Advertisement
ಬಿಜೆಪಿ ರಾಜ್ಯಾಧ್ಯಕ್ಷ ಸಂಸದ ನಳಿನ್ ಕುಮಾರ್ ಕಟೀಲು ಕಿಟ್‌ಗಳನ್ನು ವಿತರಿಸಿ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿಯವರು ಜಾರಿಗೊಳಿಸಿದ ಲಾಕ್‌ಡೌನ್ ಮತ್ತು ಅದಕ್ಕೆ ಜನರು ನೀಡಿದ ಸಹಕಾರಗಳಿಂದಾಗಿ ಸಂಪೂರ್ಣ ನಿಯಂತ್ರ ಣದಲ್ಲಿದೆ. ಜಾಗೃತಿಯ ದೃಷ್ಟಿಯಿಂದ ಲಾಕ್‌ಡೌನ್ ಮುಂದುವರಿಸಲಾಗಿದೆ ಎಂದರು.
ಕೇಂದ್ರ ಸರಕಾರವು 1.70 ಸಾವಿರ ಕೋಟಿ ರೂ. ಅನುದಾನ ಮೀಸಲಿಟ್ಟು ಅದರಲ್ಲಿ ಜನಸಾಮಾನ್ಯರ ಕಣ್ಣೀರು ಒರೆಸುವ ಕೆಲಸ ಮಾಡುತ್ತಿದೆ. ರೇಷನ್ ಕಾರ್ಡ್‌ನಲ್ಲಿ ಉಚಿತ ಅಕ್ಕಿ ವಿತರಣೆ, ಕಿಸಾನ್ ಕಾರ್ಡ್‌ದಾರರಿಗೆ ಹಣಕಾಸು ನೆರವು, ಕಟ್ಟಡ ಕಾರ್ಮಿಕರಿಗೆ ನೆರವು, ಬ್ಯಾಂಕ್ ಸಾಲಗಾರರಿಗೆ ಬಡ್ಡಿ ವಿನಾಯಿತಿ ಯೋಜನೆ ಇಂತಹ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ರಾಜ್ಯ ಸರಕಾರವೂ ರೈತರ ಹಾಲು ಖರೀದಿ, ರೇಷನ್ ವಿತರಣೆ, ಬಾಡಿಗೆ ಕೇಳದಂತೆ ಮನವಿ, ವಿದ್ಯುತ್ ಬಿಲ್ ಅವಧಿ ವಿಸ್ತರಣೆ, ರೈತರಿಗೆ ವಿಶೇಷ ಸೌಲಭ್ಯಗಳನ್ನು ನೀಡುವ ಕೆಲಸ ಮಾಡಿದೆ ಎಂದರು. ಜಿಲ್ಲೆಯಲ್ಲಿ 16,500 ಮಂದಿಗೆ ಊಟ
ಪಕ್ಷದ ವತಿಯಿಂದ ಜಿಲ್ಲೆಯಲ್ಲಿ 16,500 ಮಂದಿಗೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರ ಸಹಕಾರದಲ್ಲಿ ಪ್ರತಿದಿನ ಊಟವನ್ನು ನೀಡಲಾಗುತ್ತಿದೆ. ಅಲ್ಲದೆ ಮನೆ ಮನೆಗಳಿಗೆ ಉಚಿತ ಆಹಾರ ಕಿಟ್ ವಿತರಿಸಲಾಗುತ್ತಿದೆ ಎಂದರು.
Related Articles
ಶಾಸಕ ಸಂಜೀವ ಮಠಂದೂರು ಮಾತ ನಾಡಿ, ಎಲ್ಲರಿಗೂ ಮೂರು ಹೊತ್ತಿನ ಅನ್ನ ಸಿಗುವಂತಾಗಬೇಕು ಎನ್ನುವ ನಿಟ್ಟಿನಲ್ಲಿ ಉಳ್ಳವರು ಇಲ್ಲದವರಿಗೆ ಸಹಾಯ ನೀಡಬೇಕು ಎಂಬ ಪ್ರಧಾನ ಮಂತ್ರಿಗಳ ಸಂದೇಶಕ್ಕೆ ಪೂರಕ ವಾಗಿ ವಾರ್‌ರೂಂ ಮೂಲಕ ಕಿಟ್ ವಿತರಣೆ ಮಾಡಲಾಗುತ್ತಿದೆ. ಈ ತನಕ ಪುತ್ತೂರು ವಿಧಾನಸಭೆ ಕ್ಷೇತ್ರದ 7,200 ಕುಟುಂಬಗಳಿಗೆ ಮಾನದಂಡದ ಅಡಿಯಲ್ಲಿ ಊಟವನ್ನು ಒದಗಿ ಸಲಾಗಿದೆ. ಆಶಾ, ಅಂಗನವಾಡಿ, ಸ.ಆಸ್ಪತ್ರೆ, ಪ್ರಾ., ಸಮುದಾಯ ಆರೋಗ್ಯ ಕೇಂದ್ರದ 400ಕ್ಕೂ ಅಧಿಕ ಕಾರ್ಯಕರ್ತರು, ಸಿಬಂದಿಗೆ ಈಗಾಗಲೇ ಅಕ್ಕಿ, ಇತರ ಆಹಾರ, ತರಕಾರಿಗಳನ್ನು ಒಳಗೊಂಡ ಕಿಟ್‌ಗಳ ವಿತರಣೆ ಮಾಡಲಾಗಿದೆ. ಪುತ್ತೂರು, ಉಪ್ಪಿನಂಗಡಿ ದೇಗುಲ, ಉಪ್ಪಿನಂಗಡಿ ಇಂದ್ರಪ್ರಸ್ಥ ವಿದ್ಯಾ ಲಯ ಇವುಗಳ ಸಹಯೋಗದಲ್ಲಿ 2 ಲಕ್ಷ ರೂ.ಗೂ ಅಧಿಕ ಮೊತ್ತದ ಕಿಟ್‌ಗಳನ್ನು ವಿತರಣೆ ಮಾಡಲಾಗಿದೆ ಎಂದರು.
Advertisement