ಪಡೆದು ವಾಹನ ಸೀಜ್‌ ಮಾಡಿದರು.

ಲಾಕ್‌ಡೌನ್‌ ಕಟ್ಟುನಿಟ್ಟಿನ ಜಾರಿಗೆ ಮುಂದಾಗಿರುವ ಪೊಲೀಸರು ಅನಗತ್ಯವಾಗಿ ಹೊರಬಂದವರಿಗೆ ಲಾಠಿ ಏಟಿನ ರುಚಿ ಉಣಬಡಿಸುತ್ತಿದ್ದರು. ಮನೆಗಳಿಂದ ಹೊರ ಬಂದು ಮೈದಾನಗಳಲ್ಲಿ ಕ್ರಿಕೆಟ್‌ ಆಡುವವರು ಹಾಗೂ ಕಟ್ಟೆಗಳಲ್ಲಿ ಕುಳಿತವರಿಗೂ ಲಾಠಿಏಟು ನೀಡಿ ಮನೆಗಳಿಗೆ ಕಳುಹಿಸಿದ ಪ್ರಸಂಗಗಳು ಕೂಡ ಜರುಗಿದವು. ಕಟ್ಟುನಿಟ್ಟಿನ ಲಾಕ್‌ಡೌನ್‌ ಅನ್ನು ಜಾರಿಗೊಳಿಸಿ ಕೊರೊನಾ ಕೊಂಡಿ ಕಳಚಲುಜಿಲ್ಲಾಡಳಿತ ಪ್ರಯತ್ನಿಸುತ್ತಿದೆ. ಹೀಗಾಗಿ ಪೊಲೀಸರುಅನಗತ್ಯವಾಗಿ ಹೊರಬರುವವರನ್ನು ವಶಕ್ಕೆ ಪಡೆದು, ವಾಹನ ಸೀಜ್‌ ಮಾಡುತ್ತಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next