Advertisement
ಎಲ್ಲ ರಾಜಕೀಯ ಪಕ್ಷಗಳೂ ಸರಕಾರದ ಯೋಜನೆಗೆ ಸಮ್ಮತಿಸಿದ್ದು, ಮೂರು ಹಂತದಲ್ಲಿ ಎಲ್ಲ ನಿರ್ಬಂಧಗಳನ್ನು ತೆಗೆದುಹಾಕಲು ನಿರ್ಧರಿಸಲಾಗಿದೆ. ಇದರೊಂದಿಗೇ ಪ್ರತಿ ಹಂತದ ವಿನಾಯಿತಿ ಘೋಷಣೆ ಬಳಿಕ ಮತ್ತೂಂದು ಹಂತದ ವಿನಾಯಿತಿ ನೀಡುವವರೆಗೆ ಕೂಲಂಕಷವಾಗಿ ಅಧ್ಯಯನ ಮಾಡಿ ಮುಂದಿನ ತೀರ್ಮಾನ ಕೈಗೊಳ್ಳಲೂ ನಿರ್ಧರಿಸಲಾಗಿದೆ.ಯೋಜನೆಯಂತೆ ಸುಸೂತ್ರವಾಗಿ ನಡೆದರೆ ಜೂನ್ 8 ರೊಳಗೆ ದೇಶದಲ್ಲಿ ಬಹುತೇಕ ಲಾಕ್‌ಡೌನ್ ನಿರ್ಬಂಧಗಳು ತೆರವಾಗಲಿವೆ.
ಸಾಮಾಜಿಕ ಅಂತರ ಪಾಲನೆಯ ಜತೆಗೆ ಈಗಾಗಲೇ ಸೂಚಿಸಲಾಗಿರುವ ಸುರಕ್ಷಾ ನಿಯಮಗಳನ್ನು ಜನರು ತಪ್ಪದೇ ಪಾಲಿಸಬೇಕು ಎಂದಿರುವ ಸರಕಾರ, ಜೂನ್ 8 ರ ಬಳಿಕ ಸುಮಾರು 50 ಮಂದಿ ಸೇರಲು ಅವಕಾಶ ಸಿಗಲಿದೆ. ಆದರೆ 500 ಮಂದಿ ಸೇರಿ ಕಾರ್ಯಕ್ರಮ ಇತ್ಯಾದಿ ಮಾಡಲು ಅನುಮತಿ ಸಿಗಬೇಕೆಂದರೆ ಆಗಸ್ಟ್ 31 ರವರೆಗೆ ಕಾಯಬೇಕು ಎಂದು ತಿಳಿಸಿದೆ. ಡೆನ್ಮಾರ್ಕ್‌ನಲ್ಲಿ ಇದುವರೆಗೆ 10, 218 ಪ್ರಕರಣಗಳು ಪತ್ತೆಯಾಗಿವೆ. ಈ ಪೈಕಿ 522 ಮಂದಿ ಮೃತರಾಗಿದ್ದು, 7, 927 ಮಂದಿ ಗುಣಮುಖರಾಗಿದ್ದಾರೆ. ಯುರೋಪಿನ ಹಲವು ರಾಷ್ಟ್ರಗಳಿಗೆ ಹೋಲಿಸಿದರೆ ಡೆನ್ಮಾರ್ಕ್ ಬಹಳ ಬೇಗನೇ ಲಾಕ್‌ಡೌನ್ ನಿರ್ಬಂಧಗಳನ್ನು ಜಾರಿಗೊಳಿಸಿತ್ತು. ಮಾರ್ಚ್ 11 ರ ವೇಳೆಗೆ ಹೆಚ್ಚು ಜನ ಕೂಡುವುದನ್ನು ನಿಷೇಧಿಸಿತ್ತು. ಸಾರ್ವಜನಿಕ ಕಾರ್ಯಕ್ರಮಗಳನ್ನು ಆಯೋಜಿಸದಂತೆ ಸೂಚಿಸಿತ್ತು. ಪ್ರಜೆಗಳಿಗೆ ಮನೆಯಲ್ಲೇ ಇರುವಂತೆ ಸೂಚಿಸಲಾಗಿತ್ತು.