ನೆಲಮಂಗಲ: ಕೋವಿಡ್ 19 ಆತಂಕದಲ್ಲಿ ಆರ್ಥಿಕತೆಯ ವಿಚಾರವನ್ನು ಗಮನದಲ್ಲಿಟ್ಟು ಕೊಂಡು ಎಸ್‌ಎಸ್ ಎಲ್‌ಸಿ ಪರೀಕ್ಷೆ ಮುಕ್ತಾ ಯವಾದ ನಂತರ ಲಾಕ್‌ಡೌನ್ ತೀರ್ಮಾನ ಮಾಡಲಾಗುತ್ತದೆ ಎಂದು ಶಾಸಕ ಡಾ.ಕೆ ಶ್ರೀನಿವಾಸಮೂರ್ತಿ ತಿಳಿಸಿದರು. ತಾಲೂಕಿನ ವಸಂತನಗರದಲ್ಲಿ ಸಮಾಜ ಕಲ್ಯಾಣ ಇಲಾಖೆಯಿಂದ ಅಲೆಮಾರಿ ಸಮು ದಾಯದ ಜನರಿಗೆ ದಿನಸಿ ಕಿಟ್ ವಿತರಣೆ ಮಾಡಿ ಮಾತನಾಡಿದರು.
ಡೀಸಿಯವರ ಮಾರ್ಗದರ್ಶನದಂತೆ ಆರ್ಥಿಕತೆ ದೃಷ್ಟಿ ಯಿಂದ ತಡ ಮಾಡಲಾಗುತಿದೆ . ಪರೀಕ್ಷೆ ಮುಕ್ತಾಯ ವಾದ ನಂತರ ತಾಲೂಕು ಅಧಿಕಾರಿಗಳ ಜತೆ ಚರ್ಚೆ ಮಾಡಿ ಲಾಕ್ ಡೌನ್ ಮಾಡಲಾಗುತ್ತದೆ ಎಂದರು. ಗ್ರಾಪಂ ಸದಸ್ಯ ಜಿ.ಎಚ್.ಗೌಡ್ರು ಮಾತ ನಾಡಿ, ವಸಂತನಗರದಲ್ಲಿ ಅಲೆಮಾರಿ ಸಮು ದಾಯ ವಾಸಿಸುತ್ತಿದ್ದು ಕೋವಿಡ್ 19 ಆರಂಭ ವಾದ ನಂತರ ಜೀವನ ನಡೆಸಲು ಬಹಳ ಕಷ್ಟವಾಗಿತ್ತು. ನಮ್ಮ ಕೈಲಾದ ಸಹಾಯವನ್ನು ನಾವು ಸಹ ಮಾಡಿದ್ದೇವೆ ಎಂದರು.
ಕಿಟ್ ವಿತರಣೆ: ತಾಲೂಕಿನ ಗುರುನಹಳ್ಳಿ, ವಸಂತನಗರದ 70 ಅಲೆಮಾರಿ ಕುಟುಂಬಗಳಿಗೆ 70ಕ್ಕೂ ಹೆಚ್ಚು ದಿನಸಿ ಕಿಟ್‌ಗಳನ್ನು ಸಮಾಜ ಕಲ್ಯಾಣ ಇಲಾಖೆಯಿಂದ ನೀಡಲಾಯಿತು. ಸಮಾಜ ಕಲ್ಯಾಣ ಇಲಾಖೆ ಸಹಾ ಯಕ ನಿರ್ದೇಶಕ ಮಹಮದ್ ಸೈರತ್ ಹುಲ್ಲಾ ಅಧಿಕಾರಿ ಮಂಜುನಾಥ್, ಗ್ರಾಪಂ ಸದಸ್ಯ ನಾಗೇಶ್ ಇದ್ದರು.
ಸೀಲ್‌ಡೌನ್: ಕೋವಿಡ್ 19 ಪಾಸಿಟಿವ್ ಪ್ರಕ ರಣಗಳಿರುವ ಬಡಾವಣೆ ಹಾಗೂ ಗ್ರಾಮ ವನ್ನು ಸೀಲ್ ಡೌನ್ ಮಾಡಲಾಗಿದ್ದು ತಹಶೀ ಲ್ದಾರ್ ಚಾಲಕನಿಗೆ ಪಾಸಿಟಿವ್ ಬಂದ ಹಿನ್ನೆಲೆ ಯಲ್ಲಿ ಅಧಿಕಾರಿಗಳು ಆತಂಕದಲ್ಲಿರುವುದರಿಂದ ವ್ಯವಸ್ಥೆಯಲ್ಲಿ ಸ್ವಲ್ಪ ಕಷ್ಟವಾಗುತಿದ್ದು ಸರಿಪಡಿಸಲಾಗುತ್ತದೆ ಎಂದರು.
ಸ್ವಯಂ ಕ್ವಾರಂಟೈನ್: ತಹಶೀಲ್ದಾರ್ ಕಾರು ಚಾಲಕನಿಗೆ ಕೋವಿಡ್ 19 ಪಾಸಿಟಿವ್ ಬಂದ ಹಿನ್ನೆಲೆಯಲ್ಲಿ ತಹಶೀಲ್ದಾರ್ ಶ್ರೀನಿವಾಸ್ ಮಾದರಿ ಪರೀಕ್ಷೆಯ ವರದಿ ಬರುವ ತನಕ ಸ್ವಯಂ ಕ್ವಾರಂಟೈನ್‌ನಲ್ಲಿದ್ದಾರೆ.