ಮಂಡ್ಯ: ಕೋವಿಡ್ ನಿಯಂತ್ರಣಕ್ಕಾಗಿ ಸರ್ಕಾರಘೋಷಿಸಿರುವ ಲಾಕ್‌ಡೌನ್ ಹಿನ್ನೆಲೆ ರೈತರು,ವ್ಯಾಪಾರಸ್ಥರು ಹಾಗೂ ವರ್ತಕರು ಸಂಕಷ್ಟಅನುಭವಿಸುವಂತಾಗಿದೆ.ಮಂಡ್ಯ ನಗರದ ಮಾರುಕಟ್ಟೆಯನ್ನು 5 ಕಡೆ ಸ್ಥಳನಿಗದಿ ಮಾಡಿದ್ದು ತೊಂದರೆ ಅನುಭವಿಸುವಂತಾಗಿದೆ.
ಅಲ್ಲದೆ, ಇರುವ 4 ಗಂಟೆ ವ್ಯಾಪಾರ ಮಾಡಲುಸಾಧ್ಯವಾಗದೆ ನಷ್ಟ ಅನುಭವಿಸುವಂತಾಗಿದೆ.ನಗರದ ಸಿಹಿನೀರು ಕೊಳ, ಕಾಳಿಕಾಂಬ ದೇವಾಲಯ, ಸರ್‌ಎಂವಿ ಕ್ರೀಡಾಂಗಣ, ಎಪಿಎಂಸಿಯಾರ್ಡ್‌ಗಳಲ್ಲಿ ವ್ಯಾಪಾರಕ್ಕೆ ಸ್ಥಳ ನಿಗದಿಪಡಿಸಲಾಗಿದೆ.ಆದರೆ ಯಾವ ಕಡೆ ಹೋಗಿ ವ್ಯಾಪಾರ ಮಾಡಬೇಕುಎಂಬ ಗೊಂದಲ ಮುಂದುವರಿದಿದೆ.
ಒಂದು ಕಡೆ ಹೋದರೆ ಇನ್ನೊಂದು ಕಡೆ ಹೋಗಿಎಂದು ಪೊಲೀಸರು ಹೇಳುತ್ತಲೇ ಇರುತ್ತಾರೆ. ಸೊಪ್ಪು,ತರಕಾರಿ ದನಗಳ ಪಾಲಾಗುತ್ತಿದೆ. ಆದ್ದರಿಂದ ಹೆಚ್ಚುವರಿಗಂಟೆ ವ್ಯಾಪಾರಕ್ಕೆ ಅವಕಾಶ ನೀಡಬೇಕು ಎಂದು ಸೊಪ್ಪುವ್ಯಾಪಾರಿ ಪುಟ್ಟಗೌರಮ್ಮ ಅಳಲು ತೋಡಿಕೊಳ್ಳುತ್ತಾರೆ.
ಅನುಕೂಲ ಕಲ್ಪಿಸಲು ಮನವಿ:4-5 ದಿನಗಳಿಂದ ಇದೇಪರಿಸ್ಥಿತಿ ಮುಂದುವರಿದಿದೆ. ಎಪಿಎಂಸಿ ಯಾರ್ಡ್‌ಗೆಹೆಚ್ಚಾಗಿ ಗ್ರಾಹಕರು ಬರಲ್ಲ. ತರಕಾರಿ, ಸೊಪ್ಪುಗಳನ್ನುಅಲ್ಲಿಂದ ಇಲ್ಲಿಗೆ, ಇಲ್ಲಿಂದ ಅಲ್ಲಿಗೆ ಸಾಗಿಸುವುದೇಬಹಳ ಕಷ್ಟ. ಒಂದೇ ಕಡೆ ನಿಗದಿ ಮಾಡಿ ವ್ಯಾಪಾರಮಾಡಲು ಅನುಕೂಲ ಕಲ್ಪಿಸಬೇಕು ಎಂದುವ್ಯಾಪಾರಸ್ಥ ರಮೇಶ್ ಹೇಳುತ್ತಾರೆ.ಮನೆಯಲ್ಲಿಯೇ ಉಳಿದ ಜನಕೊರೊನಾ ನಿಯಂತ್ರಣಕ್ಕಾಗಿ ರಾಜ್ಯ ಸರ್ಕಾರ ಘೋಷಿಸಿರುವ ಲಾಕ್‌ಡೌನ್‌ನ 2ನೇ ದಿನ ಮಂಡ್ಯ ಜಿಲ್ಲೆಯಲ್ಲಿ ಜನಮನೆಯಿಂದ ಹೊರಗೆ ಬರದೆ ಲಾಕ್ ಆಗಿದ್ದಾರೆ.
ಮಂಡ್ಯನಗರ ಸೇರಿ ಮದ್ದೂರು, ಪಾಂಡವಪುರ, ಶ್ರೀರಂಗಪಟ್ಟಣ,ಮಳವಳ್ಳಿ, ಕೆ.ಆರ್.ಪೇಟೆ, ನಾಗಮಂಗಲ ತಾಲೂಕಿನಪಟ್ಟಣಗಳಲ್ಲೂ ಜನ ಲಾಕ್‌ಡೌನ್‌ಗೆ ಸಹಕರಿಸಿದ್ದಾರೆ.ಎಂದಿನಂತೆ ಅಂಗಡಿ-ಮುಂಗಟ್ಟು ಮುಚ್ಚಿದ್ದವು.ಸೋಮವಾರದಿಂದಲೂ ಅಗತ್ಯ ಸೇವೆಗಳ ಅಂಗಡಿಹೊರತುಪಡಿಸಿ ಉಳಿದ ಯಾವ ವರ್ತಕರು ಅಂಗಡಿಗಳಬಾಗಿಲು ತೆಗೆಯದೆ ಲಾಕ್‌ಡೌನ್ ಸಹಕರಿಸುತ್ತಿದ್ದಾರೆ.