Advertisement

ಲಾಕ್ ಡೌನ್: ನರೇಗಾದಲ್ಲಿ ಕೂಲಿ ಕೆಲಸ ಮಾಡಿ ಮಾದರಿಯಾದ ಸಿವಿಲ್ ಇಂಜಿನಿಯರ್, ಪ್ರವಾಸಿಗೈಡ್ಸ್

12:43 PM May 27, 2020 | sudhir |

ಗಂಗಾವತಿ: ಕೊವಿಡ್ -19 ರೋಗ ಹರಡದಂತೆ ಜಾರಿಗೊಳಿಸಿದ ಲಾಕ್ ಡೌನ್ ಹಿನ್ನೆಲೆಯಲ್ಲಿ ವಲಸೆ ಹೋಗಿ ವಿವಿಧ ಕಂಪನಿ ಮತ್ತು ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದವರು ಊರಿಗೆ ಮರಳಿ ಖಾಲಿ ಇರದೇ ಸರಕಾರ ಅನುಷ್ಠಾನಗೊಳಿಸಿರುವ ಮಹಾತ್ಮಗಾಂಧಿ ನರೇಗಾ ಯೋಜನೆಯ ವಿವಿಧ ಕಾಮಗಾರಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ತಾಲೂಕಿನ ಹೊಸ್ಕೇರಿ ಗ್ರಾ.ಪಂ.ವ್ಯಾಪ್ತಿಯಲ್ಲಿ ಬೆಂಗಳೂರು ಖಾಸಗಿ ಕಂಪನಿಯಲ್ಲಿ ಸಿವಿಲ್ ಇಂಜಿನಿಯರ್ ಆಗಿರುವ ವಿನೋದ ನಾಯಕ ಮತ್ತು ಕಳೆದ‌ 20 ವರ್ಷ ಹಂಪಿಯಲ್ಲಿ ಪ್ರವಾಸಿ ಮಾರ್ಗದರ್ಶಕ(ಗೈಡ್) ಕೆಲಸ ಮಾಡುತ್ತಿರುವ ಹೊಸ್ಕೇರಿ ಮಲ್ಲಿಕಾರ್ಜುನ ಮತ್ತು ಪದವಿ ಮಹಾವಿದ್ಯಾಲಯದಲ್ಲಿ ಪದವಿ ಅಂತಿಮ ಸೆಮಿಸ್ಟರ್ ಓದುತ್ತಿರುವವರು ಕಳೆದ ಒಂದು ತಿಂಗಳಿಂದ ಹೊಸ್ಕೇರಿ ಗ್ರಾ.ಪಂ ಸುತ್ತಲು ನರೇಗಾ ಯೋಜನೆ ಕೂಲಿಕೆಲಸದಲ್ಲಿ ಕೂಲಿಗಾರರ ಜತೆ ಪಾಲ್ಗೊಂಡು ಕಾಲುವೆ ಹೂಳು ತೆಗೆಯುವ ಕೆಲಮಾಡುತ್ತಿದ್ದಾರೆ.

Advertisement

ನರೇಗಾದಲ್ಲಿ ಕೆಲಸ ಮಾಡುವುದು ಖುಷಿಯಾಗಿದೆ: ಕೊವಿಡ್-19 ರೋಗದ ಹಿನ್ನೆಲೆಯಲ್ಲಿ ಕಂಪನಿ ಲಾಕ್ ಡೌನ್ ಮಾಡಲಾಗಿದೆ. ಕೆಲಸ ಇಲ್ಲದೇ ಇರುವ ಕಾರಣ ವಾಪಸ್ ಊರಿಗೆ ಬಂದಿದ್ದು ಮನೆಯಲ್ಲಿ ಖಾಲಿ ಇರದೇ ನರೇಗಾ ಯೋಜನೆ ಕೂಲಿ ಕೆಲಸಕ್ಕೆ ಹೊರಟಿದ್ದು ಈ ಮೊದಲು ಗದ್ದೆಗಳಲ್ಲಿ ಕೆಲಸ ಮಾಡಿದ ಅನುಭವ ಇರುವುದರಿಂದ ತೊಂದರೆಯಾಗಿಲ್ಲ. ನರೇಗಾ ಯೋಜನೆಯಿಂದ ಸಮಗ್ರ ಅಭಿವೃದ್ಧಿ ಸಾಧ್ಯ. ಅನುಷ್ಠಾನ ಮಾಡುವವರು ಪ್ರಾಮಾಣಿಕರಾಗಿರಬೇಕೆಂದು‌ ಸಿವಿಲ್ ಇಂಜಿನಿಯರ್ ವಿನೋದ ನಾಯಕ ಉದಯವಾಣಿ ಗೆ ತಿಳಿಸಿದ್ದಾರೆ .

Advertisement

Udayavani is now on Telegram. Click here to join our channel and stay updated with the latest news.

Next